ಗೂಗಲ್‌ನಿಂದ ಸೆಪ್ಟೆಂಬರ್ ಆಂಡ್ರಾಯ್ಡ್ ಡ್ರಾಪ್ : ಇಟ್ಟ ವಸ್ತು ನೆನಪಿಡುವ AI

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಹೊಸ ಕೊಡುಗೆ ನೀಡಿದೆ. ಸೆಪ್ಟೆಂಬರ್ ಆಂಡ್ರಾಯ್ಡ್ ಡ್ರಾಪ್ ಮೂಲಕ ಮೊಬೈಲ್‌ ಬಳಕೆಯನ್ನು ಇನ್ನಷ್ಟು ಈಸಿ ಮಾಡಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

2 min read

WhatsAppPost
Google September Android Drop 5 new Features
Google September Android Drop 5 new Features

ನವದೆಹಲಿ : ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಹೊಸ ಕೊಡುಗೆ ನೀಡಿದೆ. ಸೆಪ್ಟೆಂಬರ್ ಆಂಡ್ರಾಯ್ಡ್ ಡ್ರಾಪ್ ಮೂಲಕ ಮೊಬೈಲ್‌ ಬಳಕೆಯನ್ನು ಇನ್ನಷ್ಟು ಈಸಿ ಮಾಡುವ ಹೊಸ ಐದು ಫೀಚರ್‌ಗಳನ್ನು ಗೂಗಲ್ ಬಿಡುಗಡೆ ಮಾಡಿದೆ. ಇನ್ಮುಂದೆ Gemini AI, Find Hub, Motion Assist, Guided vision ಸೇರಿದಂತೆ ಹಲವು ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಲಿದೆ.

ಇಟ್ಟ ವಸ್ತು ಮರೆತಿದ್ರೆ ನೆನಪಿಸುತ್ತೆ Gemini

ನಿಮ್ಮ ಯಾವುದೇ ವಸ್ತುಗಳನ್ನು ಮನೆ, ಕಚೇರಿಯಲ್ಲಿ ಪಾಸ್‌ಪೋರ್ಟ್, ಕೀಲಿ, ವಾಲೆಟ್ ಸೇರಿದಂತೆ ಯಾವುದೇ ವಸ್ತುಗಳನ್ನು ಇಟ್ಟು ಒಂದೊಮ್ಮೆ ನೀವು ಮರೆತಿದ್ರೆ ಅವುಗಳನ್ನು ಇನ್ಮುಂದೆ ಗೂಗಲ್‌ ನೆನಪಿಸುತ್ತೆ. ಜೆಮಿನಿಗೆ ನೀವು ಯಾವ ವಸ್ತುವನ್ನು ಎಲ್ಲಿ ಇಟ್ಟಿದ್ದೀರಿ ಎಂದು ಹೇಳಿದ್ರೆ, ನೀವು ನೀಡಿದ ಮಾಹಿತಿಯನ್ನು Find Hubನಲ್ಲಿ ಉಳಿಸಲು ಇನ್ಮುಂದೆ ಅವಕಾಶವಿದೆ.

ಒಂದೊಮ್ಮೆ ನಿಮ್ಮ ಪಾಸ್‌ಪೋರ್ಟ್‌ನ್ನು ಬೆಡ್‌ರೂಮ್‌ನ ಡ್ರಾಯರ್‌ನಲ್ಲಿ ಇಟ್ಟಿದ್ದೇನೆ ಎಂದು Geminiಗೆ ನೀವು ಹೇಳಿದ್ರೆ, ನಂತರದಲ್ಲಿ ಆ ವಸ್ತು ಎಲ್ಲಿದೆ ಎಂದು ಕೇಳಿದಾಗ, Gemini ಆ ಮಾಹಿತಿಯನ್ನು ನೆನಪಿಸಿ ಕೊಡಲಿದೆ. ಅಗತ್ಯವಿದ್ದರೆ ವಸ್ತುವಿನ ಫೋಟೋವನ್ನೂ ಕೂಡ ಸೇರಿಸುವುದಕ್ಕೆ ಅವಕಾಶವಿದೆ. ಸದ್ಯ ಈ ಫೀಚರ್ಸ್‌ ಆಂಡ್ರಾಯ್ಡ್‌ (Android 16) ಅಥವಾ ಉಳಿದ ಆವೃತ್ತಿಯ ಸಾಧನಗಳಲ್ಲಿ ಜೆಮಿನಿ (Gemini) ಮತ್ತು ಫೈಂಡ್‌ ಹಬ್‌ ( Find Hub) ಲಭ್ಯವಿರುವ ದೇಶಗಳಲ್ಲಿ ಬಳಸಲು ಸಾಧ್ಯವಾಗಲಿದೆ.

ಪ್ರಯಾಣದ ವೇಳೆ ಮೊಬೈಲ್‌ ನೋಡಿದ್ರೆ ವಾಕರಿಕೆ ತಪ್ಪಿಸುತ್ತೆ ಮೋಷನ್‌ ಅಸಿಸ್ಟ್‌ ( Motion Assist)

ಬಹುತೇಕರಿಗೆ ಬಸ್, ಕಾರುಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಮೊಬೈಲ್ ನೋಡಿದ್ರೆ ವಾಕರಿಕೆ ಮತ್ತು ತಲೆ ಸುತ್ತು ಬರೋದು ಸರ್ವೇ ಸಾಮಾನ್ಯ. ಆದರೆ ಇದನ್ನು ಕಡಿಮೆ ಮಾಡಲು ಗೂಗಲ್‌ ಅಸಿಸ್ಟ್‌ ಇನ್ಮುಂದೆ ವಾಕರಿಕೆಯನ್ನು ತಡೆಯಲು ಸಹಕಾರಿ ಮಾಡಲಿದೆ.

ಈ ಫೀಚರ್ಸ್‌ ಸಕ್ರೀಯಗೊಳಿಸಿದ್ರೆ ಮೊಬೈಲ್‌ ಪರೆದು ಮೇಲೆ ಸಣ್ಣ ಬಬಲ್‌ಗಳ ಓವರ್‌ ಲೇ ಕಾಣಿಸಿಕೊಳ್ಳುತ್ತದೆ. ವಾಹನದ ಚಲನೆಗೆ ಅನುಗುಣವಾಗಿ ಈ ಬಬಲ್‌ಗಳು ಚಲಿಸುತ್ತವೆ. ಕಣ್ಣುಗಳಿಗೆ ಕಾಣುವ ದೃಶ್ಯ ಮತ್ತು ದೇಹ ಅನುಭವಿಸುವ ಚಲನೆಯ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಮೊಷನ್‌ ಅಸಿಸ್ಟ್‌ (Motion Assist)ಅನ್ನು ಕ್ವಿಕ್‌ ಸೆಸ್ಟಿಂಗ್ಸ್ ( Quick Settings)ಗೆ ಸೇರಿಸುವುದಕ್ಕೆ ಅವಕಾಶವಿದೆ. ಬಬಲ್‌ಗಳ ಆಕಾರ, ಬಣ್ಣ ಮತ್ತು ಪಾರದರ್ಶಕತೆಯನ್ನೂ ಬಳಕೆದಾರರು ಬದಲಾಯಿಸಿಕೊಳ್ಳಬಹುದು. ಈ ಫೀಚರ್ Android 17 ಹೊಂದಿರುವ ಫೋನ್‌ಗಳಲ್ಲಿ ಲಭ್ಯವಾಗಲಿದೆ.

ದೃಷ್ಟಿ ಸಮಸ್ಯೆ ಇರುವವರಿಗೆ Guided vision

ಅಂಧರು ಮತ್ತು ಕಡಿಮೆ ದೃಷ್ಟಿ ಹೊಂದಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ Google Gemini Liveನಲ್ಲಿ Guided vision ಅನ್ನೋ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಬಳಕೆದಾರರು ತಮ್ಮ ಫೋನ್ ಕ್ಯಾಮೆರಾವನ್ನು ಯಾವುದಾದರೂ ವಸ್ತು ಅಥವಾ ಸುತ್ತಮುತ್ತಲಿನ ಪರಿಸರದ ಕಡೆಗೆ ತೋರಿಸಿದರೆ, Gemini Live ಅದರ ಬಗ್ಗೆ ಧ್ವನಿಯ ಮೂಲಕ ಮಾಹಿತಿಯನ್ನು ನೀಡಬಹುದಾಗಿದೆ.

ಆಹಾರದ ಪ್ಯಾಕೆಟ್‌ಗಳ ಮೇಲೆ ಬರೆದಿರುವ ಸಣ್ಣ ಅಕ್ಷರಗಳನ್ನು ಓದಲು, ಮಂದ ಬೆಳಕಿನಲ್ಲಿ ರೆಸ್ಟೋರೆಂಟ್‌ ಮೆನು ಅರ್ಥ ಮಾಡಿಕೊಳ್ಳಲು, ಮನೆಯ ವಸ್ತುಗಳನ್ನು ಗುರುತಿಸುವ ಸಂದರ್ಭದಲ್ಲಿ ಇದು ಸಹಾಯ ಮಾಡಲಿದೆ.

ಕ್ಯಾಮೆರಾ ಸರಿಯಾದ ದಿಕ್ಕಿನಲ್ಲಿ ಇಲ್ಲದಿದ್ದರೆ, ವಸ್ತುವನ್ನು ಫ್ರೇಮ್‌ನಲ್ಲಿ ಸರಿಯಾಗಿ ತೋರಿಸಲು ಧ್ವನಿ ಮಾರ್ಗದರ್ಶನವನ್ನೂ ನೀಡುತ್ತದೆ. ಗೈಡೆಡ್‌ ವಿಷನ್‌ ಆಂಡ್ರಾಯ್ಡ್‌ 9 (Guided vision Android 9) ಮತ್ತು ನಂತರದ ಸಾಧನಗಳಿಗೆ ಹಂತ ಹಂತವಾಗಿ ಲಭ್ಯವಾಗಲಿದೆ.

ಗೂಗಲ್‌ ಮೆಸೇಜ್‌ (Google Messages ) ನಲ್ಲೇ Keep Notes

ಇಷ್ಟೇ ಅಲ್ಲದೇ ಗೂಗಲ್‌ ಮೆಸೇಜ್‌ (Google Messages)ಬಳಕೆದಾರರು ಚಾಟ್‌ನಿಂದ ಹೊರಬರದೇ Google Keep ನೋಟ್ಸ್‌ಗಳನ್ನು ರಚಿಸಿ, ಹಂಚಿಕೊಂಡು ಎಡಿಟ್ ಮಾಡಬಹುದು. ಒಂದೊಮ್ಮೆ ಸ್ನೇಹಿತರ ಜೊತೆಗೆ ನೀವು ಪ್ರವಾಸದ ಪ್ಲಾನ್‌ ಮಾಡುತ್ತಿದ್ದರೆ, ಎಲ್ಲರೂ ಸೇರಿ ಒಂದೇ ನೋಟ್ಸ್‌ನಲ್ಲಿ ಸಂಪೂರ್ಣ ಟೂರ್‌ ಪ್ಲ್ಯಾನ್‌ ಮಾಡುವುದಕ್ಕೆ ಅವಕಾಶವಿದೆ. ಗೂಗಲ್‌ ಮೆಸೇಜ್‌ನಲ್ಲಿ ಆಯ್ಕೆಯ ವಿಭಾಗದಲ್ಲಿ ಗೂಗಲ್‌ ಕೀಪ್‌ ( Google Keep) ಅನ್ನು ಕೂಡ ಬಳಸುವುದಕ್ಕೆ ಅವಕಾಶವಿದೆ. ಅಲ್ಲದೇ ಈ ಫೀಚರ್ಸ್‌ ರೋಲ್‌ ಔಟ್‌ ಈಗಾಗಲೇ ಆರಂಭವಾಗಿದೆ.

ಚಾಟ್‌ಗೂ ಹೊಸ ಲುಕ್: Custom Background ಮತ್ತು Themes

Google Messagesನಲ್ಲಿ ಚಾಟ್‌ಗಳನ್ನು ಬಳಕೆದಾರರ ಇಷ್ಟಕ್ಕೆ ತಕ್ಕಂತೆ ಕಸ್ಟಮೈಸ್ ಮಾಡುವ ಆಯ್ಕೆಯೂ ಬಂದಿದೆ. ಪ್ರತಿ ಚಾಟ್‌ಗೆ ವಿಭಿನ್ನ ಹಿನ್ನೆಲೆ ಮತ್ತು ಬಣ್ಣಗಳನ್ನು ಆಯ್ಕೆ ಮಾಡಬಹುದು. ಬಳಕೆದಾರರು ತಮ್ಮದೇ ಫೋಟೋವನ್ನು ವಾಲ್‌ಪೇಪರ್ ಆಗಿಯೂ ಬಳಸಬಹುದು. ಆಯ್ಕೆ ಮಾಡಿದ ಹಿನ್ನೆಲೆಗೆ ಹೊಂದಿಕೊಳ್ಳುವಂತೆ ಟೆಕ್ಸ್ಟ್ ಬಬಲ್‌ಗಳ ಬಣ್ಣವೂ ಬದಲಾಗಲಿದೆ.

ಹೀಗಾಗಿ ಸ್ನೇಹಿತರು, ಕುಟುಂಬ ಅಥವಾ ಪ್ರವಾಸದ ಗ್ರೂಪ್‌ಗಳ ಪ್ರತಿಯೊಂದು ಚಾಟ್‌ಗೂ ಪ್ರತ್ಯೇಕ ಲುಕ್ ನೀಡಬಹುದು. Chat Theme ಫೀಚರ್ Google Messagesನಲ್ಲಿ ಲಭ್ಯವಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತಷ್ಟು ಸ್ಮಾರ್ಟ್ ಅನುಭವ

ಒಟ್ಟಿನಲ್ಲಿ, ಸೆಪ್ಟೆಂಬರ್ Android Drop ಮೂಲಕ ಗೂಗಲ್ ಮೊಬೈಲ್ ಬಳಕೆಯ ಹಲವು ದೈನಂದಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಿದೆ. ವಸ್ತುಗಳನ್ನು ಎಲ್ಲಿ ಇಟ್ಟಿದ್ದೇವೆ ಎಂಬುದನ್ನು ನೆನಪಿಸುವ Gemini ಆಧಾರಿತ Find Hub ಫೀಚರ್‌ನಿಂದ ಹಿಡಿದು ಪ್ರಯಾಣದ ವೇಳೆ ವಾಕರಿಕೆ ಕಡಿಮೆ ಮಾಡಲು ನೆರವಾಗುವ Motion Assist, ದೃಷ್ಟಿ ಸಮಸ್ಯೆ ಇರುವವರಿಗೆ Guided vision ಹಾಗೂ Google Messagesನ ಹೊಸ ಸಹಯೋಗ ಮತ್ತು ಕಸ್ಟಮೈಜೇಶನ್ ಆಯ್ಕೆಗಳವರೆಗೆ ಹಲವು ಅಪ್‌ಡೇಟ್‌ಗಳು ಬಳಕೆದಾರರಿಗೆ ಉಪಯುಕ್ತವಾಗಲಿವೆ.

ಆದರೆ Guided vision ತಪ್ಪು ಮಾಹಿತಿಯನ್ನು ನೀಡುವ ಸಾಧ್ಯತೆ ಇರುವುದರಿಂದ ಇದನ್ನು ನ್ಯಾವಿಗೇಷನ್, ಅಡೆತಡೆಗಳನ್ನು ಪತ್ತೆಹಚ್ಚುವುದು ಅಥವಾ ಸುರಕ್ಷಿತ ಪ್ರಯಾಣದ ಮಾರ್ಗದರ್ಶಿಗೆ ಪರ್ಯಾಯವಾಗಿ ಬಳಸಬಾರದು ಎಂದು ಗೂಗಲ್ ಎಚ್ಚರಿಸಿದೆ.

Topics

ಸಂಬಂಧಿತ ಸುದ್ದಿಗಳು