Kannada News Next

india

ಯುಪಿ ಸಿಎಂ ಯೋಗಿ ಆದಿತ್ಯ ನಾಥ್‌ಗೆ ಮದುವೆ ಆಮಂತ್ರಣ: ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಯುವತಿಯ ಪತ್ರ

ಕೇರಳದ ಆರುಂಧತಿ ಅವರ ವಿವಾಹ ರಾಹುಲ್‌ ಜೊತೆಗೆ ಡಿಸೆಂಬರ್‌ 20ಕ್ಕೆ ನಿಗದಿಯಾಗಿತ್ತು. ಕೇರಳದ ಆಲುವಾದಲ್ಲಿ ನಡೆಯಲಿರುವ ಗ್ರೀನ್‌ ಪಾರ್ಕ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆಯಲಿರುವ ಮದುವೆಗೆ

By ರಶ್ಮಿ ಎಸ್. | Rashmi S
kerala woman invites up cm yogi Adityanath wedding viral letter

ಕೇರಳದ ಯುವತಿಯೋರ್ವಳು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರನ್ನು ತನ್ನ ಮದುವೆಗೆ ಆಮಂತ್ರಿಸುವ ಮೂಲಕ ಸುದ್ದಿಯಾಗಿದ್ದಾಳೆ. ತನ್ನ ಸ್ವತಃ ಅಣ್ಣನೆಂದು ಬಾವಿಸಿಕೊಂಡಿರುವ ಈ ಯುವತಿ ಯೋಗಿ ಆದಿತ್ಯನಾಥ್‌ ಅವರನ್ನು ಮದುವೆ ಆಮಂತ್ರಿಸಿ ಆಶೀರ್ವಾದ ಮಾಡುವಂತೆ ಎರಡು ಪುಟಗಳ ಪತ್ರವನ್ನು ಬರೆದು, ಆಮಂತ್ರಣ ಪತ್ರವನ್ನು ಕಳುಹಿಸಿಕೊಟ್ಟಿದ್ದಾಳೆ.

ಕೇರಳದ ಆರುಂಧತಿ ಅವರ ವಿವಾಹ ರಾಹುಲ್‌ ಜೊತೆಗೆ ಡಿಸೆಂಬರ್‌ 20ಕ್ಕೆ ನಿಗದಿಯಾಗಿತ್ತು. ಕೇರಳದ ಆಲುವಾದಲ್ಲಿ ನಡೆಯಲಿರುವ ಗ್ರೀನ್‌ ಪಾರ್ಕ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆಯಲಿರುವ ಮದುವೆಗೆ ಅರುಂಧತಿ ಆಹ್ವಾನ ನೀಡಿದ್ದಾರೆ. ಯೋಗಿ ಆದಿತ್ಯನಾಥ್‌ ಕೇವಲ, ಓರ್ವ ರಾಜಕಾರಣಿಯಾಗಿ ಇರದೆ, ತಮ್ಮ ಜೀವನದಲ್ಲಿ ಅವರನ್ನೇ ಆದರ್ಶರನ್ನಾಗಿಸಿಕೊಂಡಿದ್ದಾರೆ.

ಬಾಲ್ಯದ ದಿನಗಳಲ್ಲಿಯೇ ಆಂದೋಲನ ಪತ್ರವನ್ನು ನೆನಪಿಸಿಕೊಂಡಿರುವ ಆರುಂಧತಿ ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರು ಹಾಕುತ್ತಿದ್ದರು. ಭಾವನಾತ್ಮಕವಾಗಿ ದುರ್ಬಲರಾಗಿದ್ದ ಅರುಂಧತಿಗೆ ತಮ್ಮ ಬಗ್ಗೆಯೇ ಕೀಳರಿಮೆ ಮೂಡಿತ್ತು. ತಮ್ಮ ಸಹೋದರ ಸಂಬಂಧಿಯೋರ್ವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಾರ್ವಜನಿಕ ಭಾಷಣದಲ್ಲಿ ಬಾವುಕರಾಗಿ ಕಣ್ಣೀರು ಹಾಕಿದ್ದರು. ಇದೇ ವಿಡಿಯೋ ಅರುಂಧತಿ ಬದುಕನ್ನೇ ಬದಲಾಯಿಸಿತ್ತು.

ಅಂದಿನಿಂದಲೇ ಯೋಗಿ ಅವರನ್ನೇ ತನ್ನ ಆದರ್ಶರನ್ನಾಗಿಸಿಕೊಂಡಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್‌ ಅವರನ್ನು ತನ್ನ ಮದುವೆಗೆ ಅರುಂಧತಿ ಆಹ್ವಾನಿಸಿದ್ದು, ದೇಶದಾದ್ಯಂತ ಬಾರೀ ಸುದ್ದಿ ಮಾಡಿದೆ. ನೀವು ಕೇವಲ ಒರ್ವ ನಾಯಕರಷ್ಟೇ ಅಲ್ಲಾ, ನನ್ನ ಜೀವನಕ್ಕೆ ಧೈರ್ಯ ಮತ್ತು ಸ್ಪೂರ್ತಿಯನ್ನು ತುಂಬಿದ್ದೀರಿ. ನನ್ನ ಸ್ವತಃ ಅಣ್ಣನ ಸ್ಥಾನದಲ್ಲಿ ನಿಮ್ಮನ್ನು ನೋಡುತ್ತಿದ್ದೇನೆ ಎಂದು ಭಾವುಕರಾಗಿ ಪತ್ರವನ್ನು ಬರೆದಿದ್ದಾರೆ.