ಯುಪಿ ಸಿಎಂ ಯೋಗಿ ಆದಿತ್ಯ ನಾಥ್ಗೆ ಮದುವೆ ಆಮಂತ್ರಣ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಯುವತಿಯ ಪತ್ರ
ಕೇರಳದ ಆರುಂಧತಿ ಅವರ ವಿವಾಹ ರಾಹುಲ್ ಜೊತೆಗೆ ಡಿಸೆಂಬರ್ 20ಕ್ಕೆ ನಿಗದಿಯಾಗಿತ್ತು. ಕೇರಳದ ಆಲುವಾದಲ್ಲಿ ನಡೆಯಲಿರುವ ಗ್ರೀನ್ ಪಾರ್ಕ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿರುವ ಮದುವೆಗೆ
ಕೇರಳದ ಯುವತಿಯೋರ್ವಳು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರನ್ನು ತನ್ನ ಮದುವೆಗೆ ಆಮಂತ್ರಿಸುವ ಮೂಲಕ ಸುದ್ದಿಯಾಗಿದ್ದಾಳೆ. ತನ್ನ ಸ್ವತಃ ಅಣ್ಣನೆಂದು ಬಾವಿಸಿಕೊಂಡಿರುವ ಈ ಯುವತಿ ಯೋಗಿ ಆದಿತ್ಯನಾಥ್ ಅವರನ್ನು ಮದುವೆ ಆಮಂತ್ರಿಸಿ ಆಶೀರ್ವಾದ ಮಾಡುವಂತೆ ಎರಡು ಪುಟಗಳ ಪತ್ರವನ್ನು ಬರೆದು, ಆಮಂತ್ರಣ ಪತ್ರವನ್ನು ಕಳುಹಿಸಿಕೊಟ್ಟಿದ್ದಾಳೆ.
ಕೇರಳದ ಆರುಂಧತಿ ಅವರ ವಿವಾಹ ರಾಹುಲ್ ಜೊತೆಗೆ ಡಿಸೆಂಬರ್ 20ಕ್ಕೆ ನಿಗದಿಯಾಗಿತ್ತು. ಕೇರಳದ ಆಲುವಾದಲ್ಲಿ ನಡೆಯಲಿರುವ ಗ್ರೀನ್ ಪಾರ್ಕ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿರುವ ಮದುವೆಗೆ ಅರುಂಧತಿ ಆಹ್ವಾನ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಕೇವಲ, ಓರ್ವ ರಾಜಕಾರಣಿಯಾಗಿ ಇರದೆ, ತಮ್ಮ ಜೀವನದಲ್ಲಿ ಅವರನ್ನೇ ಆದರ್ಶರನ್ನಾಗಿಸಿಕೊಂಡಿದ್ದಾರೆ.
ಬಾಲ್ಯದ ದಿನಗಳಲ್ಲಿಯೇ ಆಂದೋಲನ ಪತ್ರವನ್ನು ನೆನಪಿಸಿಕೊಂಡಿರುವ ಆರುಂಧತಿ ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರು ಹಾಕುತ್ತಿದ್ದರು. ಭಾವನಾತ್ಮಕವಾಗಿ ದುರ್ಬಲರಾಗಿದ್ದ ಅರುಂಧತಿಗೆ ತಮ್ಮ ಬಗ್ಗೆಯೇ ಕೀಳರಿಮೆ ಮೂಡಿತ್ತು. ತಮ್ಮ ಸಹೋದರ ಸಂಬಂಧಿಯೋರ್ವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾರ್ವಜನಿಕ ಭಾಷಣದಲ್ಲಿ ಬಾವುಕರಾಗಿ ಕಣ್ಣೀರು ಹಾಕಿದ್ದರು. ಇದೇ ವಿಡಿಯೋ ಅರುಂಧತಿ ಬದುಕನ್ನೇ ಬದಲಾಯಿಸಿತ್ತು.
ಅಂದಿನಿಂದಲೇ ಯೋಗಿ ಅವರನ್ನೇ ತನ್ನ ಆದರ್ಶರನ್ನಾಗಿಸಿಕೊಂಡಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ ಅವರನ್ನು ತನ್ನ ಮದುವೆಗೆ ಅರುಂಧತಿ ಆಹ್ವಾನಿಸಿದ್ದು, ದೇಶದಾದ್ಯಂತ ಬಾರೀ ಸುದ್ದಿ ಮಾಡಿದೆ. ನೀವು ಕೇವಲ ಒರ್ವ ನಾಯಕರಷ್ಟೇ ಅಲ್ಲಾ, ನನ್ನ ಜೀವನಕ್ಕೆ ಧೈರ್ಯ ಮತ್ತು ಸ್ಪೂರ್ತಿಯನ್ನು ತುಂಬಿದ್ದೀರಿ. ನನ್ನ ಸ್ವತಃ ಅಣ್ಣನ ಸ್ಥಾನದಲ್ಲಿ ನಿಮ್ಮನ್ನು ನೋಡುತ್ತಿದ್ದೇನೆ ಎಂದು ಭಾವುಕರಾಗಿ ಪತ್ರವನ್ನು ಬರೆದಿದ್ದಾರೆ.
Topics
ಸಂಬಂಧಿತ ಸುದ್ದಿಗಳು
india
ಕೋಲ್ಕತ್ತಾ ದುರ್ಗಾಪೂಜೆ ಪೆಂಡಾಲ್ ಕಾಲ್ತುಳಿತ : 19 ಮಂದಿ ಸಾವು, 7 ಮಂದಿ ಬಂಧನ
india
2027ರ ಐಪಿಎಲ್ಗೆ ಸಜ್ಜಾದ ಗೋವಾ : ಡಿಸೆಂಬರ್ 16ಕ್ಕೆ ಹರಾಜು ಡೇಟ್ ಫಿಕ್ಸ್
india
ನವರಾತ್ರಿ ಗಿಫ್ಟ್: 137 ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರೀ ಇಳಿಕೆ; ನ.9ರಿಂದ ಹೊಸ ದರ ಜಾರಿ
india

