indiaಪ್ರಮುಖ ಸುದ್ದಿಗಳು

ಕೋಲ್ಕತ್ತಾ ದುರ್ಗಾಪೂಜೆ ಪೆಂಡಾಲ್‌ ಕಾಲ್ತುಳಿತ : 19 ಮಂದಿ ಸಾವು, 7 ಮಂದಿ ಬಂಧನ

ಉತ್ತರ ಕೋಲ್ಕತ್ತಾದಲ್ಲಿ ಚೋರ್‌ ಬಗಾನ್‌ ಅತ್ಯಂತ ಪ್ರಸಿದ್ದವಾಗಿರುವ ದುರ್ಗಾ ಪೂಜಾ ಸ್ಥಳ. ನವರಾತ್ರಿಯ ಏಳನೇ ದಿನವಾದ ಶನಿವಾರ ಜನರು ನುಗ್ಗುವುದಕ್ಕೆ ಯತ್ನಿಸಿದ್ದಾರೆ

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Kolkata durga puja pandal stampede 19 dead 7 arrested
Kolkata durga puja pandal stampede 19 dead 7 arrested

ಕೋಲ್ಕತ್ತಾ : ಚೋರ್‌ ಬಗಾನ್‌ ದುರ್ಗಾ ಪೂಜೆಯ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟಕರು ಒಳಗೊಂಡು ಒಟ್ಟು 7 ಮಂದಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಲುವಾಗಿ ಕೋಲ್ಕತ್ತಾದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಪಶ್ವಿಮ ಬಂಗಾಲದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ತಿಳಿಸಿದ್ದಾರೆ.

ಉತ್ತರ ಕೋಲ್ಕತ್ತಾದಲ್ಲಿ ಚೋರ್‌ ಬಗಾನ್‌ ಅತ್ಯಂತ ಪ್ರಸಿದ್ದವಾಗಿರುವ ದುರ್ಗಾ ಪೂಜಾ ಸ್ಥಳ. ನವರಾತ್ರಿಯ ಏಳನೇ ದಿನವಾದ ಶನಿವಾರ ಸಂಜೆ 7.30ರ ಸುಮಾರಿಗೆ ಅತ್ಯಂತ ಕಿರಿದಾದ ರಸ್ತೆಯ ಮೂಲಕ ಜನರು ನುಗ್ಗುವುದಕ್ಕೆ ಯತ್ನಿಸಿದ್ದಾರೆ. ಬಾರೀ ಮಳೆಯಿಂದ ರಸ್ತೆ ಜಾರುತ್ತಿದ್ದು, ಇದರಿಂದ ಕಾಲ್ತುಳಿತ ಉಂಟಾಗಿದ್ದು, ಭೀಕರ ದುರಂತ ಸಂಭಿಸಿದೆ.

ಕೋಲ್ಕತ್ತಾ ದುರ್ಗಾ ಪೂಜಾ ದುರಂತ : 7 ಮಂದಿ ಅರೆಸ್ಟ್‌

ದುರ್ಗಾಪೂಜಾದಲ್ಲಿ ಸ್ಥಳದಲ್ಲಿ ನಡೆದ ದುರಂತವನ್ನು ಕೋಲ್ಕತ್ತಾ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲು ಸರಕಾರ ಮುಂದಾಗಿದೆ. ಈ ನಡುವಲ್ಲೇ ಕೋಲ್ಕತ್ತಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಸಂಘಟಕರು, ಭದ್ರತಾ ಏಜೆನ್ಸಿಯ ಪ್ರತಿನಿಧಿ, ಈವೆಂಟ್ಸ್‌ ಮ್ಯಾನೇಜ್ಮೆಂಟ್‌ ಕಂಪೆನಿಯ ಮುಖ್ಯಸ್ಥ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ.

ಕೋಲ್ಕತ್ತಾ ದುರಂತ : ತಲಾ 25 ಲಕ್ಷ ಪರಿಹಾರ

ಕೋಲ್ಕತ್ತಾದ ದುರ್ಗಾಪೂಜಾ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಗಾಯಗೊಂಡವರಿಗೆ ತಲಾ 5 ಲಕ್ಷ ರೂಪಾಯಿ ನೀಡುವುದರ ಜೊತೆಗೆ ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ ಎಂದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಸಂತಾಪ

ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿದ್ದಾರೆ. ಇನ್ನು ಗೃಹ ಸಚಿವರ ಅಮಿತ್‌ ಶಾ ಅವರು ತಮ್ಮ ಎಲ್ಲಾ ಪ್ರವಾಸವನ್ನು ರದ್ದುಗೊಳಿಸಿ, ಗಾಯಾಳುಗಳನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಇನ್ನು ಭಾರತ ಸರಕಾರ ಕೂಡ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ.

Topics

ಸಂಬಂಧಿತ ಸುದ್ದಿಗಳು