karnatakaಪ್ರಮುಖ ಸುದ್ದಿಗಳು

ದೊಡ್ಲ ಪುಲ್‌ ಕ್ರೀಮ್‌ ಹಾಲಿನಲ್ಲಿ ಕಾಸ್ಟಿಕ್‌ ಸೋಡಾ, ಡಿಟರ್ಜೆಂಟ್‌ ಪತ್ತೆ : ಕಾನೂನು ಕ್ರಮಕ್ಕೆ FSSAI ಸೂಚನೆ

ದೊಡ್ಲ ಡೈರಿ ಲಿಮಿಟೆಡ್‌ ಕರ್ನಾಟಕದಲ್ಲಿಯೂ ಡೈರಿಯನ್ನು ಹೊಂದಿದೆ. ಈ ಡೈರಿ ಉತ್ಪಾದಿಸುತ್ತಿರುವ ಪುಲ್‌ ಕ್ರೀಮ್‌ ಹಾಲಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದರು.

By Kannada News Next

1 min read

WhatsAppPost
Dodla Milk Adulteration FSSAI Action
Dodla Milk Adulteration FSSAI Action

ಬೆಂಗಳೂರು : ಕರ್ನಾಟದಲ್ಲಿ ತನ್ನ ಗ್ರಾಹಕರನ್ನು ಹೊಂದಿರುವ ದೊಡ್ಲ ಡೈರಿ ಲಿಮಿಟೆಡ್‌ ಉತ್ಪಾದಿಸುವ ಪುಲ್‌ಕ್ರೀಮ್‌ ಹಾಲಿನ ಮಾದರಿಯಲ್ಲಿ ಕಾಸ್ಟಿಕ್‌ ಸೋಡಾ ಅಥವಾ ಡಿಟರ್ಜೆಂಟ್‌ ಪತ್ತೆಯಾಗಿದೆ. ಈ ಕುರಿತು ಕಂಪನೆಯ ವಿರುದ್ದ ಕ್ರಮಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ( FSSI) ಸೂಚನೆ ನೀಡಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ದೊಡ್ಲ ಡೈರಿ ಲಿಮಿಟೆಡ್‌ ಕರ್ನಾಟಕದಲ್ಲಿಯೂ ಡೈರಿಯನ್ನು ಹೊಂದಿದೆ. ಈ ಡೈರಿ ಉತ್ಪಾದಿಸುತ್ತಿರುವ ಪುಲ್‌ ಕ್ರೀಮ್‌ ಹಾಲಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದರು.

ಈ ಹಾಲಿನಲ್ಲಿ ಕೊಬ್ಬಿನ ಅಂಶ ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿರುವ ಮಾನದಂಡಕ್ಕೆ ಹೊಂದಿಕೆ ಆಗದ ಕಾರಣ ಅದನ್ನು ಕಳಪೆ ಗುಣಮಟ್ಟದ ಉತ್ಪನ್ನ ಎಂದು ಗುರುತಿಸಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಪುಲ್‌ ಕ್ರೀಮ್‌ ಹಾಲಿನಲ್ಲಿ ಗುಣಮಟ್ಟದ ಮಾನದಂಡ, ಸುರಕ್ಷತೆಯನ್ನು ಉಲ್ಲಂಘಿಸಿದೆ ಎಂದು ಪ್ರಾಧಿಕಾರ ತಿಳಿಸಿದೆ. ದೂಡ್ಲ ಮಾತ್ರವಲ್ಲ, ಇತರ ಕಂಪೆನಿಗಳ ವಿರುದ್ದವೂ ಎಫ್‌ಎಸ್‌ಎಸ್‌ಐ ವಿಚಾರಣೆಯ ಜೊತೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.

ಪ್ರಿಯಗೋಲ್ಡ್‌ ಬಿಸ್ಕತ್‌ ತಯಾರಿಸುವ ಸೂರ್ಯ ಪುಡ್‌ ಆಂಡ್‌ ಆಗ್ರೋ ಲಿಮಿಟೆಡ್‌, ಸನ್‌ ರಿಡ್ಜಸ್‌ ಹೆಲ್ತ್‌ ಕೇರ್ಸ್‌, ನರ್ಪಧಾಮ್‌ ಪುಡ್ಸ್‌, ಶಾ ಕಾಂತಿಲಾಲ್‌ ಜಯಂತಿಲಾಲ್‌ ಸಂಸ್ಥೆ, ಯುಇಐಆರ್‌ ಆರ್ಗ್ಯಾನಿಕ್‌ ಪುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ದವೂ ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಾಗಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಫ್‌ಎಸ್‌ಎಸ್‌ಎಐ ಎಕ್ಸ್‌ನಲ್ಲಿ ತಿಳಿಸಿದೆ.

Topics

ಸಂಬಂಧಿತ ಸುದ್ದಿಗಳು