ಗೃಹಜ್ಯೋತಿ ಯೋಜನೆ: ಬೆಸ್ಕಾಂ ಮನೆ-ಮನೆ ಪರಿಶೀಲನೆ ದಿನಾಂಕ ಆಗಸ್ಟ್ 31ರವರೆಗೆ ವಿಸ್ತರಣೆ – ಇರಲಿ ಈ ದಾಖಲೆಗಳು ಸಿದ್ಧ!
ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಯಾವುದೇ ಗೊಂದಲವಿಲ್ಲದೆ ಪರಿಶೀಲನೆ ಪೂರ್ಣಗೊಳಿಸಲು ಕೆಲವು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಕಡ್ಡಾಯ.
ನೀವಿನ್ನೂ ಗೃಹಜ್ಯೋತಿ ಯೋಜನೆಯ ವಿವರಗಳನ್ನು ಅಪ್‌ಡೇಟ್ ಮಾಡಿಲ್ಲವೇ? ಹಾಗಿದ್ದಲ್ಲಿ ತಪ್ಪದೇ ಈ ಪ್ರಮುಖ ಮಾಹಿತಿಯನ್ನು ಗಮನಿಸಿ. ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆದಾರರ ಮನೆ-ಮನೆಗೆ ಭೇಟಿ ನೀಡಿ ನಡೆಸಲಾಗುತ್ತಿರುವ ಪರಿಶೀಲನಾ ಕಾರ್ಯವು ಇದೀಗ ಆಗಸ್ಟ್ 31ರವರೆಗೂ ಮುಂದುವರೆಯಲಿದೆ.
ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಯಾವುದೇ ಗೊಂದಲವಿಲ್ಲದೆ ಪರಿಶೀಲನೆ ಪೂರ್ಣಗೊಳಿಸಲು ಕೆಲವು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಕಡ್ಡಾಯ. ಮೀಟರ್ ಖಾತೆ ಸಂಖ್ಯೆಗಾಗಿ ಹಳೆಯ ಕರೆಂಟ್ ಬಿಲ್, ಫಲಾನುಭವಿಯ ಆಧಾರ್ ಕಾರ್ಡ್, ಒಟಿಪಿ ಸ್ವೀಕರಿಸಲು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಫೋನ್, ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹಾಗೂ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಜೊತೆಯಲ್ಲಿಟ್ಟುಕೊಳ್ಳಿ. ಇದರೊಂದಿಗೆ ಫಲಾನುಭವಿಗಳು ಭರ್ತಿ ಮಾಡಿ ಸಹಿ ಮಾಡಿದ ಅರ್ಜಿಯನ್ನು ಸಿದ್ಧವಾಗಿರಿಸಬೇಕು.
ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿದ್ದರೆ ಬಾಡಿಗೆ ಕರಾರು ಪತ್ರ (Agreemant), ರೇಷನ್ ಕಾರ್ಡ್ ಇದ್ದರೆ ಅದನ್ನು ಹಾಗೂ ತೆರಿಗೆ ಪಾವತಿದಾರರಾಗಿದ್ದಲ್ಲಿ ಪಾನ್ ಕಾರ್ಡ್ ಪ್ರತಿಗಳನ್ನು ನೀಡುವುದು ಅಗತ್ಯ. ಹೆಚ್ಚಿನ ಮಾಹಿತಿ ಅಥವಾ ನೆರವಿಗಾಗಿ ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳಾದ 9480816111, 9480816112, 9480816113 ಅಥವಾ 9480816114 ಅನ್ನು ಸಂಪರ್ಕಿಸಬಹುದು. ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ನಿಮ್ಮ ದಾಖಲೆಗಳನ್ನು ಕಾಯ್ದಿರಿಸಿಕೊಳ್ಳಿ!
Topics
ಸಂಬಂಧಿತ ಸುದ್ದಿಗಳು
karnataka
Heavy Rain : ಕರ್ನಾಟಕಕ್ಕೆ ಮತ್ತೆ ಮುಂಗಾರು ಆರ್ಭಟ: ಬೆಂಗಳೂರು ಸೇರಿ 6 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ
karnataka
Gruha Jyothi Scheme : ಗೃಹಜ್ಯೋತಿಗೆ ಎಸ್ಐಆರ್ ಕಂಟಕ ವೋಟರ್ ಐಡಿ ಇಲ್ಲದಿದ್ರೆ ಸಿಗಲ್ಲ ಫ್ರೀ ಕರೆಂಟ್
karnataka
ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ : BIS ಅಥವಾ ISI ಗುಣಮಟ್ಟದ ಮುದ್ರೆಯ ಹೆಲ್ಮೆಟ್ ಕಡ್ಡಾಯ
karnataka

