karnatakaಪ್ರಮುಖ ಸುದ್ದಿಗಳು

Gruha Jyothi Scheme : ಗೃಹಜ್ಯೋತಿಗೆ ಎಸ್​ಐಆರ್​ ಕಂಟಕ ವೋಟರ್‌ ಐಡಿ ಇಲ್ಲದಿದ್ರೆ ಸಿಗಲ್ಲ ಫ್ರೀ ಕರೆಂಟ್‌

ಉಚಿತ ವಿದ್ಯುತ್ ಸೌಲಭ್ಯವನ್ನು ಇನ್ಮುಂದೆ ಪಡೆಯಬೇಕಾದರೆ ಅಥವಾ ಅದನ್ನು ಮುಂದುವರಿಸಬೇಕಾದರೆ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ವೋಟರ್ ಐಡಿ ವಿವರಗಳನ್ನು ಒದಗಿಸಬೇಕಾದ

By ರಶ್ಮಿ ಎಸ್. | Rashmi S

1 min read

WhatsAppPost
gruha Jyothi scheme sir voter id link Karnataka free electricity
gruha Jyothi scheme sir voter id link Karnataka free electricity

ಬೆಂಗಳೂರು : ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಜ್ಯೋತಿ'ಗೆ (Gruha Jyothi Scheme) ಇದೀಗ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸುವ ಹೊಸ ನಿಯಮಾವಳಿಗಳ ಅಡಚಣೆ ಎದುರಾಗಿದೆ.

ಚುನಾವಣಾ ಆಯೋಗವು ಸದ್ಯ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಈ ಯೋಜನೆಯಡಿ ಪ್ರತಿ ಮನೆಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯವನ್ನು ಇನ್ಮುಂದೆ ಪಡೆಯಬೇಕಾದರೆ ಅಥವಾ ಅದನ್ನು ಮುಂದುವರಿಸಬೇಕಾದರೆ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ವೋಟರ್ ಐಡಿ ವಿವರಗಳನ್ನು ಒದಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಯೋಜನೆಯ ದುರ್ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಮತ್ತು ಕೇವಲ ಕರ್ನಾಟಕ ರಾಜ್ಯದ ಅರ್ಹ ನಾಗರಿಕರಿಗೆ ಮಾತ್ರ ಈ ಸೌಲಭ್ಯ ತಲುಪುವಂತೆ ಮಾಡುವುದು ಸರ್ಕಾರದ ಈ ಕಠಿಣ ಕ್ರಮದ ಮುಖ್ಯ ಉದ್ದೇಶವಾಗಿದೆ.

ಈಗಾಗಲೇ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ಗ್ರಾಹಕರ ಮನೆ ಬಾಗಿಲಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹೊಸ ನಿಯಮದ ಪ್ರಕಾರ, ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಜೊತೆಗೆ ಮತದಾರರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯ ನಿಖರವಾದ ವಿವರಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ಬೇರೆ ರಾಜ್ಯಗಳಲ್ಲಿ ಮತದಾನದ ಹಕ್ಕು ಹೊಂದಿದ್ದರೂ, ಇಲ್ಲಿ ಬಾಡಿಗೆ ಮನೆಗಳಲ್ಲಿದ್ದುಕೊಂಡು ಈ ಯೋಜನೆಯ ಅನಗತ್ಯ ಲಾಭ ಪಡೆಯುತ್ತಿರುವವರನ್ನು ಹಾಗೂ ತೆರಿಗೆ ಪಾವತಿದಾರರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಹೊರಗಿಡಲು ಈ ಪರಿಶೀಲನೆ ಸಹಕಾರಿಯಾಗಲಿದೆ.

ಒಂದು ವೇಳೆ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಫಲಾನುಭವಿಗಳ ಹೆಸರು ಕೈಬಿಟ್ಟು ಹೋಗಿದ್ದರೆ, ಅವರಿಗೆ ಗೃಹಜ್ಯೋತಿ ಯೋಜನೆ ಮಾತ್ರವಲ್ಲದೆ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಇತರೆ ಪ್ರಮುಖ ಗ್ಯಾರಂಟಿ ಯೋಜನೆಗಳ ಸೌಲಭ್ಯವೂ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಹೀಗಾಗಿ ಗ್ರಾಹಕರು ತಕ್ಷಣ ತಮ್ಮ ಮತದಾರರ ಚೀಟಿಯ ಸತ್ತ್ಯಾಸತ್ಯತೆಯನ್ನು ಪರಿಶೀಲಿಸಿಕೊಂಡು ಇಲಾಖೆಯೊಂದಿಗೆ ಲಿಂಕ್ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

Topics

ಸಂಬಂಧಿತ ಸುದ್ದಿಗಳು