Ring Road Shubha : ರಿಂಗ್ರೋಡ್ ಶುಭಾಗಿಲ್ಲ ಕ್ಷಮಾಧಾನ : ಏನಿದು ಪ್ರಕರಣ
ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಸಂಪುಟ ಸಭೆಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ರಿಂಗ್ ರೋಡ್ ಶುಭಾ ಹಾಗೂ ಡಿ ಅರುಣ್ ಶರ್ಮಾ ಅವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿ
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಬೆಂಗಳೂರು : ಬಾವಿ ಪತಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶುಭಾ ಶಂಕರನಾರಾಯಣ ಮತ್ತು ಡಿ. ಅರುಣ್ ಶರ್ಮಾ ಅವರು ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ತಿರಸ್ಕರಿಸಿದೆ.
ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಸಂಪುಟ ಸಭೆಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ರಿಂಗ್ ರೋಡ್ ಶುಭಾ ಹಾಗೂ ಡಿ ಅರುಣ್ ಶರ್ಮಾ ಅವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯು ಇಲ್ಲಿನ ಕಾನೂನಿನ ಚೌಕಟ್ಟಿನ ಒಳಗೆ ಇಲ್ಲ. ಇದೇ ಕಾರಣದಿಂದಲೇ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ರಾಜ್ಯಪಾಲರಿಗೆ ಮಾಹಿತಿ ನೀಡಲಾಗುತ್ತದೆ ಎಂದಿದ್ದಾರೆ.
ಅಷ್ಟಕ್ಕೂ ಏನಿದು ಪ್ರಕರಣ ? ಯಾರು ಈ ರಿಂಗ್ ರೋಡ್ ಶುಭಾ ?
ಬೆಂಗಳೂರಿನ ರಿಂಗ್ ರೋಡ್ನಲ್ಲಿ 2003ರಲ್ಲಿ ಗಿರೀಶ್ ಕೊಲೆ ಪ್ರಕರಣ ರಾಜ್ಯದಾದ್ಯಂತ ಬಾರೀ ಚರ್ಚೆಗೆ ಕಾರಣವಾಗಿತ್ತು. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಗಿರೀಶ್ ಹಾಗೂ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಶುಭಾ ಶಂಕರನಾರಾಯಣ ಅವರಿಬ್ಬರ ಮದುವೆ ನಿಶ್ಚಯವಾಗಿತ್ತು.
ಕಾನೂನು ಪದವಿ ಪಡೆಯುತ್ತಿದ್ದ ಶುಭಾಗೆ ತನ್ನ ಜೂನಿಯಲ್ ಅರುಣ್ ವರ್ಮಾ ಎಂಬಾತನ ಜೊತೆಗೆ ಪ್ರೀತಿಯಲ್ಲಿದ್ದಳು. ಆತನನ್ನು ಮದುವೆ ಆಗುಬೇಕು ಅನ್ನೋ ಕಾರಣದಿಂದಲೇ ಶುಭಾ ಹಾಗೂ ಅರುಣ್ ವರ್ಮಾ ಸೇರಿ ಗಿರೀಶ್ ಕೊಲೆಗೆ ಸ್ಕೆಚ್ ಹಾಕಿದ್ದರು ಅನ್ನೋದು ಇಬ್ಬರ ಮೇಲಿರುವ ಆರೋಪ.
2003ರ ಡಿಸೆಂಬರ್ 3ರಂದು ರಾತ್ರಿಯ ವೇಳೆಯಲ್ಲಿ ಗಿರೀಶ್ ಶುಭಾಳನ್ನು ಊಟಕ್ಕೆಂದು ಕರೆದುಕೊಂಡು ಹೋಗಿದ್ದ. ಎಚ್ಎಎಲ್ ವಿಮಾನ ನಿಲ್ದಾಣದ ಬಳಿಯಲ್ಲಿ ವಿಮಾನದ ಹಾರಾಟ ನೋಡುವ ಆಸೆಯನ್ನು ಶುಭಾ ವ್ಯಕ್ತಪಡಿಸಿದ್ದಾಳೆ. ಹೀಗಾಗಿ ಗಿರೀಶ್ ಹಾಗೂ ಶುಭಾ ರಿಂಗ್ ರೋಡ್ನಲ್ಲಿರುವ ವೀಕ್ಷಣಾ ಸ್ಥಳಕ್ಕೆ ತೆರಳಿದ್ದರು.
ವಿಮಾನದ ಹಾರಾಟವನ್ನು ನೋಡುತ್ತಿದ್ದ ವೇಳೆಯಲ್ಲಿಯೇ ಗಿರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಗಿರೀಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಸಾವನ್ನಪ್ಪಿದ್ದರು.
ಆರಂಭದಲ್ಲಿ ಗಿರೀಶ್ ಅವರ ಮೇಲಿನ ಹಲ್ಲೆಯನ್ನು ದರೋಡೆ, ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಶುಭಾ ಹಾಗೂ ಅರುಣ್ ವರ್ಮಾ ಪ್ರೇಮ ಪ್ರಕರಣದ ಜೊತೆಗೆ ಕರಾಳ ಸಂಚು ಬಯಲಾಗಿದೆ. ಅಶೋಕನಗರ ಠಾಣೆಯ ಪೊಲೀಸರು ಕೊಲೆಯ ಸಂಚು ರೂಪಿಸಿದ್ದ ಶುಭಾ, ಅರುಣ್ ವರ್ಮಾ, ಕೊಲೆಗೆ ಸಹಕಾರ ನೀಡಿದ್ದ ವೆಂಕಟೇಶ್ ಹಾಗೂ ದಿನೇಶ್ ಎಂಬವರನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ನಾಲ್ವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು. ಆರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಕೂಡ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು.
ಈ ಹಿನ್ನೆಲೆಯಲ್ಲಿಯೇ ಶುಭಾ ಹಾಗೂ ಅರುಣ್ ವರ್ಮಾ ರಾಜ್ಯಪಾಲರಿಗೆ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಿದ್ದರು. ರಾಜ್ಯಪಾಲರು ಸರಕಾರಕ್ಕೆ ಈ ಅರ್ಜಿಯನ್ನು ಕಳುಹಿಸಿಕೊಟ್ಟಿದ್ದು, ಸಂಪುಟ ಸಭೆ ಇದೀಗ ಅರ್ಜಿಯನ್ನು ತಿರಸ್ಕರಿಸಿದೆ.
Topics
ಸಂಬಂಧಿತ ಸುದ್ದಿಗಳು
karnataka
ರಾಜ್ಯದಲ್ಲಿ ಮತ್ತೆ ಅಬ್ಬರಿಸಲಿದ್ದಾನೆ ವರುಣ : ಭಾರೀ ಗುಡುಗು ಮಳೆಯ ಮುನ್ಸೂಚನೆ
karnataka
ಕರಾವಳಿಗೂ ತಟ್ಟಿದ ಬರಗಾಲದ ಬಿಸಿ : ಪುತ್ತೂರು, ಮೂಡುಬಿದಿರೆ, ಮೂಲ್ಕಿ ಸೇರಿ 9 ತಾಲೂಕುಗಳು ಬರ ಪಟ್ಟಿಗೆ
karnataka
ಅಕ್ಟೋಬರ್ 15ರಿಂದ ರಾಜ್ಯಾದ್ಯಂತ ಹಿಂಗಾರು ಮಳೆ ಅಧಿಕೃತ ಆರಂಭ
karnataka

