ಸಿನಿಪ್ರಿಯರಿಗೆ ಸರ್ಕಾರದಿಂದ ಬಿಗ್ಶಾಕ್ : ಸೆ.30ರಿಂದ ಟಿಕೆಟ್ ದರ ಇನ್ನಷ್ಟು ಏರಿಕೆ
ಸರ್ಕಾರದ ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಸಾಮಾನ್ಯ ಚಿತ್ರಮಂದಿರಗಳು ಹಾಗೂ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಕಲಾಭಿಮಾನಿಗಳಿಗೆ ರಾಜ್ಯ ಸರ್ಕಾರವು ಆರ್ಥಿಕ ಹೊರೆಯನ್ನು ಹೊರಿಸಲು ಮುಂದಾಗಿದೆ. ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಕಾಯ್ದೆ-2024ರ ಅಡಿಯಲ್ಲಿ ಸೆಪ್ಟೆಂಬರ್ 30ರಿಂದ ಅನ್ವಯವಾಗುವಂತೆ ರಾಜ್ಯಾದ್ಯಂತ ಪ್ರದರ್ಶನಗೊಳ್ಳುವ ಚಲನಚಿತ್ರಗಳ ಟಿಕೆಟ್ ದರದ ಮೇಲೆ ಶೇಕಡಾ ಎರಡರಷ್ಟು ಹೆಚ್ಚುವರಿ ಸೆಸ್ ವಿಧಿಸಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಸಾಮಾನ್ಯ ಚಿತ್ರಮಂದಿರಗಳು ಹಾಗೂ ಐಷಾರಾಮಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
ಈ ಹಿಂದೆ ಸರ್ಕಾರವು ಯಾವುದೇ ಅಧಿಕೃತ ಅಧಿಸೂಚನೆ ಇಲ್ಲದೆ ಕೇವಲ ಸುತ್ತೋಲೆಯ ಮೂಲಕ ಈ ಸೆಸ್ ಸಂಗ್ರಹಿಸಲು ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನ್ಯಾಯಾಲಯದ ಮೆಟ್ಟಿಲೇರಿದಾಗ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿತ್ತು. ಆದರೆ, ಈಗ ಕಾನೂನಾತ್ಮಕವಾಗಿ ಕಾಯ್ದೆಯ ಅಡಿಯಲ್ಲಿಯೇ ಆದೇಶ ಹೊರಡಿಸಿರುವುದರಿಂದ ಚಿತ್ರಮಂದಿರಗಳ ಮಾಲೀಕರು ಅನಿವಾರ್ಯವಾಗಿ ಸೆಸ್ ಸಂಗ್ರಹಿಸಬೇಕಾಗಿದೆ. ಈ ನಿಯಮದ ಪ್ರಕಾರ ಪ್ರಸ್ತುತ ಇರುವ ಟಿಕೆಟ್ ದರದ ಮೇಲೆ ಹೆಚ್ಚುವರಿ ಮೊತ್ತ ಬೀಳಲಿದ್ದು, ಉದಾಹರಣೆಗೆ 250 ರೂಪಾಯಿಗಳ ಟಿಕೆಟ್‌ಗೆ ಗ್ರಾಹಕರು ಹೆಚ್ಚುವರಿಯಾಗಿ 5 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಹೀಗೆ ಸಂಗ್ರಹವಾಗುವ ಹಣವನ್ನು ಸ್ಯಾಂಡಲ್‌ವುಡ್ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಆರ್ಥಿಕ ಹೊರೆಯನ್ನು ಚಿತ್ರಮಂದಿರಗಳ ಮಾಲೀಕರೇ ಭರಿಸಬೇಕೇ ಅಥವಾ ಸಂಪೂರ್ಣವಾಗಿ ಗ್ರಾಹಕರ ಮೇಲೆ ಜರಿಸಬೇಕೇ ಎಂಬ ಗೊಂದಲ ಹಾಗೂ ಚರ್ಚೆಗಳು ಸದ್ಯ ಉದ್ಯಮ ವಲಯದಲ್ಲಿ ಆರಂಭವಾಗಿವೆ.
Topics
ಸಂಬಂಧಿತ ಸುದ್ದಿಗಳು
karnataka
ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ಚುರುಕು : ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಣೆಯಾಗಲಿದೆ ವರುಣನ ಅಬ್ಬರ
karnataka
18 ಲಕ್ಷಕ್ಕೂ ಹೆಚ್ಚು ಜನರ ಸಾಮಾಜಿಕ ಪಿಂಚಣಿ ಸ್ಥಗಿತ : ಕಾಗದಕ್ಕಷ್ಟೇ ಸೀಮಿತವಾಯ್ತಾ ರಾಜ್ಯ ಸರ್ಕಾರದ ಆದೇಶ
karnataka
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಇ-ಕೆವೈಸಿ ಅವಧಿ ಅಕ್ಟೋಬರ್ 20ರವರೆಗೆ ವಿಸ್ತರಣೆ
karnataka

