ದಿನದ ಆಯಾಸ ದೂರ ಮಾಡುವ ಮನೆಮದ್ದುಗಳು ! ಮಲಗುವ ಮುನ್ನ ಕೇವಲ 10 ನಿಮಿಷ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
ಒತ್ತಡದ ಜೀವನಶೈಲಿಯಿಂದ ರಾತ್ರಿಯಾದಂತೆ ಕಾಣಿಸಿಕೊಳ್ಳುವ ಪಾದದ ಸೆಳೆತ ಅಥವಾ ನೋವಿಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಹೀಗೆ ಆರೈಕೆ ಮಾಡಿ.
ಇಂದಿನ ಅತಿ ವೇಗದ ದಿನಗಳು ಅತ್ಯಂತ ಆಯಾಸ, ಒತ್ತಡವನ್ನುಂಟು ಮಾಡುತ್ತವೆ. ಇದು ನಿದ್ದೆ, ಊಟದಂತಹ ಸಾಮಾನ್ಯ ದಿನಚರಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ದಿನವಿಡಿ ದಣಿದ ಪಾದಗಳಲ್ಲಿ ರಾತ್ರಿಯಾದಂತೆ ಸೆಳೆತ ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಅಸಹನೀಯ ಮಟ್ಟಕ್ಕೆ ಹೋಗಿ ರಾತ್ರಿಯ ನಿದ್ದೆಯನ್ನು ಕಸಿದುಕೊಳ್ಳುತ್ತದೆ. ರಾತ್ರಿಯ ಅಪೂರ್ಣ ನಿದ್ದೆಯು ಮರುದಿನದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಇದು ಪದೇ ಪದೇ ಪುನರಾವರ್ತನೆಯಾದಾಗ ಕಿರಿಕಿರಿಯೆನಿಸಲು ಶುರುವಾಗುತ್ತದೆ. ಇದರ ಪರಿಹಾರಕ್ಕೆ ಔಷಧಗಳ ಮೊರೆ ಹೋಗುವ ಮೊದಲು ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ. ದಣಿದ ಪಾದಗಳಿಗೆ ಮಲಗುವ ಮುನ್ನ ಕೇವಲ 10 ನಿಮಿಷ ಈ ಮನೆಮದ್ದನ್ನು ಪ್ರಯತ್ನಿಸಿ. ಇದು ನಿಮ್ಮ ಪಾದಗಳಿಗೆ ಆರಾಮ ನೀಡಿ, ನೋವು, ಒತ್ತಡ ದೂರಮಾಡುತ್ತದೆ.
ಉಪ್ಪು ಮತ್ತು ವಿನೆಗರ್ ನೀರು
ಒಂದು ದೊಡ್ಡ ಅಗಲವಾದ ಬುಟ್ಟಿಗೆ ಸುಮಾರು 1 ಲೀಟರ್ ಉಗುರು ಬೆಚ್ಚಗಿನ ನೀರು ತುಂಬಿಸಿ. ಅದಕ್ಕೆ ಅರ್ಧ ಕಪ್ ವಿನೆಗರ್ ಮತ್ತು 2 ಚಮಚ ಉಪ್ಪು ಸೇರಿಸಿ. ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪಾದಗಳನ್ನು ಅದರಲ್ಲಿ ಇಡಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಬಿಡಿ.
ಉಪ್ಪು ಮತ್ತು ವಿನೆಗರ್ ಬೆರೆಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಇಡುವುದರಿಂದ ಸ್ನಾಯುಗಳು ರಿಲ್ಯಾಕ್ಸ್ ಆಗಿ ನೋವು, ಸೆಳೆತ ಕಡಿಮೆ ಮಾಡುತ್ತದೆ. ವಿನೆಗರ್ ಮತ್ತು ಉಪ್ಪು ಒರಟಾದ ಚರ್ಮದ ಪಾದಗಳನ್ನು ಮೃದುವಾಗುವಂತೆ ಮಾಡುತ್ತದೆ. ಇದು ಆಯಾಸ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾದಗಳ ಆರೈಕೆ ಮಾಡುವ ಮೊದಲು ಇದನ್ನು ನೆನಪಿಡಿ
* ಪಾದಗಳಿಗೆ ಆರೈಕೆ ಮಾಡಿದ ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
* ಕಾಲ್ಬೆರಳುಗಳ ನಡುವೆ ತೇವಾಂಶ ಇಲ್ಲದಂತೆ ಒಣಗಿಸಿ. ಒದ್ದೆ ಚರ್ಮದಲ್ಲಿ ಶಿಲೀಂದ್ರಗಳು ಬೆಳವಣಿಗೆ ಬಹಳ ಬೇಗನೆ ಆಗುತ್ತದೆ.
* ಬಿಗಿಯಾದ ಪಾದರಕ್ಷೆ ಅಥವಾ ಸಾಕ್ಸ್ ಧರಿಸಬೇಡಿ.
* ಮಾಶ್ಚರೈಸರ್ ಅನ್ನು ಪಾದಗಳಿಗೂ ಲೇಪಿಸಿ.
Topics
ಸಂಬಂಧಿತ ಸುದ್ದಿಗಳು
lifestyle
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೀವ್ರ ವ್ಯಾಯಾಮ ಮಾಡುವುದರಿಂದ ಹೆಚ್ಚು ಕೊಬ್ಬು ಕರಗುವುದು ನಿಜನಾ? ತಜ್ಞರ ಉತ್ತರ ಏನು?
lifestyle
ವಿಶ್ವಕರ್ಮ ಜಯಂತಿ 2026: ದೇವಶಿಲ್ಪಿ ವಿಶ್ವಕರ್ಮರನ್ನು ಪೂಜಿಸಲು ಕಾರಣವೇನು?
lifestyle
ಹಸಿರಾಗಿರಬೇಕಾದ ತುಳಸಿ ಹಳದಿಯಾಗುತ್ತಿದ್ಯಾ.. ತುಳಸಿಯನ್ನು ರಕ್ಷಿಸಲು ಹೀಗೆ ಮಾಡಿ
lifestyle

