ಶಕ್ತಿ ಯೋಜನೆ ಟಿಕೆಟ್ ಕಳ್ಳಾಟವಾಡಿದ್ರೆ ಕಂಡಕ್ಟರ್ ಸಸ್ಪೆಂಡ್ : ಮಹಿಳೆಯರಿಗೂ ಜಾರಿಯಾಗಲಿದೆ ಹೊಸ ರೂಲ್ಸ್
ಸಾರಿಗೆ ಬಸ್ಸುಗಳ ಕಂಡಕ್ಟರ್‌ಗಳು ದುರ್ಬಳಕೆ ಮಾಡುತ್ತಿರುವುದು ಬಯಲಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಇದೀಗ ಟಿಕೆಟ್ ಕಳ್ಳಾಟಕ್ಕೆ ಮೂಗುದಾರ ಹಾಕಲು ಮುಂದಾಗಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಬೆಂಗಳೂರು : ಶಕ್ತಿ ಯೋಜನೆಯ ಮೂಲಕ ಕರ್ನಾಟಕದಲ್ಲಿನ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೇ ಯೋಜನೆಯನ್ನು ಸಾರಿಗೆ ಬಸ್ಸುಗಳ ಕಂಡಕ್ಟರ್‌ಗಳು ದುರ್ಬಳಕೆ ಮಾಡುತ್ತಿರುವುದು ಬಯಲಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಇದೀಗ ಟಿಕೆಟ್ ಕಳ್ಳಾಟಕ್ಕೆ ಮೂಗುದಾರ ಹಾಕಲು ಮುಂದಾಗಿದೆ.
ಶಕ್ತಿ ಯೋಜನೆಯಲ್ಲಿ ನಡೆಯುತ್ತಿರುವ ಟಿಕೆಟ್ ಕಳ್ಳಾಟದ ದುರ್ಬಳಕೆಯನ್ನು ತಪ್ಪಿಸುವ ಸಲುವಾಗಿ ಕೆಎಸ್‌ಆರ್‌ಟಸಿ ಹಾಗೂ ಸಾರಿಗೆ ಇಲಾಖೆ ಇತರ ಮೂರು ನಿಗಮಗಳು ಕಠಿಣ ರೂಲ್ಸ್ ಜಾರಿ ಮಾಡಿವೆ. ಬಸ್ ಕಂಡಕ್ಟರ್‌ಗಳು ನಡೆಸುತ್ತಿರುವ ಟಿಕೆಟ್ ಅಕ್ರಮವನ್ನು ಸದ್ಯ ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ದಂಡ, ಅಮಾನತು ಮತ್ತು ವಜಾ ಮಾಡಲು ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿವೆ.
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಹೆಸರಲ್ಲಿ ಕಂಡಕ್ಟರ್ ಗಳು ಅಕ್ರಮವಾಗಿ ಹಣ ಸಂಪಾದಿಸುತ್ತಿರುವುದು ಬಯಲಾಗಿತ್ತು. ಹೊರ ರಾಜ್ಯದ ಮಹಳೆಯರು ಮತ್ತು ಪುರುಷರಿಗೆ ಉಚಿತ ಟಿಕೆಟ್ ನೀಡಿ, ಅವರಿಂದ ಹಣ ಪಡೆದು ಆ ಹಣವನ್ನು ಸರಕಾರಕ್ಕೆ ಜಮೆ ಮಾಡದೆ ತಮ್ಮ ಲಾಭಕ್ಕಾಗಿ ಬಳಕೆ ಮಾಡುತ್ತಿರುವ ಪ್ರಕರಣಗಳು ಪತ್ತೆಯಾಗಿದ್ದವು. ಕೆಲವು ಕಂಡಕ್ಟರ್‌ಗಳು ಪ್ರೋತ್ಸಾಹಧನ ಪಡೆಯುವ ಸಲುವಾಗಿ ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ಅನಗತ್ಯವಾಗಿ ಹರಿದು ಹಾಕಿರುವ ಆರೋಪವೂ ಕೇಳಿಬಂದಿದೆ.
ಇದೇ ಕಾರಣದಿಂದಲೇ ಇದೀಗ ಕೆಎಸ್‌ಆರ್‌ಟಿಸಿ ಎಂಡಿ ಶಶಿಕುಮಾರ್ ಅವರು ಹೊಸ ಮಾರ್ಗಸೂಚಿಯನ್ನ ಪ್ರಕಟಿಸಿದ್ದಾರೆ. ಟಿಕಟ್ ಹಣ ದುರ್ಬಳಕೆ ಪ್ರಕರಣವನ್ನು ಮೂರು ಹಂತದಲ್ಲಿ ವಿಂಗಡಿಸಲಾಗಿದೆ. ಆರಂಭದ ಮೂರು ಟಿಕೆಟ್ ದುರ್ಬಳಕೆಯನ್ನು ಸಾಮಾನ್ಯ, ಮೂರರಿಂದ ಐದು ಟಿಕೆಟ್ ಅಕ್ರಮಕ್ಕೆ ರೆಡ್ ಜೋನ್ ಹಾಗೂ ಅದಕ್ಕಿಂತ ಹೆಚ್ಚು ಟಿಕೆಟ್ ಅಕ್ರಮ ಎಸಗಿದ್ರೆ ಅದನ್ನು ಅಸಾಧಾರಣ ಎಂದು ಪರಿಗಣಿಸಲಾಗುತ್ತದೆ. ಮೊದಲ ಹಂತದಲ್ಲಿ ವಾರ್ನಿಂಗ್ ನೀಡುತ್ತಿದ್ರೆ, ನಂತರ ಅಮಾನತು ಮಾಡೋದು, ಅದಕ್ಕೂ ಬಗ್ಗದೇ ಇದ್ರೆ ವಜಾಗೊಳಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.
Topics
ಸಂಬಂಧಿತ ಸುದ್ದಿಗಳು
karnataka
Heavy Rain : ಕರ್ನಾಟಕಕ್ಕೆ ಮತ್ತೆ ಮುಂಗಾರು ಆರ್ಭಟ: ಬೆಂಗಳೂರು ಸೇರಿ 6 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ
karnataka
Gruha Jyothi Scheme : ಗೃಹಜ್ಯೋತಿಗೆ ಎಸ್ಐಆರ್ ಕಂಟಕ ವೋಟರ್ ಐಡಿ ಇಲ್ಲದಿದ್ರೆ ಸಿಗಲ್ಲ ಫ್ರೀ ಕರೆಂಟ್
karnataka
ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ : BIS ಅಥವಾ ISI ಗುಣಮಟ್ಟದ ಮುದ್ರೆಯ ಹೆಲ್ಮೆಟ್ ಕಡ್ಡಾಯ
karnataka

