udupiBreakingಪ್ರಮುಖ ಸುದ್ದಿಗಳು

ಬ್ರಹ್ಮಾವರ : ಸುಟ್ಟು ಕರಕಲಾಯ್ತು ಚಲಿಸುತ್ತಿದ್ದ ಖಾಸಗಿ ಬಸ್‌

ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಈ ಅವಘಡ ಸಂಭವಿಸಿದೆ. ಉಡುಪಿ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಪ್ರಯಾಣಿಸುತ್ತಿತ್ತು.

By ಅಶ್ವಥ್ ಆಚಾರ್ಯ | Ashwath Acharya

1 min read

WhatsAppPost
brahmavara Udupi Sagara private bus catches fire  1
brahmavara Udupi Sagara private bus catches fire 1

ಬ್ರಹ್ಮಾವರ : ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಇಡೀ ಬಸ್‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ನಡೆದಿದೆ.

brahmavara Udupi Sagara private bus catches fire
brahmavara Udupi Sagara private bus catches fire

ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಈ ಅವಘಡ ಸಂಭವಿಸಿದೆ. ಉಡುಪಿ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಪ್ರಯಾಣಿಸುತ್ತಿತ್ತು.

brahmavara Udupi Sagara private bus catches fire  5
brahmavara Udupi Sagara private bus catches fire 5

ಉಪ್ಪೂರು ಬಳಿಗೆ ಬರುತ್ತಿದ್ದಂತೆಯ ಬಸ್ಸಿನ ಇಡಿಸಿ ಬಾಕ್ಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

brahmavara Udupi Sagara private bus catches fire  4
brahmavara Udupi Sagara private bus catches fire 4

ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಪ್ರಯಾಣಿಕರನ್ನು ಕೂಡಲೇ ಕೆಳಗೆ ಇಳಿಸಿದ್ದಾರೆ.

brahmavara Udupi Sagara private bus catches fire  3
brahmavara Udupi Sagara private bus catches fire 3

ಏಕಾಏಕಿಯಾಗಿ ಇಡೀ ಬಸ್ಸಿಗೆ ಬೆಂಕಿ ಆವರಿಸಿತ್ತು. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದ್ರು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಸ್ಸಿನ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ.

brahmavara Udupi Sagara private bus catches fire  2
brahmavara Udupi Sagara private bus catches fire 2

ಆದರೆ ಖಾಸಗಿ ಬಸ್‌ ಬೆಂಕಿಯ ಕೆನ್ನಾಲಗೆಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಯಾವ ಕಾರಣದಿಂದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.

Topics

ಸಂಬಂಧಿತ ಸುದ್ದಿಗಳು