ಮಂಗಳೂರು ಮಂಗಳಾ ಕ್ರೀಡಾಂಗಣಕ್ಕೆ ಹೈಟೆಕ್ ಮೆರುಗು: ₹4.5 ಕೋಟಿ ವೆಚ್ಚದಲ್ಲಿ ಶೀಘ್ರವೇ ಅಭಿವೃದ್ಧಿ ಕಾಮಗಾರಿ ಆರಂಭ
ಕರಾವಳಿ ಭಾಗದ ಪ್ರಮುಖ ಕ್ರೀಡಾ ಚಟುವಟಿಕೆಯ ತಾಣವಾಗಿರುವ ಮಂಗಳೂರಿನ ಮಂಗಳಾ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಕರಾವಳಿ ಭಾಗದ ಪ್ರಮುಖ ಕ್ರೀಡಾ ಚಟುವಟಿಕೆಯ ತಾಣವಾಗಿರುವ ಮಂಗಳೂರಿನ ಮಂಗಳಾ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಮಂಗಳಾ ಕ್ರೀಡಾಂಗಣದ ಅಭಿವೃದ್ದಿಗಾಗಿ ರಾಜ್ಯ ಸರಕಾರ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಅಂದ್ರೆ ಮಾಸಾಂತ್ಯದಲ್ಲಿಯೇ ಅಭಿವೃದ್ದಿ ಕಾಮಗಾರಿಗಳು ಆರಂಭಗೊಳ್ಳಲಿವೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯೋಜನೆಯಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕ್ರೀಡಾ ಚಟುವಟಿಕೆಗಳು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಬಾರಿ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳುವ ಕಾರಣದಿಂದಾಗಿ ಶಾಲೆ - ಕಾಲೇಜು, ಸಂಘ ಸಂಸ್ಥೆಗಳ ಕ್ರೀಡಾಕೂಟಗಳು ಈ ಬಾರಿ ಪದವು ಮೈದಾನ, ವಿಶ್ವ ವಿದ್ಯಾಲಯ ಕಾಲೇಜು ಮೈದಾನ, ಪಣಂಬೂರು ಮೈದಾನ, ಮೂಡಬಿದಿರೆಯ ಸ್ವರಾಜ್ ಮೈದಾನ ಸೇರಿದಂತೆ ಪರ್ಯಾಯ ಕ್ರೀಡಾಂಗಣಕ್ಕೆ ಶಿಫ್ಟ್ ಆಗಲಿವೆ.
ಮಂಗಳಾ ಕ್ರೀಡಾಂಗಣ ಸೇರಿದಂತೆ ಕೆಲವೇ ಕೆಲವು ಕ್ರೀಡಾಂಗಣದಲ್ಲಿ ಮಾತ್ರವೇ ಸಿಂಥೆಟಿಕ್ ವ್ಯವಸ್ಥೆಯಿದ್ದು, ಈ ಬಾರಿ ಕ್ರೀಡಾಕೂಟ ಆಯೋಜನೆಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ರಾಜ್ಯ ಸರಕಾರ ಇದೀಗ ಅಭಿವೃದ್ದಿ ಕಾಮಗಾರಿಯಲ್ಲಿ ಒಳಚರಂಡಿ ಕಾಮಗಾರಿ, ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದ್ದು, ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಯೋಜನೆಗೆ ಬೇಕಾದ ಎಲ್ಲಾ ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಮಂಗಳಾ ಕ್ರೀಡಾಂಗಣದಲ್ಲಿ ಇರುವ ಸಿಂಥೆಟಿಕ್ ಟ್ರ್ಯಾಕ್ ಸುಮಾರು 15 ವರ್ಷಗಳಷ್ಟು ಹಳೆಯದಾಗಿದೆ. ಮಳೆ, ಬಿಸಿಲು, ಗಾಳಿಗೆ ಟ್ರ್ಯಾಕ್ ಸಂಪೂರ್ಣವಾಗಿ ಹಾಳಾಗಿದ್ದು, ಮಳೆ ಸುರಿದಾಗ ಜಾರುವ ಪರಿಸ್ಥಿತಿ ಇದೆ. ಅಲ್ಲದೇ ಮೈದಾನದಲ್ಲಿ ಕಳೆದ ವರ್ಷ ಮಂಗಳೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಮಂಗಳಾ ಕ್ರೀಡಾಂಗಣದ ಅಭಿವೃದ್ದಿ ಮಾಡುವುದಾಗಿ ಘೋಷಿಸಿದ್ದು, ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದರು.
Topics
ಸಂಬಂಧಿತ ಸುದ್ದಿಗಳು
mangaluru
ಆಗುಂಬೆ ಘಾಟ್ ರಸ್ತೆಗೆ 18 ಕೋಟಿ ರೂ. ಅನುದಾನ : ಶಾಸಕ ಸುನಿಲ್ ಕುಮಾರ್ ಕಾರ್ಯಕ್ಕೆ ಬಾರೀ ಮೆಚ್ಚುಗೆ
mangaluru
6 ತಿಂಗಳಿಂದ ಸ್ಥಗಿತಗೊಂಡಿರುವ ಮಂಗಳೂರು-ಕುವೈತ್ ವಿಮಾನಯಾನ: ಕುವೈತ್ ವಲಸಿಗರಿಗೆ ತಪ್ಪದ ಸಂಕಷ್ಟ
mangaluru
ಸೆಪ್ಟೆಂಬರ್ 18ಕ್ಕೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಪ್ರತ್ಯೇಕ ಕರಾವಳಿ ಕೃಷಿ ನೀತಿ ಘೋಷಣೆಗೆ ತೀವ್ರ ಆಗ್ರಹ
mangaluru

