ಗಯಾದಿಂದ ಬದರಿನಾಥದವರೆಗೆ : ಪೂರ್ವಜರ ಆತ್ಮಕ್ಕೆ ಶಾಂತಿ ನೀಡುವ ಭಾರತದ ಪವಿತ್ರ ಸ್ಥಳಗಳು !
ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲು ಹಾಗೂ ದೋಷ ಪರಿಹಾರಕ್ಕಾಗಿ ಭೇಟಿ ನೀಡಬಹುದಾದ ಭಾರತದ ಪವಿತ್ರ ಸ್ಥಳಗಳು...
By Archana V Bhat | ಅರ್ಚನಾ ವಿ ಭಟ್
1 min read
ಈ ವರ್ಷದ ಪಿತೃ ಪಕ್ಷವು ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಿದೆ. ಸರ್ವ ಪಿತೃ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಈ ಒಂದು ಪಕ್ಷದ ಸಮಯದಲ್ಲಿ ಜನರು ತಮ್ಮ ಪೂರ್ವಜರ ಆತ್ಮಕ್ಕೆ ಮೋಕ್ಷ, ಶಾಂತಿ ಸಿಗಲೆಂದು ಶ್ರಾದ್ಧ ಕರ್ಮಗಳನ್ನು ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಇದನ್ನು ನದಿಯ ದಡ, ಪವಿತ್ರ ಸರೋವರದ ಬಳಿ ಶ್ರಾದ್ಧ ಕರ್ಮ ಮಾಡುವುದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.
ಭಾರತದಲ್ಲಿ ಪೂರ್ವಜರ ಆತ್ಮದ ಶಾಂತಿಗಾಗಿ ಮತ್ತು ಪಿತೃ ದೋಷದಿಂದ ಪರಿಹಾರ ಪಡೆದುಕೊಳ್ಳುವ ಸಲುವಾಗಿ ಕೆಲವು ಪ್ರಮುಖ ಯಾತ್ರಾ ಸ್ಥಳಗಳು ಪವಿತ್ರವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಪಿತೃ ಪಕ್ಷದ ಸಮಯದಲ್ಲಿ ಈ ಸ್ಥಳಗಳಲ್ಲಿ ಪಿಂಡ ದಾನ ಅಥವಾ ಶ್ರಾದ್ಧ ಕರ್ಮಗಳನ್ನು ಮಾಡಲಾಗುತ್ತದೆ. ಇದು ಎಲ್ಲ ಪಿತೃ ದೋಷಗಳನ್ನು ನಿವಾರಣೆ ಮಾಡುತ್ತದೆ ಎನ್ನಲಾಗಿದೆ.
ಗಯಾ
ಭಾರತದ ಬಿಹಾರ ರಾಜ್ಯದಲ್ಲಿರುವ ಗಯಾ ಕ್ಷೇತ್ರವು ಫಾಲ್ಗು ನದಿಯ ಮೇಲಿದೆ. ಇದನ್ನು ಅತ್ಯಂತ ಪವಿತ್ರ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ನದಿಯು ವಿಷ್ಣುವಿನ ಅವತಾರವೆಂದೂ ಇಲ್ಲಿ ಶ್ರಾದ್ಧ ಮಾಡುವುದರಿಂದ ಲೌಕಿಕ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.
ಕಾಶಿ
ಗಂಗಾ ನದಿಯ ತಟದಲ್ಲಿರುವ ಕಾಶಿ ಅಥವಾ ವಾರಣಾಸಿಯು ವಿಶ್ವದ ಅತ್ಯಂತ ಪ್ರಾಚೀನ ನಗರಗಳಲ್ಲೊಂದು. ಧಾರ್ಮಿಕ ಗ್ರಂಥಗಳಲ್ಲಿಯೂ ಈ ನಗರಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ಭಾರತೀಯರಿಗೂ ಕಾಶಿ ಯಾತ್ರೆ ಅತ್ಯಂತ ಪುಣ್ಯ ಗಳಿಸವು ಮಾರ್ಗವಾಗಿದೆ. ಇಲ್ಲಿ ಶ್ರಾದ್ಧ ವಿಧಿಗಳನ್ನು ಪೂರೈಸುವುದರಿಂದ ಪೂರ್ವಜರಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.
ಪ್ರಯಾಗ್‌ರಾಜ್
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರವು ಭಾರತದ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಪಿಂಡ ದಾನ ಮಾಡಲು ಈ ತ್ರಿವೇಣಿ ಸಂಗಮವು ಪವಿತ್ರ ಸ್ಥಳವಾಗಿದೆ ಎಂದು ಪರಿಗಣಿಸಲಾಗಿದೆ. ಪಿತೃಗಳಿಗೆ ಪೂಜೆ ಸಲ್ಲಿಸುವುದರಿಂದ ಎಲ್ಲ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
ಹರಿದ್ವಾರ
ಗಂಗಾನದಿಯ ಉಗಮ ಸ್ಥಾನವಾದ ಹರಿದ್ವಾರ ಉತ್ತರಾಖಂಡದಲ್ಲಿದೆ. ಶ್ರಾದ್ಧ ವಿಧಿಗಳು, ತರ್ಪಣ, ಪಿಂಡ ದಾನ ಮತ್ತು ಪೂರ್ವಜರಿಗೆ ಸಂಬಂಧಿಸಿದ ಇತರ ಆಚರಣೆಗಳನ್ನು ನೆರವೇರಿಸಲು ಹರಿದ್ವಾರವು ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.
ಅಯೋಧ್ಯೆ (ಭರತ್ ಕುಂಡ್)
ಉತ್ತರ ಪ್ರದೇಶದ ಸರಯು ನದಿಯ ತಟದಲ್ಲಿರುವ ಭಾರತದ ಅತ್ಯಂತ ಪ್ರಾಚೀನ ನಗರವಾದ ಅಯೋಧ್ಯೆ ಶ್ರೀರಾಮನ ಜನ್ಮಸ್ಥಳವಾಗಿದೆ. 350 ಕಿಮೀ. ಉದ್ದದ ಸರಯು ನದಿಯ ದಡದಲ್ಲಿರುವ ರಾಮ್ ಪೈದಿ ಘಾಟ್ ಅಗಲಿದ ಪೂರ್ವಜರ ಆತ್ಮಗಳಿಗೆ ಮುಕ್ತಿ ನೀಡಲು ಹಾಗೂ ಅವರಿಂದ ಆಶೀರ್ವಾದ ಪಡೆಯಲು ಉತ್ತಮವಾಗಿದೆ. ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳು ತೊಳದು ಹೋಗುತ್ತವೆ ಎಂಬ ನಂಬಿಕೆಯಿದೆ.
ಪುರಿ ಜಗನ್ನಾಥ ಧಾಮ
ಒಡಿಶಾದ ಪುರಿಯಲ್ಲಿರುವ ಜಗನ್ನಾಥ ಧಾಮವು ಭಾರ್ಗವಿ ಮತ್ತು ಮಹಾನದಿಗಳ ಸಂಗಮವಾಗಿದೆ. ಪಿತೃ ಪಕ್ಷದ ಸಮಯದಲ್ಲಿ, ದಕ್ಷಿಣ ಭಾರತದ ಅನೇಕ ಭಕ್ತರು ತಮ್ಮ ಪೂರ್ವಜರಿಗೆ ಶ್ರಾದ್ಧ ವಿಧಿಗಳನ್ನು ಮಾಡಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಬದರಿನಾಥ
ವಿಷ್ಣುವಿನ ಪವಿತ್ರ ವಾಸಸ್ಥಾನವಾದ ಉತ್ತರಾಖಂಡದ ಬದರಿನಾಥವು ಭಾರತದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅಲಕನಂದಾ ನದಿಯ ದಡದಲ್ಲಿರುವ ಪ್ರಸಿದ್ಧ ಬ್ರಹ್ಮ ಕಪಾಲ್ ಘಾಟ್ ಹಿಂದೂ ಭಕ್ತರು ಲೌಕಿಕ ಪಾಪಗಳಿಂದ ಮುಕ್ತರಾಗಲು ಇರುವ ಸ್ಥಳವೆಂಬ ನಂಬಿಕೆಯಿದೆ.
Topics
ಸಂಬಂಧಿತ ಸುದ್ದಿಗಳು
religion
ಪಿತೃಪಕ್ಷ ಎಂದರೇನು ? ಹಿರಿಯರು ಭೂಮಿಗೆ ಬರೋದು ಯಾಕೆ ?
religion
ನರಸಿಂಹನ ಗುಹಾಂತರ ದೇವಾಲಯ- ದೇವರನ್ನು ಕಾಣೋದಕ್ಕೂ ಬೇಕು ಪರಿಶ್ರಮ
religion
ಗಣೇಶ ಚತುರ್ಥಿ ಯಾವಾಗ ? ವಿಘ್ನವಿನಾಯಕನ ಪ್ರತಿಷ್ಠಾಪನೆಗೆ ಶುಭ ಸಮಯ ಯಾವುದು ? ಇಲ್ಲಿದೆ ಸಂಪೂರ್ಣ ಮಾಹಿತಿ
religion

