ಥೈಲ್ಯಾಂಡ್‌ನಲ್ಲಿ ಡಬಲ್ ಗೋಲ್ಡ್: ಏಷ್ಯಾ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿಯ ನಿಖಿಲ್ ಸಾಧನೆ
ಥೈಲ್ಯಾಂಡ್‌ನಲ್ಲಿ ನಡೆದ ಏಷ್ಯಾ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಉಡುಪಿಯ ಯುವ ಸಾಧಕ ನಿಖಿಲ್ ಎ. ಪೂಜಾರಿ ಡಬಲ್ ಗೋಲ್ಡ್ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ.
By Meghana Pranuth | ಮೇಘನಾ ಪ್ರಣೂತ್
1 min read
ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿಪತಾಕೆ ಮತ್ತೆ ಮುಗಿಲೆತ್ತರಕ್ಕೆ ಹಾರಿದೆ. ಥೈಲ್ಯಾಂಡ್ನಲ್ಲಿ ನಡೆದ ಏಷ್ಯಾ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಉಡುಪಿಯ ಯುವ ಸಾಧಕ ನಿಖಿಲ್ ಎ. ಪೂಜಾರಿ ಡಬಲ್ ಗೋಲ್ಡ್ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ.
ಥೈಲ್ಯಾಂಡ್ನಲ್ಲಿ ಇತ್ತೀಚೆಗೆ ನಡೆದ 'World Fitness Federation of Yogasana Sports International' ಅಂದರೆ WFFYSI ಏಷ್ಯಾ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಖಿಲ್, 'Senior A' ವಿಭಾಗದ 'ಆರ್ಟಿಸ್ಟಿಕ್ ಸೊಲೊ' ಹಾಗೂ 'ಸಾಂಪ್ರದಾಯಿಕ ಯೋಗ' ಎರಡರಲ್ಲೂ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಎರಡು ಬಂಗಾರದ ಪದಕಗಳನ್ನು ತಂದುಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ದಿವಂಗತ ಆನಂದ ಪೂಜಾರಿ ಹಾಗೂ ಕುಸುಮ ಪೂಜಾರಿ ದಂಪತಿಯ ಕಿರಿಯ ಪುತ್ರನಾದ ನಿಖಿಲ್, ಬಾಲ್ಯದಿಂದಲೇ ಯೋಗದ ಕಡೆಗೆ ಅಪಾರ ಒಲವು ಹೊಂದಿದ್ದವರು.
ಕೆರ್ವಾಶೆ ಮೈನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಿಖಿಲ್, ಮಿಯಾರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿಯವರೆಗೆ ಓದಿದರು. ಬಳಿಕ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿಯುಸಿ ಮುಗಿಸಿ, ಪ್ರಸ್ತುತ ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.
ಮೂರು ಬಾರಿ ರಾಜ್ಯಮಟ್ಟದ ಯೋಗ ಸ್ಪರ್ಧೆಗಳಲ್ಲಿ ಮಿಂಚಿದ್ದ ನಿಖಿಲ್, 2026ರಲ್ಲಿ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯ 'Artistic Solo' ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಈ ಗೆಲುವು ಅವರಿಗೆ ನೇರವಾಗಿ ಅಂತರಾಷ್ಟ್ರೀಯ ವೇದಿಕೆಗೆ ಪ್ರವೇಶ ನೀಡಿತು.
ನಿಖಿಲ್ ಅವರ ಈ ಸಾಧನೆಯ ಹಿಂದೆ ಸೂಕ್ತ ಮಾರ್ಗದರ್ಶಕರ ಪಾತ್ರ ದೊಡ್ಡದಾಗಿದೆ. ಮಿಯಾರು ಶಾಲೆಯ ದೈಹಿಕ ಶಿಕ್ಷಕ ಜಗದೀಶ್ ಎಚ್., ಕಾರ್ಕಳದ ನರೇಂದ್ರ ಕಾಮತ್ ಆರಂಭಿಕ ಬುನಾದಿ ಹಾಕಿಕೊಟ್ಟರೆ, ಪ್ರಸ್ತುತ ಸಂತ ಜೋಸೆಫ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ವನೀಶಾ ರೋಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಎಂ. ನಿಖಿಲ್ ಅವರ ಯೋಗ ಪಯಣಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ನಿರಂತರ ಶ್ರಮ, ಕಠಿಣ ಅಭ್ಯಾಸ ಮತ್ತು ಯೋಗದ ಮೇಲಿನ ಕಟಿಬದ್ಧತೆಯಿಂದ ಗ್ರಾಮೀಣ ಭಾಗದ ಯುವಕನೊಬ್ಬ ಇಂದು ಏಷ್ಯಾದ ವೇದಿಕೆಯಲ್ಲಿ ಮಿಂಚಿ ದೇಶಕ್ಕೆ, ತವರೂರಿಗೆ ಹೆಮ್ಮೆ ತಂದಿದ್ದಾರೆ. ಯುವ ಸಾಧಕ ನಿಖಿಲ್ ಪೂಜಾರಿಗೆ ಅಭಿನಂದನೆಗಳು.
Topics
ಸಂಬಂಧಿತ ಸುದ್ದಿಗಳು
udupi
ಬೈಂದೂರು: ಲಾರಿ ತೆರವು ವೇಳೆ ಮತ್ತೊಂದು ಲಾರಿ ಹೈವೇ ಪೆಟ್ರೋಲ್ಗೆ ಡಿಕ್ಕಿ: ಬೈಕ್ ಸವಾರ ಸಾವು
udupi
ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ಶ್ರೀ ಬಿ. ಶಂಕರ ಶೆಟ್ಟಿ ಅವರಿಗೆ ಸನ್ಮಾನ
udupi
ಕಾಂಗ್ರೆಸ್ ಮುಖಂಡ ಮುನಿಯಾಲು ಪರಮಾಪ್ತ ಸೂರಜ್ ಶೆಟ್ಟಿ ಸೇರಿ ಮೂವರು ಸಸ್ಪೆಂಡ್
udupi

