Kannada News Next

religion

Money Vastu: ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಬೇಕಾ, ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇ ಬೇಡಿ

Money Vastu : ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡುತ್ತಿದ್ಯಾ ? ಕೆಲಸ ಕಾರ್ಯಗಳಲ್ಲಿ ಪದೇ ಪದೇ ಅಡೆತಡೆ ಉಂಟಾಗುತ್ತಿದ್ಯಾ ? ನಿಮ್ಮ ಸಮಸ್ಯೆಗೆ ವಾಸ್ತು ಶಾಸ್ತ್ರದಲ್ಲಿದೆ ಪರಿಹಾರ.

By Arun Gundmi | ಅರುಣ್‌ ಗುಂಡ್ಮಿ Editor-in-Chief
money vastu tips mistakes to avoid at home

Money Vastu : ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡುತ್ತಿದ್ಯಾ ? ಕೆಲಸ ಕಾರ್ಯಗಳಲ್ಲಿ ಪದೇ ಪದೇ ಅಡೆತಡೆ ಉಂಟಾಗುತ್ತಿದ್ಯಾ ? ಹಾಗಾದ್ರೆ ನಿಮ್ಮ ಸಮಸ್ಯೆಗೆ ವಾಸ್ತು ಶಾಸ್ತ್ರದಲ್ಲಿದೆ ಪರಿಹಾರ. ನೀವು ಮಾಡುವ ಸಣ್ಣ ತಪ್ಪುಗಳೇ ಇಂದು ಮನೆಯಲ್ಲಿ ಲಕ್ಷ್ಮೀ ನೆಲೆಸದಂತೆ ಮಾಡಿ ಬಿಡುತ್ತದೆ. ಹಾಗಾದ್ರೆ ನಿಮ್ಮ ಮನೆಯಲ್ಲಿ ವಾಸ್ತು ದೋಷಕ್ಕೆ ಕಾರಣವಾಗಿರುವ ಆ ತಪ್ಪುಗಳಾದ್ರೂ ಏನು ಅನ್ನೋದನ್ನು ನೋಡೋಣಾ ಬನ್ನಿ.

1. ಹಣದ ಕೈಚೀಲ (Wallet / Purse) ಎಚ್ಚರಿಕೆ

ಹರಿದ ಪರ್ಸ್‌ ಬಳಸಲೇ ಬೇಡಿ

ಸಾಮಾನ್ಯವಾಗಿ ಬಹುತೇಕರು ಹರಿದು ಹೋಗಿರುವ ಅಥವಾ ಹಳೆಯ ಪರ್ಸ್‌ಗಳನ್ನು ಬಹಳ ಸಮಯದವರೆಗೆ ಒಟ್ಟುಕೊಳ್ತಾರೆ. ಹರಿದ ಪರ್ಸ್‌ಗಳನ್ನು ಬಳಕೆ ಮಾಡಿದ್ರೆ ಅದು ನಿಮ್ಮನ್ನು ನಕಾರಾತ್ಮಕ ಶಕ್ತಿ ಆಕರ್ಷಿಸುವಂತೆ ಮಾಡುತ್ತದೆ. ಜೊತೆಗೆ ನಿಮಗೆ ಆರ್ಥಿಕ ನಷ್ಟವನ್ನು ಉಂಟು ಮಾಡಲಿದೆಯಂತೆ.

ಬಿಲ್‌ ಅಥವಾ ರಶೀದಿ ಇಡಲೇ ಬೇಡಿ

ಪರ್ಸ್‌ ಅನ್ನು ಹಣವನ್ನು ಇಡುವ ಉದ್ದೇಶದಿಂದ ಇಟ್ಟುಕೊಳ್ಳಲಾಗುತ್ತದೆ. ಹಣದ ಬದಲು ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಸಾಲದ ರಶೀದಿ, ಅನಗತ್ಯ ಕಾಗದ, ಹಳೆಯ ಬಿಲ್‌ ಇಡಬಾರದು. ಇವುಗಳು ನಿಮ್ಮ ಹಣಕಾಸಿನ ಹರಿವನ್ನು ತಡೆ ಹಿಡಿಯುತ್ತವೆ. ಹೀಗಾಗಿ ಪರ್ಸ್‌ನಲ್ಲಿ ಯಾವಾಗಲೂ ಹಣ ಮಾತ್ರ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ.

2. ಗಡಿಯಾರದ ದಿಕ್ಕು

ಮನೆಯಲ್ಲಿ ಅಳವಡಿಸುವ ಗೋಡೆ ಗರಿಯಾರ ಕೂಡ ಮನೆಯಲ್ಲಿ ಲಕ್ಷ್ಮೀ ನೆಲೆಸಬೇಕೇ ಅಥವಾ ಬೇಡವೇ ಅನ್ನೋದನ್ನು ನಿರ್ಧಾರ ಮಾಡುತ್ತದೆ. ಮನೆಯಲ್ಲಿ ಯಾವ ಗೋಡೆಗೆ ಗಡಿಯಾರ ಹಾಕಬೇಕು ಅನ್ನೋದು ಬಹಳ ಮುಖ್ಯ. ಹೀಗಾಗಿ ಮನೆಯ ದಕ್ಷಿಣ ದಿಕ್ಕಿನಲ್ಲಿ (South Direction) ಗಡಿಯಾರವನ್ನು ತಪ್ಪಿಯೂ ಕೂಡ ಹಾಕಲೇ ಬಾರದು. ಹೀಗೆ ಹಾಕಿದ್ರೆ ನಿಮ್ಮ ಪ್ರಗತಿಗೆ ಅದು ತಡೆಯನ್ನು ಒಡ್ಡುತ್ತದೆ ಅಲ್ಲದೇ ಮನೆಯಲ್ಲಿ ನಿಮಗೆ ನಕಾರಾತ್ಮಕ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಗಡಿಯಾರವನ್ನು ಎಂದಿಗೂ ಪಶ್ಚಿಮ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಾಕುವುದು ಸೂಕ್ತ.

3. ಮುಖ್ಯ ದ್ವಾರದ ಸ್ವಚ್ಛತೆ

ವಾಸ್ತುಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲು (Main Door) ಲಕ್ಷ್ಮೀ ದೇವಿಯ ಆಗಮನದ ಮಾರ್ಗ ಎಂದು ಹೇಳಲಾಗುತ್ತದೆ. ಮನೆಯ ಮುಖ್ಯದ್ವಾರದ ಬಳಿಯಲ್ಲಿ ಕಸ, ಒಡೆದ ಚಪ್ಪಲಿ ಅಥವಾ ಕತ್ತಲು ಇರಬಾರದು. ಮುಖ್ಯದ್ವಾರವು ಸದಾ ಸ್ವಚ್ಚವಾಗಿ ಮತ್ತು ಉತ್ತಮ ಬೆಳಕಿನಿಂದ ಕೂಡಿರಬೇಕು. ಬಾಗಿಲಿಗೆ ಯಾವುದೇ ಬಿರುಕುಗಳು ಇರದಂತೆ ನೋಡಿಕೊಳ್ಳುವುದು ಉತ್ತಮ.