2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ : ಶತಮಾನದ ಬಳಿಕ ಕ್ರಿಕೆಟ್‌ ಸೇರ್ಪಡೆ

Cricket At 2028 Olympics: 2028ರ ಒಲಿಂಪಿಕ್ಸ್​ ಈ ಬಾರಿ ಲಾಸ್​ ಏಂಜಲೀಸ್​ನಲ್ಲಿ ನಡೆಯುತ್ತಿದೆ. ಈಗಾಗಲೇ ಈ ಕ್ರೀಡಾಕೂಟದ ವೇಳಾಪಟ್ಟಿ ಪ್ರಕಟಗೊಂಡಿದೆ. ಜುಲೈ 14ರಂದು ಆರಂಭಗೊಳ್ಳಲಿರುವ ಒಲಿಂಪಿಕ್ಸ್ ಪಂದ್ಯಾಟವು ಜುಲೈ 30ರವರೆಗೂ ಇರಲಿದೆ. ಈ ಬಾರಿ 38 ವಿವಿಧ ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು ಈ ಪಟ್ಟಿಯಲ್ಲಿ ಕ್ರಿಕೆಟ್​ ಕೂಡ ಸ್ಥಾನ ಪಡೆದಿದೆ..!

ಯೆಸ್​,,! ಬರೋಬ್ಬರಿ 100 ವರ್ಷಗಳ ಬಳಿಕ ಒಲಿಂಪಿಕ್ಸ್​ಗೆ ಕ್ರಿಕೆಟ್​ ಪಂದ್ಯಾವಳಿ ಮರಳಿಬಂದಿದೆ. ಇದು ಕ್ರಿಕೆಟ್​ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇದೀಗ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ 2028ರ ಕ್ರಿಕೆಟ್​ ಪಂದ್ಯಕ್ಕೆ ವೇಳಾಪಟ್ಟಿ ಪ್ರಕಟಗೊಂಡಿದೆ.

ಮೊದಲ ಪಂದ್ಯವು ಜುಲೈ12ರಂದು ಆರಂಭಗೊಳ್ಳಲಿದೆ. ಅಧಿಕೃತವಾಗಿ ಯಾವ್ಯಾವ ತಂಡಗಳು ಯಾವ ದಿನದಂದು ಆಡಲಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಲಾಸ್​ ಏಂಜಲೀಸ್​ನಿಂದ ಸುಮಾರು 50 ಕಿಲೋಮೀಟರ್​ ದೂರದಲ್ಲಿರುವ ಪೊಮೆನಾದ ಫೇರ್​ಗ್ರೌಂಡ್ಸ್​ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪಂದ್ಯ ನಡೆಯಲಿದೆ.

ಯಾವ್ಯಾವ ದೇಶಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಒಟ್ಟೂ ಆರು ತಂಡಗಳು ಭಾಗವಹಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಆರ್‌ಸಿಬಿ ತಂಡದ ಮಾಲೀಕತ್ವ ಹೊಂದಲಿದ್ಯಾ ಹೊಂಬಾಳೆ ಫಿಲ್ಫ್?

1900ರ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್​ ಪಂದ್ಯ ಕೂಡ ಇತ್ತು. ಪ್ಯಾರಿಸ್‌ ನಲ್ಲಿ ನಡೆದ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​ ಮತ್ತು ಫ್ರಾನ್ಸ್​ ತಂಡಗಳು ಮಾತ್ರ ಇದ್ದವು. ಇದರಲ್ಲಿ ಗ್ರೇಟ್​ ಬ್ರಿಟನ್​ ತಂಡ ಚಿನ್ನದ ಪದಕ ಪಡೆದಿತ್ತು. ಈ ಬಾರಿ ಒಲಿಂಪಿಕ್ಸ್​ ಕ್ರಿಕೆಟ್​ ಚಿನ್ನದ ಪದಕ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕಿದೆ.

Exit mobile version