ಅಜಿತ್‌ ಅಗರ್ಕರ್‌ ಔಟ್‌, ಪಾರ್ಥಿವ್‌ ಪಟೇಲ್‌ ಇನ್‌ : ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಗುಡ್‌ನ್ಯೂಸ್

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಜಿತ್‌ ಅಗರ್ಕರ್‌ ಅಧಿಕಾರದ ಅವಧಿ ಇದೇ ತಿಂಗಳು ಕೊನೆಯಾಗಲಿದೆ.

WhatsAppPost
ajit agarkar out parthiv patel in virat rohit update
ajit agarkar out parthiv patel in virat rohit update

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಅಜಿತ್‌ ಅಗರ್ಕರ್‌ ಅವರ ಅಧಿಕಾರದ ಅವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ. ಅಜಿತ್‌ ಅಗರ್ಕರ್‌ ಬದಲು ಪಾರ್ಥಿವ್‌ ಪಟೇಲ್‌ ಆಯ್ಕೆ ಸಮಿತಿಯ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದ್ದು, ಈ ಬದಲಾವಣೆ ಇದೀಗ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ವರದಾನವಾಗುವ ಸಾಧ್ಯತೆಯಿದೆ.

ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೂ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಬಲವಂತದ ವಿದಾಯ ಹೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್‌ ಅಗರ್ಕರ್‌ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ಅನ್ನೋ ಆರೋಪ ಕೇಳಿಬರ್ತಿದೆ. 2027ರ ವಿಶ್ವಕಪ್‌ನಲ್ಲಿಯೂ ಈ ಇಬ್ಬರೂ ಆಟಗಾರರು ಆಡೋದು ಅನುಮಾನ ಎನ್ನಲಾಗಿತ್ತು. ಆದರೆ ಇದೀಗ ಇಬ್ಬರ ಪಾಲಿಗೆ ಶುಭ ಸುದ್ದಿಯೊಂದು ಸಿಕ್ಕಿದೆ.

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಜಿತ್‌ ಅಗರ್ಕರ್‌ ಅಧಿಕಾರದ ಅವಧಿ ಇದೇ ತಿಂಗಳು ಕೊನೆಯಾಗಲಿದೆ. ಇವರ ಸ್ಥಾನಕ್ಕೆ ಇದೀಗ ಭಾರತ ತಂಡ ಮಾಜಿ ವಿಕೆಟ್‌ ಕೀಪರ್‌, ಆರ್‌ಸಿಬಿ ತಂಡ ಆಟಗಾರ ಪಾರ್ಥಿವ್‌ ಪಟೇಲ್‌ ಅವರು ಆಯ್ಕೆಯಾಗುವುದು ಬಹುತೇಕ ಖಚಿತ. ಒಂದೊಮ್ಮೆ ಅಜಿತ್‌ ಅಗರ್ಕರ್‌ ತಮ್ಮ ಹುದ್ದೆಯನ್ನು ತೊರೆದ್ರೆ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ 2027ರ ವಿಶ್ವಕಪ್‌ನಲ್ಲಿ ಆಡುವುದು ಬಹುತೇಕ ಖಚಿತ.

ಒಂದೆಡೆ ಅಜಿತ್‌ ಅಗರ್ಕರ್‌ ಬಿಸಿಸಿಐ ಆಯ್ಕೆ ಸಮಿತಿಯಿಂದ ಹೊರ ನಡೆಯುತ್ತಿದ್ರೆ ಮತ್ತೊಂದೆಡೆಯಲ್ಲಿಯೂ ಗೌತಮ್‌ ಗಂಭೀರ್‌ ಬದಲಾವಣೆಯ ಕುರಿತು ಕೂಡ ಚರ್ಚೆ ನಡೆದಿದೆ. ಗೌತಮ್‌ ಗಂಭೀರ ಬದಲು ವಿವಿಎಸ್‌ ಲಕ್ಷ್ಮಣ್‌ ಕೂಡ ಟೀಂ ಇಂಡಿಯಾದ ಜವಾಬ್ದಾರಿ ಹೊರುವ ಸಾಧ್ಯತೆಯಿದೆ. ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಯಿಂದ ನಿರ್ಗಮಿಸಿದ ಬೆನ್ನಲ್ಲೇ ವಿವಿಎಸ್‌ ಲಕ್ಷ್ಮಣ್‌ ಅವರ ಹೆಸರು ಕೋಚ್‌ ಹುದ್ದೆಗೆ ಬಲವಾಗಿ ಕೇಳಿಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಗೌತಮ್‌ ಗಂಭೀರ್‌ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಈ ಇಬ್ಬರೂ ಬದಲಾವಣೆ ಆದ್ರೆ ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರಿಗೆ ಮತ್ತೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

Topics

ಸಂಬಂಧಿತ ಸುದ್ದಿಗಳು