Kannada News Next

cricket

ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಬ್ಯಾಡ್‌ ನ್ಯೂಸ್‌ : ಸದ್ಯ ಕ್ರಿಕೆಟ್‌ ಮರಳೋದು ಅನುಮಾನ

ಟೀಂ ಇಂಡಿಯಾದ ನಾಯಕರಾಗಿ ತಂಡವನ್ನು ಮುನ್ನೆಡೆಸಿದ್ದ ಹಾರ್ದಿಕ್‌ ಪಾಂಡ್ಯಗೆ ಇದೀಗ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿದೆ,

By Arun Gundmi | ಅರುಣ್‌ ಗುಂಡ್ಮಿ Editor-in-Chief
Hardik Pandya Injury Cricket Return Uncertain

ಮುಂಬೈ : ಭಾರತ ಕ್ರಿಕೆಟ್‌ ತಂಡ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅಭಿಮಾನಿಗಳಿಗೆ ಮತ್ತೊಂದು ಬ್ಯಾಡ್‌ ನ್ಯೂಸ್‌ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್‌ ಪಾಂಡ್ಯ ಅವರು ಇದೀಗ ಹೊಸ ಗಾಯಕ್ಕೆ ತುತ್ತಾಗಿದ್ದು, ಸದ್ಯಕ್ಕೆ ಕ್ರಿಕೆಟ್‌ಗೆ ಮರಳೋದು ಅನುಮಾನ ಎನ್ನಲಾಗುತ್ತಿದೆ.

ಟೀಂ ಇಂಡಿಯಾದ ನಾಯಕರಾಗಿ ತಂಡವನ್ನು ಮುನ್ನೆಡೆಸಿದ್ದ ಹಾರ್ದಿಕ್‌ ಪಾಂಡ್ಯಗೆ ಇದೀಗ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿದೆ, ಗಾಯದ ಸಮಸ್ಯೆಗೆ ಒಳಗಾಗಿ ಕೆಲವು ಸಮಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಾರ್ದಿಕ್‌ ಪಾಂಡ್ಯ ಹಳೆ ಗಾಯದಿಂದ ಚೇತರಿಸಿಕೊಂಡು ಮತ್ತೆ ಕ್ರಿಕೆಟ್‌ಗೆ ಕಂಬ್ಯಾಕ್‌ ಮಾಡಿದ್ದರು.

ಆದರೆ ಇದೀಗ ಹಾರ್ದಿಕ್ ಪಾಂಡ್ಯ ಅವರ ಬಲಗಾಲಿನ ಕೆಳಭಾಗದ ಸ್ನಾಯುವಿನಲ್ಲಿ (calf muscle) ನೋವು ಕಾಣಿಸಿಕೊಂಡಿದೆ. ಇದೇ ಹೊತ್ತಲ್ಲೇ ವೇಗದ ಬೌಲರ್‌ ಹರ್ಷಿತ್‌ ರಾಣಾ ಕೂಡ ಚೇತರಿಸಿಕೊಳ್ಳುತ್ತಿದ್ದು, ಜ್ವರ, ಗಂಟಲು ನೋವು ಹಾಗೂ ಶೀತದ ಕಾರಣದಿಂದ ಚೇತರಿಗೆ ಇನ್ನಷ್ಟು ವಿಳಂಭವಾಗುವ ಸಾಧ್ಯತೆಯಿದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿವೆ.

ಹಾರ್ದಿಕ್‌ ಪಾಂಡ್ಯವನ್ನು ಹಳೆಯ ಗಾಯದಿಂದ ತುರ್ತಾಗಿ ಚೇತರಿಸಿಕೊಳ್ಳುತ್ತಿದ್ದರು. ಅಲ್ಲದೇ ಬೌಲಂಗ್‌, ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ಅನ್ನು ಪೂರ್ಣಗೊಳಿಸಿದ್ದರು. ಸೆಪ್ಟೆಂಬರ್‌ 17ರಂದು ನಡೆದ ಅಭ್ಯಾಸ ಪಂದ್ಯದಲ್ಲಿಯೂ ಪಾಲ್ಗೊಂಡಿದ್ದರು. ಆದರೆ ಸೆಪ್ಟೆಂಬರ್‌ 19ರಂದು ನಡೆದ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರು ತಮ್ಮ ಬಲಗಾಲಿನ ಕೆಳಭಾಗದ ಸ್ನಾಯುವಿನ ನೋವನ್ನು ಅನುಭವಿಸಿದ್ದರು.

ಆಟವನ್ನು ಸ್ಥಗಿತಗೊಳಿಸಿ ಕೂಡಲೇ ಹಾರ್ದಿಕ್‌ ಪಾಂಡ್ಯ ಅವರನ್ನು ಎಂಆರ್‌ಐ (MRI) ಸ್ಕ್ಯಾನ್‌ಗೆ ಒಳಪಡಿಸಿದ್ದರು. ಈ ಸ್ಕ್ಯಾನ್‌ನಲ್ಲಿ ಮೂಳೆಯ ಒಳಭಾಗದಲ್ಲಿ ಅಲ್ಪ ಪ್ರಮಾಣದ ಊತ ಕಂಡುಬಂದಿದೆ. ಈ ವರದಿಯು 'ರೈಟ್ ಮೀಡಿಯಲ್ ಟಿಬಿಯಲ್ ಸ್ಟ್ರೆಸ್ ಸಿಂಡ್ರೋಮ್' (right medial tibial stress syndrome) ಸಮಸ್ಯೆಯನ್ನು ಸೂಚಿಸುತ್ತದೆ ಎಂದು ವರದಿಯಾಗಿದೆ. ಅಲ್ಲದೇ ಇದೇ ಕಾರಣದಿಂದಳೇ ಹಾರ್ದಿಕ್‌ ಪಾಂಡ್ಯ ಅವರಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅವರು ಕನಿಷ್ಠ ಆರರಿಂದ ಎಂಟು ತಿಂಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಅಲ್ಲದೇ ವಿಟಮಿನ್‌ ಡಿ ಪೂರಗಳನ್ನು ಸೇವನೆ ಮಾಡುವಂತೆ ಸೂಚಿಸಲಾಗಿದೆ. ಆರಂಭದಲ್ಲ ವ್ಯಾಯಾಮ, ನಂತರದಲ್ಿ ಓಡುವುದು, ಕ್ರಿಕೆಟ್‌ ಕೌಶಲಗಳನ್ನು ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಹಾರ್ದಿಕ್‌ ಮತ್ತೆ ಕ್ರಿಕೆಟ್‌ಗೆ ಮರಳುವುದು ವಿಳಂಭವಾಗುವ ಸಾಧ್ಯತೆಯಿದೆ.

ಫಿಟ್‌ ಆಗದ ಹರ್ಷಿತ್‌ ರಾಣಾ

ಭಾರತ ತಂಡದ ಮತ್ತೋರ್ವ ಆಟಗಾರ ಹರ್ಷಿತ್‌ ರಾಣಾ ಕೂಡ ತೊಡೆಯ ಗಾಯಕ್ಕೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಸೆಪ್ಟೆಂಬರ್‌ 7ರಂದು ನಡೆದ ಅಭ್ಯಾಸ ಪಂದ್ಯದ ವೇಳೆಯಲ್ಲಿ ಮತ್ತೆ ಗಾಯಕ್ಕೆ ತುತ್ತಾಗಿದ್ದರು, ಹೀಗಾಗಿ ಅವರಿಗೆ ಆರಂಭದಲ್ಲಿ ಂಉರು ವಾರಗಳ ವಿಶ್ರಾಂತಿಯನ್ನು ಸೂಚಿಸಲಾಗಿತ್ತು.

ಇದೀಗ ಹರ್ಷಿತ್‌ ರಾಣಾ ಅವರು ಜ್ವರ, ಗಂಟಲು ನೋವು, ಶೀತದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಹರ್ಷಿತ್‌ ರಾಣಾ ತೊಡೆಯ ನೋವಿನ ಸಮಸ್ಯೆಯಿಂದ ಹೊರಬರೋದಕ್ಕೆ ಇನ್ನಷ್ಟು ಸಮಯ ಬೇಕಾಗಲಿದೆ.

ಒಟ್ಟಿನಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ಹರ್ಷಿತ್‌ ರಾಣಾ ಕೂಡ ಪೂರ್ಣ ಪ್ರಮಾಣದಲ್ಲಿ ತರಬೇತಿಗೆ ಮರಳಬೇಕಾದ್ರೆ ಇನ್ನಷ್ಟು ಸಮಯ ಬೇಕಾಗಲಿದೆ. ಒಂದೊಮ್ಮೆ ಫಿಟ್‌ ಆದರೂ ಕೂಡ ಫಿಟ್ನೆಸ್‌ ಪರೀಕ್ಷೆಗೆ ಇಬ್ಬರೂ ಆಟಗಾರರು ಒಳಗಾಗಲೇ ಬೇಕಾಗಿದೆ.