IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ ನಾಯಕ, ಯುವರಾಜ್ ಸಿಂಗ್ ಕೋಚ್ ?
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಮಿನಿ-ಹರಾಜು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
IPL 2027: ಭಾರತ ತಂಡದ ಆಟಗಾರ ಅಭಿಷೇಕ್ ಶರ್ಮಾ ಸದ್ಯ ಟಿ20 ಕ್ರಿಕೆಟ್‌ನಲ್ಲಿ ಆರ್ಭಟಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸಸ್ ಹೈದ್ರಾಬಾದ್ ತಂಡದವಾಗಿ ಆಡುತ್ತಿರುವ ಅಭಿಷೇಕ್ ಶರ್ಮಾ ಹೈದ್ರಾಬಾದ್ ತಂಡವನ್ನು ತೊರೆದು, ಡೆಲ್ಲಿ ಕ್ಯಾಪಿಟಲ್ಸ್ ಸೇರ್ಪಡೆ ಆಗೋದು ಬಹುತೇಕ ಖಚಿತವಾಗಿದೆ. ಮತ್ತೊಂದೆಡೆ ಯುವರಾಜ್ ಸಿಂಗ್ ಡೆಲ್ಲಿ ತಂಡದಲ್ಲಿರುವುದು ಈ ಚರ್ಚೆಗೆ ಬಲ ಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಮಿನಿ-ಹರಾಜು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಮಿನಿ ಹರಾಜಿಗೂ ಮೊದಲೇ ಐಪಿಎಲ್‌ನ ಎಲ್ಲಾ 10 ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರು ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸುತ್ತಿವೆ. ಸನ್‌ರೈಸಸ್ ತಂಡವನ್ನು ಅಭಿಷೇಕ್ ಶರ್ಮಾ ತೊರೆಯುವ ಸಾಧ್ಯತೆಯಿದೆ.
ಅಭಿಷೇಕ್ ಶರ್ಮಾ ಸದ್ಯ ಸನ್‌ರೈಸಸ್ ಹೈದ್ರಾಬಾದ್ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಸದ್ಯ ಸನ್‌ರೈಸಸ್ ತಂಡ ಅಭಿಷೇಕ್ ಶರ್ಮಾಗೆ ಪಟ್ಟ ಕಟ್ಟೋದಕ್ಕೆ ಸಿದ್ದವಿಲ್ಲ. ಇದೇ ಕಾರಣದಿಂದಲೇ ಸ್ಪೋಟಕ ಆಟಗಾರ ಹೈದ್ರಾಬಾದ್ ತಂಡವನ್ನು ತೊರೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸನ್‌ರೈಸಸ್ ಹೈದ್ರಾಬಾದ್ ತಂಡ ಪ್ಯಾಟ್ ಕಮಿನ್ಸ್ ಅಲಭ್ಯತೆಯಲ್ಲಿ ಇಶಾನ್ ಕಿಶಾನ್ ಅವರನ್ನು ನಾಯಕನ್ನಾಗಿ ನೇಮಕ ಮಾಡಿದೆ. ಅಲ್ಲದೇ ಸದ್ಯ ಇಶಾನ್ ಕಿಶಾನ್ ಭರ್ಜರಿ ಫಾರ್ಮ್‌ನಲ್ಲಿದ್ದು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ಕಾರಣದಿಂದಲೇ ತಂಡದ ಮ್ಯಾನೇಜ್ಮೆಂಟ್ ಇಶಾನ್ ಕಿಶಾನ್ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸುವ ಸಾಧ್ಯತೆ ತೀರಾ ಕಡಿಮೆ.
IPL 2027ರಲ್ಲಿ ಆಸ್ಟ್ರೇಲಿಯಾ ತಂಡದ ಕಮಿನ್ಸ್ ಅಲಭ್ಯತೆಯ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ. ಆಶಸ್ ಸರಣಿ ಮತ್ತು 2027ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಜೊತೆಗೆ ವಿವಿಧ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಬ್ಯುಸಿಯಾಗಿರಲಿದೆ. ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಪ್ಯಾಟ್ ಕಮಿನ್ಸ್ ಹೆಚ್ಚಿನ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಡುವುದು ಅನಿವಾರ್ಯ. ಹೀಗಾಗಿ ಅವರು ಐಪಿಎಲ್‌ನಿಂದ ದೂರ ಇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಶಾನ್ ಕಿಶನ್ ಸನ್‌ರೈಸಸ್ ತಂಡ ಪೂರ್ಣಕಾಲಿಕ ನಾಯಕ
ಸದ್ಯ ಪ್ಯಾಟ್ ಕಮಿನ್ಸ್ ಅವರ ಅಲಭ್ಯತೆಯಲ್ಲಿ ಸನ್‌ರೈಸಸ್ ಹೈದ್ರಾಬಾದ್ ತಂಡವನ್ನು ಮುನ್ನೆಡೆಸುತ್ತಿರುವ ಇಶಾನ್ ಕಿಶಾನ್ ತಂಡದ ಪೂರ್ಣ ಕಾಲಿಕ ನಾಯಕರಾಗುವುದು ಖಚಿತ ಎನ್ನಲಾಗುತ್ತಿದೆ. 2019ರಿಂದಲೂ ಕೀಶಾನ್ ಕಿಶಾನ್ ಸನ್‌ರೈಸಸ್ ಹೈದ್ರಾಬಾದ್ ತಂಡದ ಭಾಗವಾಗಿದ್ದಾರೆ. ಪೂರ್ಣ ಪ್ರಮಾಣದ ನಾಯಕತ್ವದ ನೀಡದೇ ಇರುವ ಕುರಿತು ಇಶಾನ್ ಕಿಶಾನ್ ಅವರಿಗೂ ಕೂಡ ಅಸಮಾಧಾನವಿದೆ. ಅವರು ಕೂಡ ಇತರ ಪ್ರಾಂಚೈಸಿ ಜೊತೆಗೆ ಮಾತುಕತೆ ನಡೆಸಿದ್ದಾರೆಂದು ಸುದ್ದಿಯಾಗಿತ್ತು.
ಅಭಿಷೇಕ್ ಶರ್ಮಾ ಸೇರ್ಪಡೆಗೆ ಪ್ರಾಂಚೈಸಿಗಳ ಆಸಕ್ತಿ
ಸನ್‌ರೈಸರ್ಸ್ ಹೈದರಾಬಾದ್ ತಂಡದಿದ ಹೊರಬರುವ ಅಭಿಷೇಕ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರ್ಪಡೆ ಆಗಬಹುದು ಅನ್ನೋ ಚರ್ಚೆ ಶುರುವಾಗಿದೆ. ಮಾತ್ರವಲ್ಲದೇ 2027ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರ್ಪಡೆ ಆದ್ರೆ ಅವರು ತಂಡವನ್ನು ನಾಯಕನಾಗಿ ಮುನ್ನೆಡೆಸುವ ಸಾಧ್ಯತೆಯಿದೆ.
ಅಭಿಷೇಕ್ ಶರ್ಮಾ ಅವರ ಗುರು, ಭಾರತ ಕ್ರಿಕೆಟ್ ತಂಡ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದಾರೆ. ಹೀಗಾಗಿ ಯುವರಾಜ್ ಸಿಂಗ್ ಅಭಿಷೇಕ್ ಶರ್ಮಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಉತ್ಸುಕರಾಗಿದ್ದಾರೆ. ಮತ್ತೊಂದೆಡೆಯಲ್ಲಿ ಅಭಿಷೇಕ್ ಶರ್ಮಾಗಾಗಿ ಡೆಲ್ಲಿ ಯಾವ ಆಟಗಾರನನ್ನು ಬಿಟ್ಟುಕೊಡುತ್ತೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರವಲ್ಲ, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ತಂಡಗಳು ಕೂಡ ಅಭಿಷೇಕ್ ಶರ್ಮಾ ಸೇರ್ಪಡೆಗೆ ಮನಸ್ಸು ಮಾಡಿವೆ. ಇನ್ನು ಹೈದ್ರಾಬಾದ್ ತಂಡ ಸಿನಿಓ ಕೆ. ಷಣ್ಮುಗಂ ಅವರು ಅಭಿಷೇಕ್ ಶರ್ಮಾ ತಂಡ ತೊರೆಯುವ ವಿಚಾರವನ್ನು ತಳ್ಳಿಹಾಕಿದ್ದಾರೆ. ಆದರೆ ಮುಂದಿನ ವಾರ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.
Topics
ಸಂಬಂಧಿತ ಸುದ್ದಿಗಳು
cricket
Yuzvendra Chahal : ಭಾರತ ತಂಡದ ಖ್ಯಾತ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ನಿವೃತ್ತಿ ಘೋಷಣೆ
cricket
Pakistan vs India : ಹೈ-ವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧ: ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಭಾರತ-ಪಾಕ್ ಮಹಾಹೋರಾಟ
cricket
ICC Cricket World Cup 2027 : ಐಸಿಸಿ ಏಕದಿನ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ : ಆಸ್ಟ್ರೇಲಿಯಾ - ಭಾರತ ಮುಖಾಮುಖಿ, ಪಾಕ್ ಪಂದ್ಯ ಯಾವಾಗ
cricket

