Kannada News Next

cricket

ನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ತಂಡ ಪ್ರಕಟ : ಏಕದಿನ ಸರಣಿಗೆ ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ನಾಯಕರು

ನ್ಯೂಜಿಲೆಂಡ್‌ ವಿರುದ್ದದ 5 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ

By Arun Gundmi | ಅರುಣ್‌ ಗುಂಡ್ಮಿ Editor-in-Chief
india tour of new Zealand squad announced bcci Shubman gill Shreaya iyer captain

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮುಂಬರುವ ನ್ಯೂಜಿಲೆಂಡ್‌ ಸರಣಿಗೆ ಭಾರತ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದೆ. ಏಕದಿನ ತಂಡಕ್ಕೆ ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದೆ. ಮೊದಲ ಮೂರು ಏಕದಿನ ಪಂದ್ಯಗಳನ್ನು ಗಿಲ್‌ ಮುನ್ನೆಡೆಸುತ್ತಿದ್ರೆ, ಉಳಿದ ಎರಡು ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ನ್ಯೂಜಿಲೆಂಡ್‌ ವಿರುದ್ದದ 5 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಜಸ್ಪ್ರೀತ್‌ ಬೂಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಅವರನ್ನು ಸರಣಿಯಿಂದ ಕೈ ಬಿಡಲಾಗಿದೆ. ಆಕಾಶ್‌ ದೀಪ್‌ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ರೆ, ವಿಕೆಟ್‌ ಕೀಪರ್‌ ಹಾಗೂ ಬ್ಯಾಟ್ಸ್‌ಮನ್‌ ಕುಶಾಗ್ರ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.

ನಾಯಕ ಶುಭಮನ್‌ ಗಿಲ್‌ ಅವರಿಗೆ ಟೆಸ್ಟ್‌ ಪಂದ್ಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಅಂತಿಮ ಎರಡು ಏಕದಿನ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನೆಡೆಸಲಿದ್ದಾರೆ. ಇನ್ನು ಟೆಸ್ಟ್‌ ತಂಡದ ಉಪನಾಯಕನ ಜವಾಬ್ದಾರಿಯನ್ನು ಕನ್ನಡಿಗ ಕೆಎಲ್‌ ರಾಹುಲ್‌ ಅವರಿಗೆ ನೀಡಲಾಗಿದೆ. ಒಂದೊಮ್ಮೆ ಗಿಲ್‌ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾದ್ರೆ, ರಾಹುಲ್‌ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ರಿಷಬ್‌ ಪಂತ್‌, ಪ್ರಸಿದ್ದ ಕೃಷ್ಣ ಅವರನ್ನು ನ್ಯೂಜಿಲೆಂಡ್‌ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಇಬ್ಬರೂ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ನೀಡುವ ಅನುಮತಿಯ ಮೇಲೆ ಭಾರತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ದದ ಸರಣಿ ನವೆಂಬರ್‌ 4ರಿಂದ ಆರಂಭಗೊಳ್ಳಲಿದ್ದು, ಟೆಸ್ಟ್‌ ಸರಣಿಯು ನವೆಂಬರ್‌ 19ರಿಂದ ಪ್ರಾರಂಭಗೊಳ್ಳಲಿದೆ.

ಭಾರತ ಟೆಸ್ಟ್‌ ಹಾಗೂ ಏಕದಿನ ತಂಡ

ಭಾರತ ತಂಡ (ಮೊದಲ 3 ಏಕದಿನ ಪಂದ್ಯ ); ಬ್ಯಾಟ್ಸ್‌ಮನ್‌ : ಶುಭಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ( ವಿ.ಕೀ), ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ (ಉಪನಾಯಕ), ಆಲ್‌ರೌಂಡರ್‌ : ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್, ಬೌಲರ್‌ : ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಮನ್ ಧೀರ್.

ಭಾರತ ತಂಡ ( 4,5ನೇ ಏಕದಿನ ಪಂದ್ಯಕ್ಕೆ); ಬ್ಯಾಟ್ಸ್‌ಮನ್‌ : ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್ (ವಿಕೆಟ್‌ ಕೀಪರ್ ಮತ್ತು ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಆಲ್‌ರೌಂಡರ್‌ : ಅಕ್ಷರ್ ಪಟೇಲ್, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಯಶ್ ಠಾಕೂರ್, ನಮನ್ ಧೀರ್, ಬೌಲರ್‌ : ಗುರ್ನೂರ್ ಬ್ರಾರ್, ಔಕಿಬ್ ನಬಿ, ಕುಲದೀಪ್ ಯಾದವ್, ಮೊಹಮ್ಮದ್‌ ಸಿರಾಜ್.

ಭಾರತದ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ)‌, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್/ ಧ್ರುವ್ ಜುರೆಲ್ (ವಿಕೆಟ್‌ ಕೀಪರ್)‌, ಅನ್ಶುಲ್ ಕಾಂಬೋಜ್, ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ನಿಶ್‌ಕುಮಾರ್, ಕುಲದೀಪ್ ಯಾದವ್‌, ಆಕಾಶತನ್ ರೆಡ್ಡಿ, ನಿಶ್‌ಧರ್‌, ಜಸ್ಪ್ರೀತ್ ಬುಮ್ರಾ,.