ನಿವೃತ್ತರಾಗಿ ಇಲ್ಲಾ ತಂಡ ಬಿಡಿ : ಯುವರಾಜ್ ಸಿಂಗ್, ಗಂಭೀರ್ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಗಿದ್ದು ಹೇಗೆ ?
ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ತಂಡದಿಂದ ಪರೋಕ್ಷವಾಗಿ ಹೊರಗೆ ಹೋಗಿ ಎಂದು ಒತ್ತಾಯಿಸುವ ಸ್ಥಿತಿ ನಿರ್ಮಾಣವಾಗಿತ್ತು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಮುಂಬೈ : ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಟೀಂ ಇಂಡಿಯಾದ ಆಯ್ಕೆಗಾರರಾಗಿದ್ದ ಅಜಿತ್ ಅಗರ್ಕರ್ ನಡೆಸಿಕೊಂಡಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವಲ್ಲೇ ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವರ ಕ್ರಿಕೆಟ್ ವೃತ್ತಿ ಬದುಕು ಹೇಗೆ ಅಂತ್ಯವಾಯ್ತು ಅನ್ನೋದನ್ನು ಟೀಂ ಇಂಡಿಯಾದ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಟಿವಿ ಶೋವೊಂದರಲ್ಲಿ ಮಾತನಾಡಿದ ಸಂದೀಪ್ ಪಾಟೀಲ್, ತಾನು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ತಂಡದಿಂದ ಪರೋಕ್ಷವಾಗಿ ಹೊರಗೆ ಹೋಗಿ ಎಂದು ಒತ್ತಾಯಿಸುವ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ತಾನು ಎಂದಿಗೂ ಯಾವುದೇ ಆಟಗಾರನ ವಿಚಾರದಲ್ಲಿ ಏಕಪಕ್ಷೀಯವಾಗಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇಡೀ ಸಮಿತಿಯು ಒಮ್ಮತದ ತೀರ್ಮಾನವನ್ನು ಕೈಗೊಂಡಿತ್ತು ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಸಂದೀಪ್ ಪಾಟೀಲ್ 2012ರಿಂದ 2016ರವರೆಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿದ್ದರು.
ಸಂದೀಪ್ ಪಾಟೀಲ್ ಅವರ ಅವಧಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಹಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿತ್ತು. ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವರನ್ನು ಕೂಡ ಇದೇ ಅವಧಿಯಲ್ಲಿಯೇ ತಂಡದಿಂದ ಕೈಬಿಡಲಾಗಿತ್ತು.
ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರು ಎರಡು ಆಯ್ಕೆಯನ್ನು ಎದುರಿಸುತ್ತಿದ್ದರು. ಒಂದೋ ತಂಡವನ್ನು ತೊರೆಯುವುದು, ಇಲ್ಲ ವೃತ್ತಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವುದು. ಈ ಎಲ್ಲಾ ಆಟಗಾರರಿಗೆ ಇದಕ್ಕೆ ಹಿಂದಿನ ಕಾರಣವೇನು ಅನ್ನೋದು ಚೆನ್ನಾಗಿ ಗೊತ್ತಿತ್ತು.
ಸಂದೀಪ್ ಪಾಟೀಲ್ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಯಾವುದೇ ಆಟಗಾರ ನನ್ನ ಸ್ನೇಹಿತ ಅನ್ನೋ ಕಾರಣಕ್ಕೆ ಆತನನ್ನು ಭಾರತ ತಂಡಕ್ಕೆ ಆಯ್ಕೆ ಮಾಡೋದಕ್ಕೆ ಸಾಧ್ಯವಿಲ್ಲ. ನಮಗೆ ವಹಿಸಿರುವ ಜವಾಬ್ದಾರಿಯ ಬಗ್ಗೆ ನಮಗೆ ಶೇಕಡಾ ನೂರರಷ್ಟು ಬದ್ದತೆ ಇರಲೇ ಬೇಕು.
ಇದೀಗ ಅಜಿತ್ ಅಗರ್ಕರ್ ಕೂಡ ಭಾರತದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ವಿಚಾರದಲ್ಲಿಯೂ ಕಠಿಣ ನಿಲುವು ತಳೆದಿದ್ದರು. ಆದರೆ ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಅಜಿತ್ ಅಗರ್‌ಕರ್ ಅವರು ಟೀಂ ಇಂಡಿಯಾದ ಆಯ್ಕೆಗಾರರ ಹುದ್ದೆಯಿಂದ ಕೆಳಗೆ ಇಳಿದಿದ್ದಾರೆ.
ಅಜಿತ್ ಅಗರ್‌ಕರ್ ಅವಧಿಕಾರದ ಅವಧಿ ಮುಗಿದ ಬೆನ್ನಲ್ಲೇ ಭಾರತ ತಂಡ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಅವರನ್ನು ಆಯ್ಕೆ ಸಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇ ಹೊತ್ತಲ್ಲೇ ಸಂದೀಪ್ ಪಾಟೀಲ್ ನೀಡಿರುವ ಹೇಳಿಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
Topics
ಸಂಬಂಧಿತ ಸುದ್ದಿಗಳು
cricket
ರಿಷಬ್ ಪಂತ್ ಔಟ್, ಕುಮಾರ್ ಕುಶಾಗ್ರಗೆ ಸ್ಥಾನ : ಭಾರತ ಎ ತಂಡಕ್ಕೆ ಧ್ರುವ್ ಜುರೆಲ್ ನಾಯಕ
cricket
ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ನಲ್ಲಿ ಹೊಸ ಯುಗ : ಹರ್ಮನ್ಪ್ರೀತ್ ಕೌರ್ ಔಟ್, ಸ್ಮೃತಿ ಮಂಧಾನ ಹೊಸ ನಾಯಕಿ
cricket
ಆರ್ಸಿಬಿ ಖ್ಯಾತ ಆಟಗಾರ ಟೀಂ ಇಂಡಿಯಾ ನಾಯಕ : ವಿರಾಟ್ ಕೊಹ್ಲಿ ಅಲ್ಲ, ಮತ್ಯಾರು ?
cricket

