cricketಪ್ರಮುಖ ಸುದ್ದಿಗಳು

Royal Challengers Bengaluru: ಗೂಗಲ್‌ ಸರ್ಚ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಸ್ಥಾನ, ಯಾಕಿಷ್ಟು ಕ್ರೇಜ್‌ ?

ಟೆಕ್‌ ದೈತ್ಯ ಗೂಗಲ್‌ (Google) ಐಪಿಎಲ್‌ ( IPL 2026) ರ ಹುಡುಕಾಟದ ಮಾಹಿತಿಯ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚು ಸರ್ಚ್‌ ಆಗಿರುವ ಐಪಿಎಲ್‌ ತಂಡಗಳಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
Royal Challengers Bengaluru takes the top spot in Google searches why is there such a craze
Royal Challengers Bengaluru takes the top spot in Google searches why is there such a craze

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru – RCB) ತಂಡ ಇದೀಗ 2027ಕ್ಕೆ ಸಿದ್ದತೆ ನಡೆಸುತ್ತಿದೆ. ಐಪಿಎಲ್‌ ತಂಡಗಳ ಪೈಕಿ ಭಾರತದಲ್ಲಿಯೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅನ್ನೋ ಖ್ಯಾತಿಗೆ ಇದೀಗ ಆರ್‌ಸಿಬಿ ಪಾತ್ರವಾಗಿದೆ.

ಟೆಕ್‌ ದೈತ್ಯ ಗೂಗಲ್‌ (Google) ಪ್ರಕಟಿಸಿರುವ ಐಪಿಎಲ್‌ ( IPL 2026) ರ ಹುಡುಕಾಟದ ಮಾಹಿತಿಯ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚು ಸರ್ಚ್‌ ಆಗಿರುವ ಐಪಿಎಲ್‌ ತಂಡಗಳಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಆರ್‌ಸಿಬಿ ಮತ್ತೊಮ್ಮೆ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದೆ.

ಹಿರಿಯ ಆಟಗಾರ, ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ನೇತೃತ್ವದಲ್ಲಿ ದೀಗ ಆರ್‌ಸಿಬಿ ತಂಡ 2027ರ ಐಪಿಎಲ್‌ಗೆ ಸಜ್ಜಾಗುತ್ತಿದೆ. ಮುಂದಿನ ಹರಾಜು ಪ್ರಕ್ರಿಯೆಯ ಕುರಿತು ಚರ್ಚೆಗಳು ನಡೆಯುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಆರ್‌ಸಿಬಿ (RCB)ತಂಡದ ಬಗ್ಗೆ ಯಾಕಿಷ್ಟು ಕ್ರೇಜ್‌ ?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕರ್ನಾಟಕ ಮಾತ್ರವಲ್ಲದೇ ಭಾರತದ ಹಲವು ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಆಟಗಾರರ ಪ್ರದರ್ಶನ, ತಂಡದ ಸಂಯೋಜನೆ, ನಾಯಕತ್ವದ ಕುರಿತು ಚರ್ಚೆಗಳು ಜೋರಾಗಿವೆ. ಅದ್ರಲ್ಲೂ ವಿರಾಟ್‌ ಕೊಹ್ಲಿ ಮುಂದಿನ ಋತುವಿನಲ್ಲಿ ಆರ್‌ಸಿಬಿ ತಂಡವನ್ನು ಮುನ್ನೆಡೆಸುತ್ತಾರಾ ಅನ್ನೋ ಬಗ್ಗೆಯೂ ಮಾತುಗಳಿವೆ.

2027ರ ಐಪಿಎಲ್‌ನಲ್ಲಿ ಆರ್‌ಬಿಸಿ ತಂಡದ ಪ್ರಮುಖ ಆಟಗಾರರು ಯಾರು ?

ರಾಯಲ್‌ ಚಾಲೆಂಜರ್ಸ್‌ ಬೆಂಗೂರು ತಂಡದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಫಿಲ್‌ ಸಾಲ್ಟ್‌, ಭುವನೇಶ್ವರ್‌ ಕುಾರ್‌, ಟೀಂ ಡೇವಿಡ್‌, ಕೃನಾಲ್‌ ಪಾಂಡ್ಯ ಸೇರಿದಂತೆ ಹಲವು ಆಟಗಾರರು ಮುಂದಿನ ಐಪಿಎಲ್‌ 2027ಕ್ಕೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಐಪಿಎಲ್‌ ಹರಾಜಿಗೂ ಮೊದಲೇ ಕೆಲವು ಆಟಗಾರರನ್ನು ಬದಲಾವಣೆ ಮಾಡಲು ಆರ್‌ಸಿಬಿ ಯೋಜನೆ ರೂಪಿಸುತ್ತಿದೆ.

ಈ ಬಾರಿ ಕಪ್‌ ನಮ್ದೇ ಅಂತಾ ಪದೇ ಪದೇ ಹೇಳುತ್ತಿದ್ದ ಆರ್‌ಸಿಬಿ ಕಳೆದ ಎರಡು ವರ್ಷಗಳಲ್ಲಿ ಈ ಮಾತನ್ನು ನಿಜವಾಗಿಸಿದೆ. ಐಪಿಎಲ್‌ 2027ಕ್ಕೆ ಐಪಿಎಲ್‌ ಪ್ರಶಸ್ತಿಯನ್ನು ಜಯಿಸಿದ್ರೆ, ಐಪಿಎಲ್‌ ಟ್ರೋಫಿ ಗೆದ್ದ ಹ್ಯಾಟ್ರಿಕ್‌ ತಂಡ ಅನ್ನೋ ಖ್ಯಾತಿಗೆ ಪಾತ್ರವಾಗಲಿದೆ. ಒಟ್ಟಿನಲ್ಲಿ ಐಪಿಎಲ್‌ ಹೊಸ ಋತು ಆರಂಭಕ್ಕೂ ಮೊದಲೇ ಆರ್‌ಸಿಬಿ ಪಾಳಯದಲ್ಲಿ ಹೊಸ ಚರ್ಚೆ ಶುರುವಾಗಿದ್ದು, ಅಭಿಮಾನಿಗಳು ಐಪಿಎಲ್‌ ಕಣ್ತುಂಬಿಕೊಳ್ಳುವುದಕ್ಕೆ ಕಾತರರಾಗಿದ್ದಾರೆ.

Topics

ಸಂಬಂಧಿತ ಸುದ್ದಿಗಳು