ಭಾರತ- ಶ್ರೀಲಂಕಾ ಅಭ್ಯಾಸ ಪಂದ್ಯ : ಶುಭ್‌ಮನ್ ಗಿಲ್ ಔಟ್, ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವ ?
ಇಂದಿನಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದ ಮೂಲಕ ಟೆಸ್ಟ್ ಸರಣಿಗೆ ಸಜ್ಜಾಗುವುದಕ್ಕೆ ಭಾರತ ಯೋಚಿಸುತ್ತಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಭಾರತ ಹಾಗೂ ಶ್ರೀಲಂಕಾ ( India vs Sri Lanka) ನಡುವಿನ ಅಭ್ಯಾಸ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾ ( Team India) ಆಘಾತ ಅನುಭವಿಸಿದೆ. ಅಭ್ಯಾಸದ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ( Shubman Gill) ಗಾಯಗೊಂಡಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ( Indian Cricket Team) ವನ್ನು ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನೆಡೆಸುವ ಸಾಧ್ಯತೆಯಿದೆ.
ಇಂದಿನಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದ ಮೂಲಕ ಟೆಸ್ಟ್ ಸರಣಿಗೆ ಸಜ್ಜಾಗುವುದಕ್ಕೆ ಭಾರತ ಯೋಚಿಸುತ್ತಿದೆ. ಆದರೆ ಪಂದ್ಯ ಆರಂಭಕ್ಕೂ ಮೊದಲೇ ನಾಯಕ ಶುಭಮನ್ ಗಿಲ್ ಗಾಯಗೊಂಡಿರುವುದು ಟೀಂ ಇಂಡಿಯಾದ ಚಿಂತೆಗೆ ಕಾರಣವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ( World Test Championship) ಫೈನಲ್‌ಗೆ ಭಾರತ ಎಂಟ್ರಿ ಕೊಡಬೇಕಾದ್ರೆ, ಶ್ರೀಲಂಕಾ ವಿರುದ್ದ ಟೆಸ್ಟ್ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಶ್ರೀಲಂಕಾ ವಿರುದ್ದದ ಸರಣಿ ಗೆದ್ದರೆ ಮಾತ್ರವೇ ಟೆಸ್ಟ್ ಚಾಂಪಿಯನ್ ಆಗುವ ಭಾರತದ ಕನಸು ಜೀವಂತವಾಗಿ ಇರಲಿದೆ. ಅದ್ರಲ್ಲೂ ಗಿಲ್ ಫೀಲ್ಡಿಂಗ್ ಪ್ರ್ಯಾಕ್ಟಿಸ್ ವೇಳೆಯಲ್ಲಿ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದು, ಇಂದಿನ ಅಭ್ಯಾಸ ಪಂದ್ಯದಲ್ಲಿ ಆಡ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ.
ಹೆಬ್ಬೆರಳಿಗೆ ಗಾಯವಾಗುತ್ತಿದ್ದಂತೆಯೇ ನಾಯಕ ಶುಭಮನ್ ಗಿಲ್ ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಬ್ಯಾಂಡೇಜ್ ಸುತ್ತಿಕೊಂಡು ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಗಿಲ್ ಅವರ ಗಾಯ ಎಷ್ಟು ಪ್ರಮಾಣದಲ್ಲಿ ಇದೆ ಅನ್ನೋದು ಖಚಿತವಾಗಿಲ್ಲ. ಆದರೆ ಗಿಲ್ ತೀವ್ರ ನೋವಿನಿಂದ ಬಳಲುತ್ತಿರುವುದು ಕಂಡು ಬಂದಿದೆ.
ಟೆಸ್ಟ್ ಪಂದ್ಯಕ್ಕೂ ಹೊರ ಬೀಳ್ತಾರಾ ಗಿಲ್ ?
ಶುಭಮನ್ ಗಿಲ್ ಅವರ ಕೈಬೆರಳಿನ ಗಾಯ ಗಂಭೀರ ಸ್ವರೂಪದ್ದಾಗಿದ್ರೆ, ಅವರು ಇಂದಿನ ಪಂದ್ಯ ಮಾತ್ರವಲ್ಲ, ಮೊದಲ ಟೆಸ್ಟ್ ಪಂದ್ಯದಿಂದಲೂ ಹೊರ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಗಿಲ್ ಟೆಸ್ಟ್ ಸರಣಿಯಿಂದ ಹೊರಬಿದ್ರೆ ಕನ್ನಡಿಗ ಕೆಎಲ್ ರಾಹುಲ್ ನಾಯಕನಾಗುವ ಸಾಧ್ಯತೆಯಿದೆ. ಆದರೆ ಈ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇಂದಿನ ಪಂದ್ಯ ಆರಂಭದ ನಂತರವೇ ಗಿಲ್ ತಂಡದಲ್ಲಿ ಇರ್ತಾರಾ ಅನ್ನೋದು ಖಚಿತವಾಗಲಿದೆ.
ಭಾರತ ತಂಡ : ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ ಧ್ರುವ್ ಜುರೆಲ್, ಮಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಸರನಶ್ ಜೈನ್, ಔಕಿಬ್ ನಬಿ, ಮಾನವ್ ಸುತಾರ್, ಗುರ್ನೂರ್ ಬ್ರಾರ್,
ಶ್ರೀಲಂಕಾ ತಂಡ : ನಿಶಾನ್ ಮದುಷ್ಕಾ (ವಿ.ಕೀ.), ಸೋನಾಲ್ ದಿನುಶಾ (ನಾಯಕ), ನಿಪುಣ್ ಧನಂಜಯ, ರವಿಂದು ರಸಂತ, ಪವನ್ ರಥನಾಯಕ, ಅಹಾನ್ ವಿಕ್ರಮಸಿಂಘೆ, ರಮೇಶ್ ಮೆಂಡಿಸ್, ದಿಲುಂ ಸುಧೀರ, ವಿಶ್ವ ಫೆರ್ನಾಂಡೋ, ಲಹಿರು ಕುಮಾರ, ಪಸಿಂದು ಸೂರಿಯಬಂಡಾರ, ಇಸಿತಾ ವಿಜೆಸುನ್
Topics

