India vs West Indies : ತಿರುವನಂತಪುರ : 2027ರ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡ ಸಜ್ಜಾಗುತ್ತಿದೆ. ಈ ನಡುವಲ್ಲೇ ಭಾರತ ಇಂದಿನಿಂದ ವೆಸ್ಟ್‌ಇಂಡಿಸ್ ತಂಡದ ವಿರುದ್ದ ಏಕದಿನ ಸರಣಿಗಾಗಿ ಕಣಕ್ಕೆ ಇಳಿಯುತ್ತಿದೆ. ಆದರೆ ಖ್ಯಾತ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರಿತ್ ಬೂಮ್ರಾ ಸರಣಿಯಿಂದ ಹೊರಬಿದ್ದಿದ್ದಾರೆ.
ಏಕದಿನ ವಿಶ್ವಕಪ್ ಆರಂಭಕ್ಕೂ ಮೊದಲೇ ನಡೆಯುತ್ತಿರುವ ವೆಸ್ಟ್ ಇಂಡಿಸ್ ವಿರುದ್ದದ ಸರಣಿ ಭಾರತದ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕೆ ಇಳಿಯುತ್ತಿದೆ.
ಭಾರತ ಕ್ರಿಕೆಟ್ ತಂಡ ಪ್ರಸಕ್ತ ವರ್ಷದಲ್ಲಿ ಒಟ್ಟು ಮೂರು ಏಕದಿನ ಸರಣಿಗಳನ್ನು ಆಡಿದ್ದು, ಈ ಪೈಕಿ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಗಾಯದ ಸಮಸ್ಯೆಯ ಜೊತೆಗೆ ಟಿ20 ವಿಶ್ವಕಪ್ ನತ್ತ ಗಮನ ಹರಿಸುವ ಸಲುವಾಗಿ ಪ್ರಮುಖ ಆಟಗಾರರನ್ನು ಸರಣಿಯಲ್ಲಿ ಕಣಕ್ಕೆ ಇಳಿಸೋದಕ್ಕೆ ಸಾಧ್ಯವಾಗಿರಲಿಲ್ಲ.
ಇದೀಗ ವೆಸ್ಟ್ ಇಂಡಿಸ್ ವಿರುದ್ದದ ಸರಣಿಯಿಂದಲೂ ಖ್ಯಾತ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗದ ಬೌಲರ್ ಜಸ್ಪ್ರಿತ್ ಬೂಮ್ರಾ ಅವರ ಅನುಪಸ್ಥಿತಿಯಲ್ಲಿಯೇ ಟೀಂ ಇಂಡಿಯಾ ಕಣಕ್ಕೆ ಇಳಿಯುತ್ತಿದೆ. ಇಬ್ಬರು ಖ್ಯಾತನಾಮ ಆಟಗಾರರು ತಂಡದಲ್ಲಿ ಇಲ್ಲದೇ ಇರೋದು ಭಾರತ ತಂಡದ ಬೌಲಿಂಗ್ ಬಲವನ್ನು ಕುಸಿಯುವಂತೆ ಮಾಡಿದೆ.
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬ್ಯಾಕಪ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು 10 ಓವರ್ ಬೌಲಿಂಗ್ ಮಾಡುವುದು ಅನಿವಾರ್ಯವಾಗಲಿದೆ. ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ನಿತೇಶ್ ಕುಮಾರ್ ರೆಡ್ಡಿ, ಔಕಿಬ್ ನಬಿ ( Auqib Nabi), ತಂಡಕ್ಕೆ ಆಲ್‌ರೌಂಡರ್ ಬಲವನ್ನು ತಂದಿದ್ದಾರೆ. ಮತ್ತೊಂದೆಡೆಯಲ್ಲಿ ಕನ್ನಡಿಗ ಪ್ರಸಿದ್ದ ಕೃಷ್ಣ, ಮೊಹಮ್ಮದ್ ಸಿರಾಜ್, ನಮ್ ದೀರ್, ಗುರ್‌ನೂರ್ ಬ್ರಾರ್ ಬೌಲಿಂಗ್ ಬಲವನ್ನು ಹೆಚ್ಚಿಸಿದ್ದಾರೆ.
ಮತ್ತೊಂದೆಡೆಯಲ್ಲಿ ವೆಸ್ಟ್ ಇಂಡಿಸ್ ತಂಡ 2026ರಲ್ಲಿ ಯಾವುದೇ ಪಂದ್ಯಗಳಲ್ಲಿಯೂ ಗೆಲುವು ಕಂಡಿಲ್ಲ. ಅದ್ರಲ್ಲೂ 2006ರಿಂದ ಇಲ್ಲಿಯವರೆಗೆ ಭಾರತದ ವಿರುದ್ದ ದ್ವಿಪಕ್ಷೀಯ 50 ಓವರ್ ಗಳ ಏಕದಿನ ಸರಣಿಯಲ್ಲಿ ಗೆಲುವು ಕಂಡಿಲ್ಲ. ಸದ್ಯ ವೆಸ್ಟ್ ಇಂಡಿಸ್ ತಂಡ ಬೌಲಿಂಗ್ ಬಲ ಬಲಿಷ್ಠವಾಗಿದೆ.
ಮ್ಯಾಥ್ಯೂ ಫೋರ್ಡೆ ಮತ್ತು ಜೇಡನ್ ಸೀಲ್ಸ್ ಸ್ವಿಂಗ್ , ಅಲ್ಜಾರಿ ಜೋಸೆಫ್ ಅಪಾಯಕಾರಿ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಟೆಲ್ ಲಾಸ್ 'ಎಕ್ಸ್-ಫ್ಯಾಕ್ಟರ್' ಆಗಿ ತಂಡಕ್ಕೆ ಬಲ ತುಂಬಲಿದ್ದಾರೆ. ಮತ್ತೊಂದೆಡೆಯಲ್ಲಿ ಬ್ಯಾಟಿಂಗ್ ಕೂಡ ಬಲಿಷ್ಠವಾಗಿದ್ದು, ಶಾಯ್ ಹೋಪ್ ಬ್ಯಾಟಿಂಗ್ ಪಡೆಯನ್ನು ಮುನ್ನೆಡೆಸುತ್ತಿದ್ದಾರೆ.
India vs West Indies : ಕೊನೆಯ ಐದು ಪಂದ್ಯಗಳ ಫಲಿತಾಂಶ
ಭಾರತ: LLWWW
ವೆಸ್ಟ್ ಇಂಡೀಸ್: WLLLW
15000 ರನ್ ಮೈಲಿಗಲ್ಲು ಸಾಧಿಸ್ತಾರಾ ವಿರಾಟ್ ಕೊಹ್ಲಿ
ಭಾರತ ತಂಡ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ವೆಸ್ಟ್ ಇಂಡಿಸ್ ವಿರುದ್ದದ ಇಂದಿನ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ವಿರಾಟ್ ಕೊಹ್ಲಿ66.50 ಸರಾಸರಿ ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಏಕದಿನ ಪಂದ್ಯಗಳಲ್ಲಿ 15,000ರನ್ ಗಳಿಸೋದಕ್ಕೆ ಕೇವಲ 59 ರನ್‌ಗಳ ಅಗತ್ಯವಿದೆ.. ಇಂದಿನ ಪಂದ್ಯದಲ್ಲಿ ಕೊಯ್ಲಿ ಈ ಮೈಲಿಗಲ್ಲು ಸಾಧಿಸಬಹುದಾಗಿದೆ.
ಅಭ್ಯಾಸದ ವೇಳೆ ಗಾಯ : ಕಣಕ್ಕೆ ಇಳಿತಾರಾ ಶುಭಮನ್ ಗಿಲ್
ನೆಟ್ಸ್ ಅಭ್ಯಾಸದ ವೇಳೆ ಮೊಣಕೈಗೆ ಗಾಯಗೊಂಡಿದ್ದರೂ ಕೂಡ ಭಾರತದ ನಾಯಕ ಶುಭಮನ್ ಗಿಲ್ ಇಂದಿನ ಪಂದ್ಯದಲ್ಲಿ ಆಡೋದಕ್ಕೆ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಅವರಂತ ಆಟಗಾರರು ಸದ್ಯ ಏಷ್ಯನ್ ಗೇಮ್ಸ್‌ನಲ್ಲಿ ಬ್ಯುಸಿ ಆಗಿದ್ದು, ಏಕದಿನ ಸರಣಿಯಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಯುವ ಆಟಗಾರರನ್ನೇ ನೆಚ್ಚಿಕೊಳ್ಳಬೇಕಾಗಿದೆ.
ಭಾರತ ಮತ್ತು ವೆಸ್ಟ್ ಇಂಡಿಸ್ ಪ್ಲೇಯಿಂಗ್ 11
ಭಾರತ (ಸಂಭವನೀಯ ತಂಡ): 1 ರೋಹಿತ್ ಶರ್ಮಾ, 2 ಶುಭಮನ್ ಗಿಲ್ (ನಾಯಕ), 3 ವಿರಾಟ್ ಕೊಹ್ಲಿ, 4 ಋತುರಾಜ್ ಗಾಯಕ್ವಾಡ್, 5 ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), 6 ರವೀಂದ್ರ ಜಡೇಜಾ, 7 ನಿತೀಶ್ ಕುಮಾರ್ ರೆಡ್ಡಿ, 8 ನಮನ್ ಧೀರ್/ಗುರ್ನೂರ್ ಬ್ರಾರ್/ಔಕಿಬ್ ನಬಿ, 9 ಕುಲದೀಪ್ ಯಾದವ್, 10 ಪ್ರಸಿದ್ಧ್ ಕೃಷ್ಣ, 11 ಮೊಹಮ್ಮದ್ ಸಿರಾಜ್
ವೆಸ್ಟ್ ಇಂಡಿಸ್ (ಸಂಭವನೀಯ ತಂಡ): ಶಾಯ್ ಹೋಪ್ (ನಾಯಕ, ವಿಕೆಟ್ ಕೀಪರ್ ),2. ಜಾನ್ ಕ್ಯಾಂಪ್‌ಬೆಲ್, 3. ಕೀಸಿ ಕಾರ್ಟಿ, 4. ಜಸ್ಟಿನ್ ಗ್ರೀವ್ಸ್, 5..ಶೆರ್ಫೇನ್ ರುದರ್‌ಫೋರ್ಡ್, 6. ಅಮೀರ್ ಜಾಂಗೂ, 7. ಮ್ಯಾಥ್ಯೂ ಫೋರ್ಡ್, 8.. ರೋಸ್ಟನ್ ಚೇಸ್, 9. ಗುಡಕೇಶ್ ಮೋಟೀ, 10. ಅಲ್ಜಾರಿ ಜೋಸೆಫ್, 11. ಜೇಡೆನ್ ಸೆ