Kannada News Next

cricket

India vs Westindies :6,6,6,6,6,6 ಸ್ಪೋಟಕ ಶತಕ ಸಿಡಿಸಿ ತಾಕತ್ತು ತೋರಿಸಿದ ಕನ್ನಡಿಗ ಕೆಎಲ್‌ ರಾಹುಲ್‌

ಕೆಎಲ್‌ ರಾಹುಲ್‌ ಇದುವರೆಗೆ ಒಟ್ಟು 101 ಏಕದಿನ ಪಂದ್ಯಗಳನ್ನು ಆಡಿದ್ದು, 91 ಇನ್ನಿಂಗ್ಸ್‌ಗಳಲ್ಲಿ 3541 ರನ್‌ ಬಾರಿಸಿದ್ದಾರೆ. ಇದರಲ್ಲಿ 20 ಅರ್ಧ ಶತಕ ಹಾಗೂ 9 ಶತಕ ಬಾರಿಸಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: BCCI/ Twitter

India vs Westindies - KL Rahul : ಭಾರತ ಹಾಗೂ ವೆಸ್ಟ್‌ ಇಂಡಿಸ್‌ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಕೇವಲ 87 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್‌ 10 ಬೌಂಡರಿ ನೆರವಿನಿಂದ 129 ಸಿಡಿಸುವ ಮೂಲಕ ಆಯ್ಕೆಗಾರರ ಬಾಯಿ ಮುಚ್ಚಿಸಿದ್ದಾರೆ. ಈ ಮೂಲಕ ತನ್ನ ತಾಕತ್ತು ಏನು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಆರಂಭಿಕ ಆಟಗಾರನಾಗಿ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದ ಕೆಎಲ್‌ ರಾಹುಲ್‌ ಸದ್ಯ ಐದನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಆದರೂ ಸಿಕ್ಕ ಅವಕಾಶವನ್ನು ರಾಹುಲ್‌ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಭದ್ರ ಬುನಾದಿ ಹಾಕಿದ್ದು ಕೆಎಲ್‌ ರಾಹುಲ್‌.

ಕೆಎಲ್‌ ರಾಹುಲ್‌ ಇದುವರೆಗೆ ಒಟ್ಟು 101 ಏಕದಿನ ಪಂದ್ಯಗಳನ್ನು ಆಡಿದ್ದು, 91 ಇನ್ನಿಂಗ್ಸ್‌ಗಳಲ್ಲಿ 3541 ರನ್‌ ಬಾರಿಸಿದ್ದಾರೆ. ಇದರಲ್ಲಿ 20 ಅರ್ಧ ಶತಕ ಹಾಗೂ 9 ಶತಕ ಬಾರಿಸಿದ್ದಾರೆ. 100 ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡಿಸ್‌ ಪಂದ್ಯವನ್ನು ಆಡಿದ್ದರೂ ಕೂಡ ಬ್ಯಾಟಿಂಗ್‌ಗೆ ಇಳಿಯೋದಕ್ಕೆ ಸಾಧ್ಯವಾಗಲೇ ಇಲ್ಲ. ಆದರೆ 101ನೇ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಸಾಧನೆಯ ಶಿಖರವೇರಿದ್ದಾರೆ.

View twitter embed

ಕಳೆದ ಒಂದು ವರ್ಷಗಳಲ್ಲಿ ಕೆಎಲ್‌ ರಾಹುಲ್‌ ಸುಮಾರು ಏಕದಿನ ಪಂದ್ಯಗಳನ್ನು ಆಡಿದ್ದು, 500 ಅಧಿಕ ರನ್‌ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 3 ಅರ್ಧ ಶತಕ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 159 ಪಂದ್ಯಗಳನ್ನು ಆಡಿದ್ದು, 5815 ರನ್‌ಗಳಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 45 ಅರ್ಧ ಶತಕ ಸಿಡಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಇದುವರೆಗೆ ಒಟ್ಟು 72 ಪಂದ್ಯಗಳನ್ನು ಆಡಿದ್ದು, 2 ಶತಕ ಹಾಗೂ 22 ಅರ್ಧ ಶತಕ ಸೇರಿದಂತೆ ಒಟ್ಟು 2265 ರನ್‌ ಬಾರಿಸಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಕೂಡ ಕೆಎಲ್‌ ರಾಹುಲ್‌ಗೆ ಭಾರತ ಟಿ20 ಪಂದ್ಯಗಳನ್ನು ಆಡೋದಕ್ಕೆ ಅವಕಾಶ ಸಿಗದೆ ಇರುವುದು ದುರಂತ. ಸದ್ಯ ಭಾರತ ಟೆಸ್ಟ್‌ ತಂಡದಲ್ಲಿ ಕೆಎಲ್‌ ರಾಹುಲ್‌ ಆಪತ್ಬಾಂಧವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏಕದಿನ, ಟೆಸ್ಟ್‌, ಟಿ20 ಪಂದ್ಯಗಳನ್ನು ಆಡುವ ತಾಕತ್ತು ಇದ್ದರೂ ಕೂಡ ಇಂತಹ ಆಟಗಾರನಿಗೆ ಅವಕಾಶ ಸಿಗದೇ ಇರೋದು ಮಾತ್ರ ದುರಂತರವೇ ಸರಿ.