News Next Kannada

cricket

Manav Suthar : ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾನವ ಸುತಾರ್‌ ಮೋಡಿ : 2 ಟೆಸ್ಟ್‌ 17 ವಿಕೆಟ್‌ ಸಾಧನೆ

ಮಾನವ್‌ ಸುತಾರ್‌ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದುಕೊಂಡಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದರು.

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: Star Sports Screen Grab

ಮುಂಬೈ : ಭಾರತ ಹಾಗೂ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಇಡೀ ಟೆಸ್ಟ್‌ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್‌ ಆಕರ್ಷಕ ಶತಕ ಗಮನ ಸೆಳೆದಿದೆ. ಆದರೆ ಭಾರತದ ಯುವ ಸ್ಪಿನ್ನರ್‌ ಮಾನವ ಸುತಾರ್ ಇದೀಗ ವಿಶ್ವದ ಕ್ರಿಕೆಟ್‌ ದಿಗ್ಗಜರೇ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ್ದಾರೆ.

ರಾಜಸ್ಥಾನ ಮೂಲದ ಯುವ ಸ್ಪಿನ್ನರ್‌ ಮಾನವ್‌ ಸುತಾರ್‌ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ ಒಟ್ಟು 10 ವಿಕೆಟ್‌ ಪಡೆದುಕೊಂಡಿದ್ದಾರೆ. ಬ್ರೇಟ್‌ಲೀ, ಬೂಮ್ರಾ, ಭುವನೇಶ್ವರ್‌ ಕುಮಾರ್‌ ಅವರಂತಹ ಕ್ರಿಕೆಟ್‌ ದಿಗ್ಗಜರೇ ಮಾಡಲಾದ ಸಾಧನೆಯನ್ನು ಇದೀಗ ಯುವ ಸ್ಪಿನ್ನರ್‌ ಮಾಡಿ ತೋರಿಸಿದ್ದು, ಕೇವಲ ಎರಡೇ ಎರಡು ಟೆಸ್ಟ್‌ ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 17 ವಿಕೆಟ್‌ ಪಡೆಯುವ ಮೂಲಕ ಸುತಾರ್‌ ವಿಶಿಷ್ಟ ದಾಖಲೆ ಮಾಡಿದ್ದಾರೆ.

ಮಾನವ್‌ ಸುತಾರ್‌ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದುಕೊಂಡಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದರು. ವಿಶ್ವದ ಶ್ರೇಷ್ಟ ಬೌಲರ್‌ಗಳಿಗೆ ಮಾಡಲಾಗದ ಸಾಧನೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಳ್ಳುವ ಮೂಲಕ ಸುತಾರ್‌ ಇದೀಗ ಕ್ರಿಕೆಟ್‌ ವಲಯಲ್ಲಿ ಗಮನ ಸೆಳೆದಿದ್ದಾರೆ.

ಮಾನವ್‌ ಸುತಾರ್‌ ಅಪ್ಘಾನಿಸ್ತಾನ ವಿರುದ್ದದ ಟೆಸ್ಟ್‌ ಪಂದ್ಯದ ಮೂಲಕ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಆಡಲು ಅವಕಾಶ ಪಡೆದಿದ್ದ ಸುತಾರ್‌ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದುಕೊಂಡಿದ್ದು, ಟೆಸ್ಟ್‌ ಪಂದ್ಯದಲ್ಲಿ ಒಟ್ಟು 7 ವಿಕೆಟ್‌ ಪಡೆಯುವ ಮೂಲಕ ಸಾಧನೆ ಮಾಡಿದ್ದರು.