Sports

ಮಹೇಂದ್ರ ಸಿಂಗ್‌ ಧೋನಿಗೆ IPL 2024 ಕೊನೆಯ ಐಪಿಎಲ್‌ ? ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತರಬೇತಿ ಆರಂಭಿಸಿದ ಮಾಹಿ

Published by
Kannada News Next Desk

IPL 2024  Mahendra Singh Dhoni : ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League 2024)  ಅತೀ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡ ತಂಡ. ಇದರ ಶ್ರೇಯಸ್ಸು ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಸಲುತ್ತದೆ. ಅಷ್ಟೇ ಯಾಕೆ ಭಾರತಕ್ಕೆ ಎರಡು ವಿಶ್ವಕಪ್‌ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದು ಕೂಡ ಇದೇ ಧೋನಿ. ಆದ್ರೆ ಮಾಹಿಗೆ IPL 2024 ಕೊನೆಯ ಐಪಿಎಲ್‌ ಅನ್ನೋ ಮಾತುಗಳು ಕೇಳಿಬರುತ್ತಿವೆ.

Image Credit to Original Source

ಮಹೇಂದ್ರ ಸಿಂಗ್‌ ಧೋನಿ. ಭಾರತ ಕ್ರಿಕೆಟ್‌ ಕಂಡ ಶ್ರೇಷ್ಟ ನಾಯಕ. ಬ್ಯಾಟಿಂಗ್‌, ಕೀಪಿಂಗ್‌, ನಾಯಕತ್ವದಿಂದಲೇ ಅವರು ವಿಶ್ವದ ಗಮನ ಸೆಳೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಸದ್ಯ ಐಪಿಎಲ್‌ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾರೆ. ಅಷ್ಟೇ ಯಾಕೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಅವರು ಮುನ್ನೆಡೆಸುತ್ತಿದ್ದಾರೆ.

ಭಾರತ ಕ್ರಿಕೆಟ್ನ ದಿಗ್ಗಜ ಆಟಗಾರ ಎಂಎಸ್‌ ಧೋನಿ ಸದ್ಯ ಐಪಿಎಲ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿ ಮತ್ತೆ ಧೋನಿ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ಮೊಣಕಾಲಿನ ಗಾಯದ ನಡುವಲ್ಲೇ ಕಣಕ್ಕೆ ಇಳಿದು ಐಪಿಎಲ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಜಾರ್ಖಂಡ್‌ನ ದಿಯೋರಿ ಮಾ ದೇವಸ್ಥಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ cskfansofficial ಅಪ್‌ಲೋಡ್ ಮಾಡಿದ ಪೋಸ್ಟ್‌ನಲ್ಲಿ, MS ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕಳೆದ ಬಾರಿ ಮೊಣಕಾಲು ಗಾಯದ ಹಿನ್ನೆಲೆಯಲ್ಲಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆಡುವುದು ಅನುಮಾನ ಅನ್ನೋ ಸುದ್ದಿಗಳು ಹರಿದಾಡಿದ್ದವು. ಆದರೆ ಗಾಯದ ನಡುವಲ್ಲೇ ಧೋನಿ ತಂಡಕ್ಕಾಗಿ ಆಡುವ ಮೂಲಕ ಪ್ರಶಸ್ತಿಯನ್ನು ಗೆಲ್ಲಿಸಿಕೊಟ್ಟಿದ್ದರು.

ಇದನ್ನೂ ಓದಿ : ವಿರಾಟ್-ಅನುಷ್ಕಾ 2ನೇ ಮಗುವಿನ ಗುಟ್ಟು ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್‌ : ಅಭಿಮಾನಿಗಳ ಆಕ್ರೋಶ

ಮಹೇಂದ್ರ ಸಿಂಗ್‌ ಧೋನಿ ಸದ್ಯ 250 ಐಪಿಎಲ್‌ ಪಂದ್ಯಗಳನ್ನು ಆಡಿದ್ದು, ಈ ಪೈಕಿ 218 ಇನ್ನಿಂಗ್ಸ್‌ಗಳ ಮೂಲಕ 5082 ರನ್‌ ಸಿಡಿಸಿದ್ದಾರೆ. ಇದರಲ್ಲಿ ಒಟ್ಟು 24 ಅರ್ಧ ಶತಕ ಒಳಗೊಂಡಿದೆ. 350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10772 ರನ್‌ ಬಾರಿಸಿದ್ದಾರೆ. 10  ಶತಕ ಹಾಗೂ 73  ಅರ್ಧ ಶತಕ ಒಳಗೊಂಡಿದೆ. ಅಷ್ಟೇ ಅಲ್ಲದೇ 90  ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 6 ಶತಕ, 33  ಅರ್ಧ ಶತಕದ ನೆರವಿನಿಂದ 4,876 ರನ್‌ ಸಿಡಿಸಿದ್ದಾರೆ.

Image Credit to Original Source

ಟಿ20 ಪಂದ್ಯಗಳಲ್ಲಿಯೂ ಮಹೇಂದ್ರ ಸಿಂಗ್‌ ಧೋನಿ ಉತ್ತಮ ರನ್‌ ಕಲೆ ಹಾಕಿದ್ದು, ಇದುವರೆಗೆ ಒಟ್ಟು 98 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 2 ಅರ್ಧ ಶತಕ ಒಳಗೊಂಡಂತೆ, 1617 ರನ್‌ ಬಾರಿಸಿದ್ದಾರೆ. ಭಾರತ ಕಂಡ ಶ್ರೇಷ್ಟ ವಿಕೆಟ್‌ ಕೀಪರ್‌ಗಳ ಸಾಲಿಗೆ ಸೇರಿರುವ ಮಹೇಂದ್ರ ಸಿಂಗ್‌ ಧೋನಿ ವಿಕೆಟ್‌ ಕೀಪಿಂಗ್‌ನಲ್ಲಿ ವಿಶ್ವದಾಖಲೆಯನ್ನೇ ಬರೆದಿದ್ದಾರೆ.

ಇದನ್ನೂ ಓದಿ : ಐಪಿಎಲ್ 2024 ಬಳಿಕ ಮುಂಬೈ ಇಂಡಿಯನ್ಸ್‌ನಿಂದ ದೂರವಾಗ್ತಾರಾ ರೋಹಿತ್‌ ಶರ್ಮಾ ? ಸುಳಿವು ಕೊಟ್ಟ ಕೋಚ್‌ ಬೌಚರ್‌

ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಧೋನಿ ಮುಂಬರುವ ಐಪಿಎಲ್‌ ಪಂದ್ಯಾವಳಿಗಾಗಿ ಕಠಿಣ ಅಭ್ಯಾಸವನ್ನು ಆರಂಭಿಸಿದ್ದಾರೆ. ಧೋನಿಗೆ ಸದ್ಯ ಇದು ಕೊನೆಯ ಐಪಿಎಲ್‌ ಎನ್ನಲಾಗುತ್ತಿದೆ. ಈ ಬಾರಿಯೂ ಐಪಿಎಲ್‌ ಟ್ರೋಫಿ ಗೆಲ್ಲುವ ಮೂಲಕ ವಿಶಿಷ್ಟ ದಾಖಲೆ ಬರೆಯುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ : 200, 200, 200…! ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

IPL 2024 last IPL for Mahendra Singh Dhoni? Mahi started Net Practice for Chennai Super Kings

Share