ವಿರಾಟ್-ಅನುಷ್ಕಾ 2ನೇ ಮಗುವಿನ ಗುಟ್ಟು ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್‌ : ಅಭಿಮಾನಿಗಳ ಆಕ್ರೋಶ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Virat kohli – Anushka Sharma : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣದಿಂದಲೇ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ಹಾಗೂ ಭಾರತ ನಡುವಿನ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಅನ್ನೋ ಸುದ್ದಿಯನ್ನು ಸದ್ಯ ಎಬಿ ಡಿವಿಲಿಯರ್ಸ್‌ ಬಹಿರಂಗ ಪಡಿಸಿದ್ದಾರೆ.

AB de Villiers on Twitter for Virat kohli and -Anushka Sharma pregnancy news reveal
Image Credit to Original Source

ಜನವರಿ 25 ರಂದು ನಡೆದ ಆರಂಭಿಕ ಟೆಸ್ಟ್‌ಗೆ ಮೂರು ದಿನಗಳ ಮೊದಲು ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಂದ ವಿರಾಟ್‌ ಕೊಹ್ಲಿ ದೂರ ಉಳಿದಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಕೊಹ್ಲಿ ವೈಯಕ್ತಿಕ ಕಾರಣದಿಂದಾಗಿ ಮೊದಲ ಎರಡು ಟೆಸ್ಟ್‌ ಪಂದ್ಯಗಳನ್ನು ಆಡುತ್ತಿಲ್ಲ ಎಂದು ಪ್ರಕಟಿಸಿತ್ತು.

ಈ ನಡುವಲ್ಲೇ ದಕ್ಷಿಣ ಆಫ್ರಿಕಾದ ಲೆಜೆಂಡರಿ ಕ್ರಿಕೆಟಿಗ ಮತ್ತು ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್ ಶನಿವಾರ, ಫೆಬ್ರವರಿ 3 ರಂದು, ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಉಳಿದ ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಆಡುವುದು ಕೂಡ ಅನುಮಾನವಾಗಿದೆ.

ಇದನ್ನೂ ಓದಿ : Indian Premier League -IPL 2024 : ಹಾರ್ದಿಕ್‌ ಪಾಂಡ್ಯ ಬದಲು ಮುಂಬೈ ಇಂಡಿಯನ್ಸ್‌ ನಾಯಕರಾಗ್ತಾರೆ ಈ ಮೂವರು ಆಟಗಾರರು

ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗುವ ನಿರ್ಧಾರ ಸರಿಯಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್‌, ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಅವರು ಕುಟುಂಬದ ಜೊತೆಗೆ ಇರುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಅವರ ನಿರ್ಧಾರವನ್ನು ತಾನು ಸ್ವಾಗತಿಸುತ್ತೇನೆ ಎಂದು ಹೇಳಿಕೊಂಡಿದ್ದರು.

AB de Villiers on Twitter for Virat kohli and -Anushka Sharma pregnancy news reveal
Image Credit to Original Source

ಎಬಿ ಡಿವಿಲಿಯರ್ಸ್‌ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳು ಎಬಿ ಡಿವಿಲಿಯರ್ಸ್‌ ವಿರುದ್ದ ಗರಂ ಆಗಿದ್ದಾರೆ. ವಿರುಷ್ಕಾ ಇಷ್ಟು ದಿನ ಮುಚ್ಚಿಟ್ಟಿದ್ದ ಗುಟ್ಟವನ್ನು ಎಬಿ ಡಿವಿಲಿಯರ್ಸ್‌ ಬಹಿರಂಗ ಪಡಿಸಿದ್ದಾರೆ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವರು ಸುದ್ದಿ ಕೇಳಿ ಸಂತಸಗೊಂಡಿದ್ದಾರೆ.

ಇದನ್ನೂ ಓದಿ : 200, 200, 200…! ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

ಮೊದಲ ಟೆಸ್ಟ್‌ ಪಂದ್ಯವನ್ನು ಸೋತಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಇನ್ನೂ ಒಂದು ದಿನ ಬಾಕಿ ಉಳಿದಿದ್ದು, ಬೌಲರ್‌ಗಳು ಕಮಾಲ್‌ ಮಾಡಿದ್ರೆ ಮಾತ್ರವೇ ಭಾರತಕ್ಕೆ ಗೆಲುವು ಧಕ್ಕಲಿದೆ. ಇನ್ನೊಂದೆಡೆಯಲ್ಲಿ ಉಳಿದ ಟೆಸ್ಟ್‌ ಪಂದ್ಯಕ್ಕೆ ವಿರಾಟ್‌ ಕೊಹ್ಲಿಯ ಲಭ್ಯತೆಯ ಕುರಿತು ಇನ್ನೂ ಯಾವುದೇ ಖಚಿತತೆ ಇಲ್ಲ. ಬಿಸಿಸಿಐ ಕೂಡ ವಿರಾಟ್‌ ಕೊಹ್ಲಿ ಅವರ ಸೂಚನೆಗಾಗಿ ಕಾಯುತ್ತಿದೆ. ಒಟ್ಟಿನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋದು ಖಚಿತವಾಗಿದೆ.

AB de Villiers on Twitter for Virat kohli and -Anushka Sharma pregnancy news reveal

Comments are closed.