ಮನುಷ್ಯರಂತೆ ಪ್ರಾಣಿಗಳಿಗೂ ಇನ್ಮುಂದೆ ಆಧಾರ್​ ಕಾರ್ಡ್ : ಕ್ಯೂಆರ್​ ಕೋಡ್​ನಲ್ಲಿರಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಆಧಾರ್​ ಕಾರ್ಡ್ ಕಡ್ಡಾಯ. ಆದರೆ ಈಗ ವಿಷಯ ಏನು ಅಂದ್ರೆ, ಮನುಷ್ಯರಂತೆಯೇ ಪ್ರಾಣಿಗಳಿಗೂ ಆಧಾರ್​ ಕಾರ್ಡ್​ ನೀಡುವ ಪ್ರಕ್ರಿಯೆ ಸಿದ್ಧಗೊಂಡಿದೆ.

ಎನಿಮಲ್​ ಐಡೆಂಟಿಫಿಕೇಷನ್​ ಕಾರ್ಡ್​ ನೀಡಲು ಸ್ಮಾರ್ಟ್​ ಪ್ಲಾಕ್​ ಅಪ್ಲಿಕೇಶನ್​ ಸಿದ್ಧಗೊಳಿಸಲಾಗಿದೆ. ಈ ಆ್ಯಪ್​ನ ಮೂಲಕ ಜಾನುವಾರು ಹಾಗೂ ಬೀದಿ ನಾಯಿಗಳ ನಿರ್ವಹಣೆ ಮಾಡಲು ಹುಬ್ಬಳ್ಳಿ – ಧಾರವಾಡ ಪಾಲಿಕೆ ಸಿದ್ಧಗೊಂಡಿದೆ.

ಮನುಷ್ಯನ ಫಿಂಗರ್​ ಪ್ರಿಂಟ್​ ಮೂಲಕ ಆಧಾರ್​ ಕಾರ್ಡ್ ನೀಡಲಾಗುತ್ತದೆ. ಅದೇ ರೀತಿ ಮೂಖ ಪ್ರಾಣಿಗಳು ಮೂಗು, ಬಾಯಿ ಕಲರ್​ ಮಾದರಿಯನ್ನು ಆಧರಿಸಿ ಗುರುತಿನ ಚೀಟಿ ನೀಡಲಾಗುತ್ತದೆ. ಧಾರವಾಡ ಐಐಟಿ ಇನ್​ಕ್ಯೂಬೇಷನ್​ ಸೆಂಟರ್​ನಲ್ಲಿ ಐಡಿಎಎಸ್​ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್​ನ ಪ್ರಸಾದ್​ ಹಾಗೂ ಸುಚಿತ್​ ಎಂಬವರು ಇಂತಹ ಬಯೋಮೆಟ್ರಿಕ್​ ಟ್ಯಾಗಿಂಗ್​ ತಂತ್ರಾಶವನ್ನು ತಂದಿದ್ದಾರೆ.

ಪ್ರಾಣಿಗಳಿಗೆ ಗುರುತಿನ ಕಾರ್ಡ್​ನಲ್ಲಿ ನೋಂದಣಿ ಸಂಖ್ಯೆ ಹಾಗೂ ಸ್ಕ್ಯಾನರ್​ ಕೋಡ್​ ಒದಗಿಸಲಾಗುತ್ತದೆ. ಇದರಲ್ಲಿ ಪ್ರಾಣಿ ಮಾಲೀಕನ ವಿಳಾಸ, ಮೊಬೈಲ್​ ಸಂಖ್ಯೆ,ಪ್ರಾಣಿಯ ಲಿಂಗ, ತಳಿ, ವಯಸ್ಸು ಎಲ್ಲವೂ ಇರುತ್ತದೆ.ಈ ಟ್ಯಾಗ್​ನ್ನು ಪ್ರಾಣಿಯ ಕಿವಿಗೆ ಹಾಕಲಾಗಿರುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆ ಆರಂಭ; ಡಿಎಲ್, ಆರ್‌ಸಿಯಲ್ಲಿ ಮಹತ್ವದ ಬದಲಾವಣೆ

ಇದನ್ನು ಸ್ಕ್ಯಾನ್​ ಮಾಡುವ ಮೂಲಕ ಪ್ರಾಣಿಗಳ ಸಂಪೂರ್ಣ ವಿವರ ಪಡೆಯಬಹುದಾಗಿದೆ. ಈ ಮೂಲಕ ಪ್ರಾಣಿಗಳ್ಳತನದ ಅಪಾಯವನ್ನು ಕಡಿಮೆ ಮಾಡಲು ಹುಬ್ಬಳ್ಳಿ ಧಾರವಾಡ ಪಾಲಿಕೆ ಚಿಂತನೆ ನಡೆಸಿದೆ.

ಹುಬ್ಬಳ್ಳಿ – ಧಾರವಾಡ ಪಾಲಿಕೆಯ ಈ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಲ್ಲಿ ಹುಬ್ಬಳ್ಳಿ – ಧಾರವಾಡ ಪಾಲಿಕೆ ಯಶಸ್ವಿಯಾದಲ್ಲಿ ಭವಿಷ್ಯದಲ್ಲಿ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆಯಿದೆ.

Exit mobile version