ಆಪರೇಷನ್​ ಬಿಪಿಎಲ್​ ಸಕ್ಸಸ್​… 4.09 ಲಕ್ಷ ಕುಟುಂಬಗಳಿಗೆ ಬಿಪಿಎಲ್​ ರದ್ದು

Operation BPL Card: ಬಡವರಿಗೆ ಪಡಿತರ ಪೂರೈಕೆಯಲ್ಲಿ ಹಾಗೂ ಸಮಾಜದಲ್ಲಿ ಜೀವನ ನಡೆಸಲು ಅನಾನುಕೂಲವಾಗಬಾರದು ಎಂಬ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಬಿಪಿಎಲ್​ ಕಾರ್ಡ್​ಗಳನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ಅನೇಕರು ನಮ್ಮ ನಡುವೆ ಇದ್ದಾರೆ.

ಬಡವರು ಬಿಪಿಎಲ್​ ಹೊಂದಿರುವುದಕ್ಕಿಂತಲೂ ಹೆಚ್ಚಾಗಿ ಎಲ್ಲಾ ಸವಲತ್ತುಗಳಿದ್ದೂ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅನರ್ಹತೆ ಹೊಂದಿದ್ದರೂ ಬಿಪಿಎಲ್​ ಕಾರ್ಡ್​ಗಳನ್ನು ಅನೇಕ ಕುಟುಂಬಗಳು ಹೊಂದಿವೆ.

ಈ ಸಂಬಂದ ಆಪರೇಷನ್​ ಬಿಪಿಎಲ್ (Operation BPL Card)​ ನಡೆಸಿದ ರಾಜ್ಯ ಸರ್ಕಾರವು ರಾಜ್ಯಾದ್ಯಂತ 4.09 ಲಕ್ಷ ಬಿಪಿಎಲ್​ ಕಾರ್ಡ್​ಗಳನ್ನು ರದ್ದುಗೊಳಿಸಿದೆ.

ತೆರಿಗೆ ಪಾವತಿ, ಕೃಷಿ ಭೂಮಿಗಳನ್ನು ಹೊಂದಿದ್ದರೂ ಸಹ ಬಿಪಿಎಲ್​ ಕಾರ್ಡ್​ಗಳನ್ನು ಹೊಂದಿದ್ದ ನಾಗರಿಕರನ್ನು ಅನರ್ಹರೆಂದು ಪರಿಗಣಿಸಿ ಅವರ ಪಡಿತರ ಚೀಟಿಯನ್ನು ಎಪಿಎಲ್​ ಕಾರ್ಡ್​ಗಳನ್ನಾಗಿ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪರಿವರ್ತಿಸಿದೆ.

ಬಿಪಿಎಲ್​ ಕಾರ್ಡ್ ಮೂಲಕ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ ಲಕ್ಷಾಂತರ ಕುಟುಂಬಗಳು ಸರ್ಕಾರದ ಈ ಕ್ರಮದಿಂದ ನಿರಾಶೆಗೆ ಒಳಗಾಗಿವೆ. ಆದರೆ ಸರ್ಕಾರದ ಈ ಕಾರ್ಯಾಚರಣೆಯಿಂದ ಒಳ್ಳೆಯ ಲಾಭ ಪಡೆದುಕೊಂಡಿದೆ.

ಇದನ್ನೂ ಓದಿ: ಪಡಿತರ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ

ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆಯು ಹಲವು ಮಾನದಂಡಗಳನ್ನು ಪರಿಗಣಿಸಿ 4 ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ಅನರ್ಹ ಎಂದು ಗುರುತಿಸಿದೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಪಡಿತರಕ್ಕಿಂತ ಹೆಚ್ಚಾಗಿ ಜನರು ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್​ ಕಾರ್ಡ್ ಹೊಂದಿದ್ದರು ಎಂದು ತಿಳಿದು ಬಂದಿದೆ.

ಇನ್ನು ಸರ್ಕಾರಕ್ಕೆ ವಂಚಿಸಿ ಎಪಿಎಲ್​ ಅರ್ಹತೆ ಹೊಂದಿದ್ದರೂ ಬಿಪಿಎಲ್​ ಕಾರ್ಡ್ ಹೊಂದಿರುವವರಿಗೆ ಭಾರೀ ಮೊತ್ತದ ದಂಡ ವಿಧಿಸಲು ಸರ್ಕಾರ ಪ್ಲಾನ್​ ಮಾಡಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಅವಿವಾಹಿತರಿಗೆ ಗುಡ್‌ನ್ಯೂಸ್ : ಸರಳ ಸಾಮೂಹಿಕ ವಿವಾಹ ಯೋಜನೆಯಡಿ ಸಿಗಲಿದೆ 50 ಸಾವಿರ ರೂಪಾಯಿ

ಶೀಘ್ರದಲ್ಲಿಯೇ ಇದಕ್ಕಾಗಿ ಹೊಸ ನೀತಿ ಕೂಡ ಜಾರಿಗೆ ಬರಲಿದ್ದು ಈ ಬಗ್ಗೆ ನಿಯಮಾವಳಿಗಳನ್ನು ನಿಗದಿಪಡಿಸಲು ರಾಜ್ಯ ನಾಗರಿಕ ಮತ್ತು ಆಹಾರ ಸರಬರಾಜು ಪೂರೈಕೆ ಇಲಾಖೆ ಚಿಂತನೆ ನಡೆಸಿದೆ

Exit mobile version