karnataka

KSRTC Bus : ಎಬಿವಿಪಿ ಹೋರಾಟಕ್ಕೆ ಜಯ : ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್

Published by
Kannada News Next Desk

KSRTC Bus :  ಕುಂದಾಪುರ : ಬಸ್‌ ಸೌಕರ್ಯಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ABVP) ನ ಹೋರಾಟಕ್ಕೆ ಕೊನೆಗೂ ಮೊದಲ ಗೆಲುವು ಸಿಕ್ಕಿದೆ. ಉಡುಪಿ (udupi)  ಜಿಲ್ಲೆಯ ಗ್ರಾಮೀಣ ಭಾಗವಾಗಿರುವ ಆಜ್ರಿಯಿಂದ ಕುಂದಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ (KSRTC BUS) ಸಂಚಾರ ಇಂದಿನಿಂದ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮೂಡಿದೆ.

Image Credit : News Next Kannada

ಬಸ್‌ ಸೌಕರ್ಯಗಳಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಇದರ ನೇತೃತ್ವದಲ್ಲಿ ಕುಂದಾಪುರದ ಶಾಸ್ತ್ರೀ ಪಾರ್ಕ್‌ ಬಳಿ ಐದು ದಿನಗಳ ಹಿಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆಯಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್‌ ಸೌಕರ್ಯ ಒದಗಿಸಿದ್ದಾರೆ.

ಈಗಾಗಲೇ ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಬಸ್‌ ಸಂಚಾರ ನಡೆಯುತ್ತಿದೆ. ಈ ಬಸ್‌ ಸಂಚಾರದಿಂದಾಗಿ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಕೂಡ ಅನುಕೂಲವಾಗಲಿದೆ. ಅನೇಕ ಸಮಯದಿಂದ ಈ ಮಾರ್ಗಕ್ಕೆ ಬಸ್ ನ ಬೇಡಿಕೆ ಇದ್ದರೂ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಮನವಿ ಸಲ್ಲಿಸಿದರೂ ಸಮರ್ಪಕ ಬಸ್ ವ್ಯವಸ್ಥೆ ಮಾಡದ ಅಧಿಕಾರಿಗಳು ಹೋರಾಟ ನಡೆಸಿದ ಐದು ದಿನಗಳ ಒಳಗೆ ಬಸ್ ಬಿಟ್ಟಿರುವುದು ವಿದ್ಯಾರ್ಥಿಗಳ ತಾಕತ್ತು ತೋರಿಸಿದೆ.

ಇದನ್ನೂ ಓದಿ : KSRTC Bus Problems : ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ : ಕುಂದಾಪುರದಲ್ಲಿ ಎಬಿವಿಪಿ ಪ್ರತಿಭಟನೆ

ಕುಂದಾಪುರದಿಂದ ಸುಮಾರು 15ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಮಾಡುವ ಬೇಡಿಕೆಯನ್ನು ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಈ ಎಲ್ಲಾ ಮಾರ್ಗಗಳಲ್ಲಿ ಬಸ್‌ ಸಂಚಾರದ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿದ್ದು. ಬೇಡಿಕೆ ಈಡೇರಿಕೆ ಆಗದೇ ಇದ್ರೆ ಮತ್ತೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

Image Credit : News Next Kannada

ಇದನ್ನೂ ಓದಿ : ರಾಜ್ಯ ಸರ್ಕಾರ, ಬಿಬಿಎಂಪಿಯ ಮತ್ತೊಂದು ಎಡವಟ್ಟು: ಶಿಕ್ಷಕರ ಆಯ್ಕೆ ಹೊಣೆ ಸೆಕ್ಯೂರಿಟಿ ಏಜೆನ್ಸಿಗೆ

ವಿದ್ಯಾರ್ಥಿಗಳ ಬೇಡಿಕೆ ಇರುವ ಮಾರ್ಗಗಳು :

  • ಕುಂದಾಪುರ – ಹೆಮ್ಮಾಡಿ- ವಂಡ್ಸೆ – ಕೊಲ್ಲೂರು – ಬೈಂದೂರು ಮಾರ್ಗ
  • ಕುಂದಾಪುರ – ಉದಯ ನಗರ
  • ಕುಂದಾಪುರ- ಆಜ್ರಿ- ಸಿದ್ದಾಪುರ- ಉಡುಪಿ
  • ಕುಂದಾಪುರ ಸಿದ್ದಾಪುರ- ಹೊಸಂಗಡಿ
  • ಕುಂದಾಪುರ – ಗಂಗೊಳ್ಳಿ
  • ಕುಂದಾಪುರ – ಮಲ್ಲಿಕಟ್ಟೆ – ನೂಜಾಡಿ ಕುಂದಾಪುರ – ಮಾವಿನ ಕಟ್ಟೆ – ಗುಲ್ವಾಡಿ – ಕೊಲ್ಲೂರು – ಬೈಂದೂರು ಮಾರ್ಗ
  • ಕುಂದಾಪುರ – ಮೂಡುಬಗೆ- ಆಜ್ರಿ – ಕಮಲಶಿಲೆ
  • ಕುಂದಾಪುರ – ಆಜ್ರಿ – ಸಿದ್ದಾಪುರ
  • ಕುಂದಾಪುರ – ಬೆಳ್ಳಾಲ- ಮೋರ್ಟ – ಕೆರಾಡಿ
  • ಕುಂದಾಪುರ – ಗಿಳಿಯಾರು – ಹೆಸ್ಕತ್ತೂರು
  • ಕುಂದಾಪುರ – ಮಾರಣಕಟ್ಟೆ – ಹಾಲಾಡಿ
  • ಕುಂದಾಪುರ – ಬೈಂದೂರು ಡಿಗ್ರಿ ಕಾಲೇಜು
  • ಕುಂದಾಪುರ – ವಾಲ್ಲೂರು – ಕೊಲ್ಲೂರು
  • ಕುಂದಾಪುರ – ಅರೆಹೊಳೆ – ಯರುಕೋಣೆ – ಕೊಲ್ಲೂರು – ಬೈಂದೂರು- ಗಂಟಿಹೊಳೆ – ಬೋಳಂಬಳ್ಳಿ
  • ಕುಂದಾಪುರ- ಅಮಾಸೆಬೈಲು – ತೊಂಬಟ್ಟು
  • ಕುಂದಾಪುರ – ನೇರಳೆಕಟ್ಟೆ – ಅಂಪಾರು- ಹಾಲಾಡಿ -ಚೋರಾಡಿ- ಕರ್ಕುಂಜೆ- ಉಡುಪಿ
  • ಕುಂದಾಪುರ – ಆಲೂರು ಹಾಗೂ ಕುಂದಾಪುರ – ಪಡುಕೋಣೆ ಮಾರ್ಗ

ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

Udupi News Victory for ABVP Protest New KSRTC bus from Ajri to Kundapura

 

 

Share