Kannada News Next

tech

ಹಬ್ಬದ ಕೊಡುಗೆಯಾಗಿ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್ ಸೇಲ್‌ 2026 ! ಈ ದಿನದಿಂದ ಸ್ಮಾರ್ಟ್‌ಫೋನ್‌, ಟಿವಿ ಎಲ್ಲ ಅಗ್ಗ!

ಮುಂಬರುವ ಹಬ್ಬದ ಸೀಸನ್‌ ಸುಲುವಾಗಿ ಫ್ಲಿಪ್‌ಕಾರ್ಟ್‌ ವರ್ಷದ ಅತ್ಯಂತ ದೊಡ್ಡ ಸೇಲ್‌ ಆದ ಬಿಗ್‌ ಬಿಲಿಯನ್ ಡೇಸ್‌ 2026 ಸೇಲ್‌ ಪ್ರಾರಂಭದ ದಿನವನ್ನು ಬಹಿರಂಗಪಡಿಸಿದೆ.

By Archana V Bhat
Flipkart Big Billion Days 2026 sale

ಭಾರತದಲ್ಲಿ ಹಬ್ಬಗಳ ಸೀಸನ್‌ ಎಂದರೆ ಹೊಸ ಹೊಸ ವಸ್ತುಗಳ ಖರೀದಿ. ಇದಕ್ಕೆ ಆನ್‌ಲೈನ್‌ ಶಾಂಪಿಂಗ್‌ ಕೂಡಾ ಹೊರತಾಗಿಲ್ಲ. ಈಗಂತೂ ಆನ್‌ಲೈನ್ ಶಾಪಿಂಗ್‌ ವೇದಿಕೆಗಳು ಹಬ್ಬದ ಕೊಡುಗೆಯಾಗಿ ಸೇಲ್‌ಗಳನ್ನು ಪ್ರಾರಂಭಿಸುತ್ತಿವೆ. ಮುಂಬರುವ ಹಬ್ಬದ ಸೀಸನ್‌ ಸುಲುವಾಗಿ ಫ್ಲಿಪ್‌ಕಾರ್ಟ್‌ ವರ್ಷದ ಅತ್ಯಂತ ದೊಡ್ಡ ಸೇಲ್‌ ಆದ ಬಿಗ್‌ ಬಿಲಿಯನ್ ಡೇಸ್‌ 2026 ಅನ್ನು ತಂದಿದೆ. ಫ್ಲಿಪ್‌ಕಾರ್ಟ್‌ ತನ್ನ ಸೇಲ್‌ ಯಾವಾಗ ಶುರುವಾಗಲಿದೆ ಎಂದು ಒಂದು ಲೈವ್‌ ಪೇಜ್‌ ಅನ್ನು ಕೂಡಾ ಪ್ರಕಟಿಸಿದೆ. ಈ ಪ್ರಕಟಣೆಯ ಪ್ರಕಾರ ಈ ಮೆಗಾ ಸೇಲ್‌ ಅಕ್ಟೋಬರ್‌ 9 ರಂದು ಪ್ರಾರಂಭವಾಗಲಿದೆ. ನೀವು ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ ಅಥವಾ ಹೋಮ್ ಎಲೆಕ್ಟ್ರಾನಿಕ್ಸ್ ಖರೀದಿಸುವ ಯೋಚನೆಯಿದ್ದರೆ ಇದು ಅತ್ಯತ್ತಮ ಸಮಯವಾಗಿದೆ.

ಯಾವುದಕ್ಕೆ ಬಂಪರ್‌ ರಿಯಾಯಿತಿ?

ಪ್ರತಿ ವರ್ಷದಂತೆ ಈ ವರ್ಷವೂ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌, ಟೆಕ್‌ ಗ್ಯಾಜೆಟ್‌ಗಳ ಮೇಲ ಉತ್ತಮ ಡೀಲ್‌ ದೊರೆಯಲಿವೆ. ಇದಲ್ಲದೆ, ಲ್ಯಾಪ್‌ಟಾಪ್‌ಗಳು, ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಗೇಮಿಂಗ್ ಕನ್ಸೋಲ್‌ಗಳು ಮೇಲೂ ಸಾಕಷ್ಟು ರಿಯಾಯಿತಿಗಳು ಇರಲಿವೆ. ದುಬಾರಿ ಗ್ಯಾಜೆಟ್‌ಗಳು ಬಜೆಟ್‌ ಬೆಲೆಯಲ್ಲಿ ಲಭ್ಯವಿರಲಿದೆ.

ಬ್ಯಾಂಕಿಂಗ್‌, EMI ಕೊಡುಗೆಗಳೇನು?

ಫ್ಲಿಪ್‌ಕಾರ್ಟ್ ಬಹಿರಂಗಗೊಳಿಸಿದ ಪೇಜ್‌ ಪ್ರಕಾರ ಈ ಮಾರಾಟವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ 10 ರಷ್ಟು ಭಾರಿ ರಿಯಾಯಿತಿ ನೀಡಲಿದೆ. ಮಾರಾಟದ ಸಮಯದಲ್ಲಿ AXIS ಮತ್ತು ICICI ಕಾರ್ಡ್‌ಗಳಲ್ಲಿ ತ್ವರಿತ ಬ್ಯಾಂಕ್ ರಿಯಾಯಿತಿಗಳು ಲಭ್ಯವಿರುತ್ತವೆ. ಇವಿಷ್ಟೇ ಅಲ್ಲದೇ ಹಳೆಯ ಫೋನ್ ಮತ್ತು ಎಲೆಕ್ಟ್ರಾನಿಕ್ಸ್‌ಗಳ ವಿನಿಮಯದ ಮೇಲೂ ಬಂಪರ್‌ ಬೋನಸ್‌ಗಳು ಲಭ್ಯವಿದೆ. ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳೂ ಲಭ್ಯವಿರಲಿದೆ. ಫ್ಲಿಪ್‌ಕಾರ್ಟ್‌ ಸದಸ್ಯರು ಮತ್ತು ವಿಐಪಿ ಸದಸ್ಯರಿಗೆ 24 ಗಂಟೆ ಮೊದಲೇ ಲೈವ್‌ ಆಗಲಿದೆ.