ಸಿಮ್ ಕಾರ್ಡ್ ಖರೀದಿಗೆ ಹೊಸ ರೂಲ್ಸ್ : ಅಗತ್ಯಕ್ಕಿಂತ ಹೆಚ್ಚು ಸಿಮ್ ಇದ್ರೆ ಬಾರೀ ದಂಡ
ಡಿಜಿಟಲ್ ವಂಚನೆಗಳು, ನಕಲಿ ದಾಖಲೆಗಳ ಹಾವಳಿ ಮತ್ತು ಸೈಬರ್ ಅಪರಾಧಗಳಿಗೆ ಬ್ರೇಕ್ ಹಾಕಲು ಕೇಂದ್ರ ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್‌ಗಳ ಖರೀದಿ ಹಾಗೂ ಮಾರಾಟದಲ್ಲಿ ಬದಲಾವಣೆ ತಂದಿದೆ.
ನವದೆಹಲಿ : ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳು, ನಕಲಿ ದಾಖಲೆಗಳ ಹಾವಳಿ ಮತ್ತು ಸೈಬರ್ ಅಪರಾಧಗಳಿಗೆ ಬ್ರೇಕ್ ಹಾಕಲು ಕೇಂದ್ರ ದೂರಸಂಪರ್ಕ ಇಲಾಖೆಯು ಸಿಮ್ ಕಾರ್ಡ್‌ಗಳ ಖರೀದಿ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ.
ಇನ್ಮುಂದೆ ಗ್ರಾಹಕರು ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವುದು ಮೊದಲಿನಷ್ಟು ಸುಲಭವಾಗಿರುವುದಿಲ್ಲ. ನಕಲಿ ಸಿಮ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಸಿಮ್ ಕಾರ್ಡ್ ಮಾರಾಟ ಮಾಡುವ ಪ್ರತಿಯೊಬ್ಬ ವ್ಯಾಪಾರಿ ಅಥವಾ ಫ್ರಾಂಚೈಸಿಯು ಸಂಬಂಧಪಟ್ಟ ಟೆಲಿಕಾಂ ಕಂಪನಿಗಳ ಬಳಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಮಾರಾಟಗಾರನಿಗೂ ಪೊಲೀಸ್ ವೆರಿಫಿಕೇಶನ್ ಕಡ್ಡಾಯಗೊಳಿಸಲಾಗಿದೆ.
ಒಂದು ವೇಳೆ ಯಾವುದೇ ವ್ಯಾಪಾರಿ ಅಧಿಕೃತ ನೋಂದಣಿ ಇಲ್ಲದೆ ಅಥವಾ ನಿಯಮ ಉಲ್ಲಂಘಿಸಿ ಸಿಮ್ ಕಾರ್ಡ್ ಮಾರಾಟ ಮಾಡುವುದು ಪತ್ತೆಯಾದರೆ, ಅಂತಹವರಿಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಗ್ರಾಹಕರಿಗೆ ಸಂಬಂಧಿಸಿದಂತೆ, ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಗರಿಷ್ಠ ಒಂಬತ್ತು ಸಿಮ್ ಕಾರ್ಡ್‌ಗಳನ್ನು ಮಾತ್ರ ಹೊಂದಲು ಅವಕಾಶವಿರುತ್ತದೆ. ಈಶಾನ್ಯ ರಾಜ್ಯಗಳು ಹಾಗೂ ಜಮ್ಮು-ಕಾಶ್ಮೀರದ ನಿವಾಸಿಗಳಿಗೆ ಈ ಮಿತಿಯನ್ನು ಆರಕ್ಕೆ ಸೀಮಿತಗೊಳಿಸಲಾಗಿದೆ. ಇನ್ನು ಮುಂದೆ ಸಿಮ್ ಖರೀದಿಸಲು ಕಾಗದದ ದಾಖಲೆಗಳ ಬದಲಾಗಿ ಸಂಪೂರ್ಣ ಕಾಗದರಹಿತ ಡಿಜಿಟಲ್ ಕೆವೈಸಿ ವಿಧಾನವನ್ನು ಮಾತ್ರ ಬಳಸಲಾಗುತ್ತದೆ.
ಇದರಲ್ಲಿ ಗ್ರಾಹಕರ ಲೈವ್ ಫೋಟೋ ಹಾಗೂ ಆಧಾರ್ ಕಾರ್ಡ್ ಆಧಾರಿತ ಬಯೋಮೆಟ್ರಿಕ್ ತಪಾಸಣೆ ಅತ್ಯಗತ್ಯವಾಗಿರುತ್ತದೆ. ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ನಿಮ್ಮ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್ ಕಳೆದುಹೋದಾಗ ಅಥವಾ ಹಾನಿಗೊಳಗಾದಾಗ ಪಡೆಯುವ ನಕಲಿ ಸಿಮ್ ಕಾರ್ಡ್‌ಗಳಲ್ಲಿ, ಅದು ಸಕ್ರಿಯಗೊಂಡ ಮೊದಲ 24 ಗಂಟೆಗಳವರೆಗೆ ಯಾವುದೇ ಎಸ್‌ಎಂಎಸ್ ಸೇವೆಗಳು ಲಭ್ಯವಿರುವುದಿಲ್ಲ. ಬ್ಯಾಂಕಿಂಗ್ ವಂಚನೆಗಳನ್ನು ತಡೆಯಲು ಈ ಒಳಬರುವ ಮತ್ತು ಹೊರಹೋಗುವ ಸಂದೇಶಗಳ ನಿಯಂತ್ರಣ ಕ್ರಮವನ್ನು ಜಾರಿಗೆ ತರಲಾಗಿದೆ.
Topics
ಸಂಬಂಧಿತ ಸುದ್ದಿಗಳು
tech
ಆಪಲ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಐಫೋನ್ 18 ಪ್ರೋ ಲಾಂಚ್ಗೆ ದಿನಗಣನೆ; ಬೆಲೆ ಎಷ್ಟು ಹೆಚ್ಚಾಗಲಿದೆ ಗೊತ್ತಾ
tech
BSNLನಿಂದ ಅತ್ಯಾಕರ್ಷಕ ಕೊಡುಗೆ : ಕೇವಲ 1 ರೂ.ಗೆ 24 ದಿನಗಳ ವ್ಯಾಲಿಡಿಟಿಯ ಸಿಮ್ ಬಿಡುಗಡೆ..!
tech
Word camp Bengaluru 2026 : ಆಯೋಜಕ ತಂಡಕ್ಕೆ ಫೋರ್ಥ್ಫೋಕಸ್ ಸಂಸ್ಥಾಪಕ ವಿ. ಗೌತಮ್ ನಾವಡ ಆಯ್ಕೆ
tech

