Kannada News Next

tech

Samsung Galaxy S27 Ultra : ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಫೀಚರ್ಸ್‌ ಲೀಕ್‌... ಅಬ್ಬಬ್ಬಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಮುಂದಿನ ವರ್ಷ ಅಂದ್ರೆ 2027ರ ಆರಂಭದಲ್ಲಿ ಬಿಡುಗಡ ಆಗಲಿದೆ. ಆದರೆ ಅಕ್ಟೋಬರ್‌ 1ರಂದು ಎಕ್ಸ್‌ನಲ್ಲಿ ಸ್ಮಾರ್ಟ್‌ಪೋನ್‌ ನ ಮಾಹಿತಿ ಲೀಕ್‌ ಆಗಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Samsung Galaxy S27 Ultra design leak

Samsung Galaxy S27 Ultra : ಸ್ಯಾಮ್‌ಸಂಗ್‌ ಮೊಬೈಲ್‌ ತಯಾರಿಕಾ ಕಂಪೆನಿ ಇದೀಗ ತನ್ನ ಗ್ರಾಹಕರಿಗಾಗಿಯೇ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಅನ್ನೋ ಮೊಬೈಲ್‌ ಸಿದ್ದ ಪಡಿಸಿದ್ದು, ಬಿಡುಗಡೆಗೆ ಮೊದಲೇ ಮೊಬೈಲ್‌ ನ ಫೀಚರ್ಸ್‌ ಲೀಕ್‌ ಆಗಿದೆ. ಮೊಬೈಲ್‌ನಲ್ಲಿರುವ ವಿಶೇಷತೆಯನ್ನು ಕಂಡ ಗ್ರಾಹಕರು ಸಖತ್‌ ಫಿದಾ ಆಗಿದ್ದಾರೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಮುಂದಿನ ವರ್ಷ ಅಂದ್ರೆ 2027ರ ಆರಂಭದಲ್ಲಿ ಬಿಡುಗಡ ಆಗಲಿದೆ. ಆದರೆ ಅಕ್ಟೋಬರ್‌ 1ರಂದು ಎಕ್ಸ್‌ನಲ್ಲಿ ಸ್ಮಾರ್ಟ್‌ಪೋನ್‌ ನ ಮಾಹಿತಿ ಲೀಕ್‌ ಆಗಿದೆ. ಐಎಸ್‌ ಯುವಿವರ್ಸ್‌ (Ice Universe) ಪ್ರಕಾರ ಎರಡು ಮಾದರಿಗಳಲ್ಲಿ Galaxy Ultra ಬಿಡುಗಡೆ ಆಗಲಿದ್ದು, ಈಗಾಗಲೇ ಬಿಡುಗಡೆ ಆಗಿರುವ ಮೊಬೈಲ್‌ ಹಾಗೂ ಬಿಡುಗಡೆ ಆಗಲಿರುವ ಮೊಬೈಲ್‌ ಫೀಚರ್ಸ್‌ ಹೊಂದಾಣಿಕೆಯಾಗಲಿದೆ.

Galaxy S27 Ultra ಡಿಸ್‌ಪ್ಲೇ ವಿನ್ಯಾಸ

ಸ್ಯಾಮ್‌ಸಂಗ್‌ ಈಗಾಗಲೇ ಬಿಡುಗಡೆ ಮಾಡಿರುವ Galaxy S26 Ultraದ ಮುಂಭಾಗದ ವಿನ್ಯಾಸವನ್ನೇ Galaxy S27 Ultra ದಲ್ಲಿಯೂ ಮುಂದುವರಿಕೆ ಮಾಡುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್‌ಗ ಗ್ಯಾಲಕ್ಸಿ S27 Ultra ಸುಮಾರು 6.9-ಇಂಚಿನ ಸ್ಕ್ರೀನ್‌ ಹಾಗೂ 1,440 × 3,120-ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸಾಧ್ಯತೆಯಿದೆ. ಅಲ್ಲದೇ ಈ ಫೋನ್ Samsung ನ 'Privacy Display' ವೈಶಿಷ್ಟ್ಯವನ್ನೂ ಒಳಗೊಂಡಿರುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌ ಕಂಪೆನಿ ಇದೇ ಸ್ಮಾರ್ಟ್‌ ಪೋನ್‌ ಮೂಲಕ ತನ್ನ ಡಿಸ್‌ಪ್ಲೇ ಪ್ಯಾನೆಲ್‌ನಲ್ಲಿ ಸುಧಾರಣೆ ತರುವ ಸಾಧ್ಯತೆಯಿದೆ. ಇನ್ನು GSMArena ನೀಡಿರುವ ಮಾಹಿತಿಯ ಪ್ರಕಾರ, ಗ್ಯಾಲಕ್ಸಿ ಎಸ್‌27 ಅಲ್ಟ್ರಾ ಮುಂಬರುವ M16 OLED ಡಿಸ್‌ಪ್ಲೇಯನ್ನು ಅಳವಡಿಕೆ ಮಾಡುವ ಸಾಧ್ಯತೆಯಿದೆ. ಈ ಡಿಸ್‌ಪ್ಲೈ ಸ್ಕ್ರೀನ್‌ಗೆ ಹೆಚ್ಚಿನ ಹೊಳಪು, ಬಣ್ಣದಲ್ಲಿ ನಿಖರತೆಯ ಜೊತೆಗೆ ಇನ್ನಷ್ಟು ಉತ್ತಮ ಫೀಚರ್ಸ್‌ ಅನ್ನು ನೀಡಲಿದೆ.

ಸ್ಯಾಮ್‌ಸಂಗ್‌ Galaxy S27 Ultra ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಕ್ಯಾಮೆರಾದಲ್ಲಿಯೂ ವಿಶೇಷತೆಯನ್ನು ಹೊಂದಿದೆ. ಮುಂಭಾಗದಲ್ಲಿರುವ ಸೆಲ್ಪಿ ಕ್ಯಾಮೆರಾ 16 ಮೆಗಾ ಫಿಕ್ಸೆಲ್‌ ಸೆನ್ಸಾರ್‌ ನೊಂದಿಗೆ ಬದಲಾವಣೆ ಕಾಣುವ ಸಾಧ್ಯತೆಯಿದೆ.

ಈ ಹಿಂದೆ ಬಿಡುಗಡೆ ಆಗಿರುವ ಆವೃತ್ತಿಯಿಂದ ಸಂಪೂರ್ಣವಾಗಿ ಬದಲಾವಣೆ ಮಾಡುವುದು ಸ್ವಲ್ಪ ಕಷ್ಟಕರ. ಆದರೂ ಕೂಡ ಮುಂಭಾಗ ವಿನ್ಯಾಸದ ಅಡಿಯಲ್ಲಿರುವ ಹಾರ್ಡ್‌ವೇರ್‌ ಬದಲಾವಣೆ ಆಗುತ್ತೆ ಅನ್ನೋದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಸ್ಯಾಮ್‌ಸಂಗ್‌ (Galaxy S27 Ultra) ಸ್ವಲ್ಪ ದಪ್ಪ ಮತ್ತು ಹೆಚ್ಚು ತೂಕವನ್ನು ಹೊಂದಿರುವ ಸಾಧ್ಯತೆಯಿದೆ.

ಇನ್ನು ಐಸ್‌ ಯೂನಿವರ್ಸ್‌ (Ice Universe) ನೀಡಿರುವ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್‌ ಪೋನ್‌ ಸುಮಾರು 7.9 ಮೀಮೀ ದಪ್ಪ ಇರಲಿದೆ. ಗ್ಯಾಲಕ್ಸಿ ಎಸ್‌ 26 ಅಲ್ಟ್ರಾ ದಪ್ಪ ಇದ್ದು, ತೂಕ ಸುಮಾರು 218 ಗ್ರಾಂ ಇರಬಹುದು. ಈ ಸ್ಮಾರ್ಟ್‌ ಪೋನ್‌ ದೀರ್ಘಕಾಲದ ಬ್ಯಾಟರಿ ಸೌಲಭ್ಯ ಒದಗಿಸುವ ಸಲುವಾಗಿಯೇ ದೊಡ್ಡ ಗಾತ್ರದ ಬ್ಯಾಟರಿಯನ್ನು ಹೊಂದಿರಲಿದೆ. ಅಲ್ಲದೇ ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ.

ಈಗಾಗಲೇ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 Ultra ಮಾದರಿ 5,000mAh ಬ್ಯಾಟರಿ ಹಂದಿದೆ. ಆದರೆ alaxy S27 Ultra 5,700mAh ಬ್ಯಾಟರಿ ಸೌಲಭ್ಯ ನೀಡುವ ಸಾಧ್ಯತೆಯಿದೆ. ಆದರೆ ಸ್ಯಾಮ್‌ಸಂಗ್‌ ಕಂಪೆನಿ ಈ ಕುರಿತು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕುರಿತು ಮಾಹಿತಿಗಳು ಹರಿದಾಡುತ್ತಿವೆ.