techಪ್ರಮುಖ ಸುದ್ದಿಗಳು

Gemini 4 Argon : ಗೂಗಲ್‌ ಹೊಸ ಮೈಲಿಗಲ್ಲು, ಅತ್ಯಂತ ಶಕ್ತಿಶಾಲಿ 'ಜೆಮಿನಿ 4 ಆರ್ಗಾನ್ AI ಬಿಡುಗಡೆ

ಗೂಗಲ್‌ ಇದೀಗ ಜೆಮಿನಿ 4 ಆರ್ಗಾನ್ (Gemini 4 Argon) ಫ್ರಾಂಟಿಯರ್ AI ಮಾಡೆಲ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
google announces gemini 4 argon ai model features
Photo: Google Blog

Gemini 4 Argon : ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಜಗತ್ತಿನಲ್ಲಿ ಟೆಕ್‌ ದೈತ್ಯ ಗೂಗಲ್‌ ಸಂಚಲನ ಮೂಡಿಸಿದೆ. ಗೂಗಲ್‌ ಇದೀಗ ಜೆಮಿನಿ 4 ಆರ್ಗಾನ್ (Gemini 4 Argon) ಫ್ರಾಂಟಿಯರ್ AI ಮಾಡೆಲ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಅಷ್ಟಕ್ಕೂ ಈ ಎಐನಲ್ಲಿ ಏನೇನಿದೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕ್ಷೇತ್ರದಲ್ಲಿ ಗೂಗಲ್ (Google)ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ. ಈಗಾಗಲೇ ಗೂಗಲ್‌ ಜೆಮಿನಿ ತಂತ್ರಜ್ಞಾನವನ್ನು ವಿಶ್ವದ ಕೋಟ್ಯಾಂತರ ಮಂದಿ ಬಳಕೆ ಮಾಡ್ತಿದ್ದಾರೆ. ಇದೀಗ ಜೆಮಿನಿ 4 ಇನ್ನಷ್ಟು ಬಳಕೆದಾರರಿಗೆ ಅನುಕೂಲವಾಗಲಿದೆ.

ಏನಿದು ಜೆಮಿನಿ 4 'ಆರ್ಗಾನ್' ವಿಶೇಷತೆ ?

ಸದ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಬಾರೀ ಚರ್ಚೆಯನ್ನು ಹುಟ್ಟುಹಾಕಿರುವ ಗೂಗಲ್‌ ಜೆಮಿನಿ 4 ಆರ್ಗಾನ್‌ ಮಾಡೆಲ್‌, ಈ ಹಿಂದೆ ಬಳಕೆ ಮಾಡುತ್ತಿರುವ ಜೆಮಿನಿ ಪ್ರೊ (Pro) ಮಾಡೆಲ್‌ಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದರೂ ಕೂಡ, ಅತ್ಯಂತ ಸೂಕ್ಷ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಸಾಫ್ಟ್‌ವೇರ್‌ ಡೆವಲೆಪ್‌ಮೆಂಟ್‌, ಡೀಪ್‌ ರೀಸನಿಂಗ್‌, ದೀರ್ಘಕಾಲದ ವರ್ಕ್‌ ಪ್ಲೋ ಕಾರ್ಯಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಎಐ ಸಂಸ್ಥೆಗಳಾದ ಓಪನ್‌ಎಐ (OpenAI Astra) ಮತ್ತು ಆಂಥ್ರೊಪಿಕ್ (Anthropic Opus) ಕಂಪನಿಗಳ ಮಾಡೆಲ್‌ಗಳಿಗೆ ಹೋಲಿಕೆ ಮಾಡಿದ್ರೆ ಜೆಮಿನಿ 4 ಭರ್ಜರಿ ಪೈಪೋಟಿ ಒಡ್ಡುವುದರಲ್ಲಿ ಅನುಮಾನವೇ ಇಲ್ಲ.

ಸೈಬರ್‌ ಸೆಕ್ಯೂರಿಟಿ ಪಾಲದಾರರಿಗೆ ಮಾತ್ರವೇ ಬಳಕೆಗೆ ಅವಕಾಶ ಸಿಗಲಿದೆ. ಮುಂದಿನ ಹಂತದಲ್ಲಿ ಸಾರ್ವಜನಿಕರಿಗೂ ಬಳಕೆಗೆ ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸಲಾಗಿದೆ. ಎಐ ಡೆವಲಪರ್‌ ಹಾಗೂ ತಂತ್ರಜ್ಞಾನ ಪ್ರಿಯರನ್ನು ಹೆಚ್ಚು ತನ್ನತ್ತ ಸೆಳೆಯಲಿದೆ.

ಜೆಮಿನಿ 4 ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಡಿಜಿಟಲ್‌ ಲೋಕದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

Topics

ಸಂಬಂಧಿತ ಸುದ್ದಿಗಳು