google's birthday : ಡೂಡಲ್ ಮೂಲಕ 28ನೇ ಹುಟ್ಟುಹಬ್ಬ ಆಚರಿಸಿಕೊಂಡ ಗೂಗಲ್
998 ಸೆಪ್ಟೆಂಬರ್ 04ರಂದು ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಗೂಗಲ್ ಅನ್ನು ಅಧಿಕೃತವಾಗಿ ಸ್ಥಾಪಿಸಿದ್ದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಟೆಕ್‌ದೈತ್ಯ ಗೂಗಲ್ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ. ಗೂಗಲ್ ತನ್ನ ಆರಂಭಿಕ ದಿನಗಳ ನೆನಪನ್ನು ತರುವ ಡೂಡಲ್ (Doodle) ಮೂಲಕ ತನ್ನ 28ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದೆ.
ಗೂಗಲ್ ಸಂಸ್ಥೆ ಆರಂಭಿಸಿದ ಜಿಮೇಲ್ (Gmail), ಯೂಟ್ಯೂಬ್ (YouTube), ಗೂಗಲ್ ಮ್ಯಾಪ್ಸ್ (Google Maps), ಆಂಡ್ರಾಯ್ಡ್ (Android) ಮತ್ತು ಪಿಕ್ಸೆಲ್ (Pixel) ಫೋನ್‌ಗಳಂತಹ ಉತ್ಪನ್ನಗಳೊಂದಿಗೆ ಜಾಗತಿಕವಾಗಿ ಅತ್ಯುತ್ತಮ ತಂತ್ರಜ್ಞಾನವನ್ನು ಬೆಳಗಿಸಿದೆ.
ಗೂಗಲ್ ಡೂಡಲ್ ಇದೀಗ ಗೂಗಲ್ ಸಂಸ್ಥೆ ಬೆಳೆದು ಬಂದಿರುವ ಹಾದಿಯನ್ನು ನೆನಪಿಸುತ್ತಿದೆ. ಗೂಗಲ್ ಎಷ್ಟು ದೂರ ಸಾಗಿದೆ ಅನ್ನೋದನ್ನು ಅವಲೋಕಿಸಲು ಗೂಗಲ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಗೂಗಲ್ ಇಂದು ಅಂದ್ರೆ ಸೆಪ್ಟೆಂಬರ್ 27, 2026 ರಂದು ತನ್ನ 28ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದೆ.
ತನ್ನ ಹುಟ್ಟುಹಬ್ಬವನ್ನು ನೆನಪಿಸುವ ಸಲುವಾಗಿಯೇ ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಡೂಡಲ್ ಅನ್ನು ಪ್ರದರ್ಶಿಸಿದೆ. ಗೂಗಲ್‌ನ ಆರಂಭಿಕ ಲೋಗೋವನ್ನು ಡೂಡಲ್ ಮೂಲಕ ಪ್ರದರ್ಶಿಸಿದೆ. 1998 ಸೆಪ್ಟೆಂಬರ್ 04ರಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ (PhD) ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಗೂಗಲ್ ಅನ್ನು ಅಧಿಕೃತವಾಗಿ ಸ್ಥಾಪಿಸಿದ್ದರು.
ಗೂಗಲ್ ಹಂಚಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಸನ್ ಮೈಕ್ರೋಸಿಸ್ಟಮ್ಸ್‌ನ ಸಹ-ಸಂಸ್ಥಾಪಕ ಆಂಡಿ ಬೆಕ್ಟೋಲ್‌ಶೈಮ್ ಅವರು ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರಿಗೆ 1,00,000 ಡಾಲರ್ ಮೊತ್ತದ ಚೆಕ್ ನೀಡಿದಾಗ, ಆಗಸ್ಟ್ 1998 ರಲ್ಲಿ ಕಂಪನಿ ಅಸ್ತಿತ್ವಕ್ಕೆ ಬಂದಿದೆ ಎನ್ನಲಾಗುತ್ತಿದೆ. 'ಗೂಗಲ್ ಇಂಕ್' (Google Inc.)ನ ಆರಂಭಕ್ಕೆ ನಾಂದಿ ಹಾಡಿದೆ.
ಆದರೆ ಗೂಗಲ್ ಸೆಪ್ಟೆಂಬರ್ 27ರಂದು ಯಾಕೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದೆ ಅನ್ನೋದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ವತಃ ಗೂಗಲ್ ತನ್ನ ಹುಟ್ಟುಹಬ್ಬದ ದಿನಾಂಕವನ್ನು ಬದಲಾಯಿಸಿದೆ. ಗೂಗಲ್ ತನ್ನ ವೆಬ್ ಇಂಡೆಕ್ಸ್‌ನ ಕುರಿತ ಪ್ರಮುಖ ಸಾಧನೆಯನ್ನು ಸ್ಮರಿಸಲು ಇಂದಿನ ದಿನವನ್ನು ಆಯ್ಕೆ ಮಾಡಿರಬಹುದು ಎನ್ನಲಾಗುತ್ತಿದೆ.
ಒಂದು ಸರ್ಚ್ ಇಂಜಿನ್ ಆಗಿ ಆರಂಭಗೊಂಡ ಗೂಗಲ್ ಇಂದು ಜಿಮೇಲ್ (Gmail), ಯೂಟ್ಯೂಬ್ ( YouTube), ಗೂಗಲ್ ಮ್ಯಾಪ್ಸ್ ( Google Maps), ಆಂಡ್ರಾಯ್ಡ್( Android) ಮತ್ತು ಗೂಗಲ್ ಫಿಕ್ಸಲ್ ( Pixel)ಫೋನ್‌ಗಳಂತಹ ಉತ್ಪನ್ನಗಳನ್ನು ಹೊಂದಿರುವ ಜಾಗತಿಕ ತಂತ್ರಜ್ಞಾನ ದಿಗ್ಗಜವಾಗಿ ಬೆಳೆದಿದೆ.
ಗೂಗಲ್ ತನ್ನ 'Gemini' (ಜೆಮಿನಿ) ಪ್ಲಾಟ್‌ಫಾರ್ಮ್ ಮೂಲಕ ಕೃತಕ ಬುದ್ಧಿಮತ್ತೆ (AI)ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಗೂಗಲ್ ಸಂಸ್ಥೆ ತನ್ನ ಹಲವು ಸೇವೆಗಳನ್ನು ನಿರ್ವಹಿಸಲು 2015ರಲ್ಲಿ ರಚಿಸಲಾದ ಮಾತ್ರಸಂಸ್ಥೆ ಆಲ್ಫಾಬೆಟ್ ಇಂಕ್ (Alphabet Inc.) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
Topics
ಸಂಬಂಧಿತ ಸುದ್ದಿಗಳು
tech
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈ ದಿನದಿಂದ ಪ್ರಾರಂಭ ! ಯಾವೆಲ್ಲ ಹೊಸ ಕೊಡುಗೆಗಳಿವೆ ?
tech
ಹಬ್ಬದ ಕೊಡುಗೆಯಾಗಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2026 ! ಈ ದಿನದಿಂದ ಸ್ಮಾರ್ಟ್ಫೋನ್, ಟಿವಿ ಎಲ್ಲ ಅಗ್ಗ!
tech
ಯುಪಿಐ ಲೋಕದಲ್ಲಿ ಹೊಸ ಕ್ರಾಂತಿ: ಎಐ ಮೂಲಕ ಡಿಜಿಟಲ್ ಪಾವತಿಗೆ ಎನ್ಪಿಸಿಐ ಚಿಂತನೆ
tech

