ಕೋಟ : ಆಧುನಿಕ ಜೀವನ ಶೈಲಿಯ ನಡುವೆ, ನಮ್ಮ ಹಳೆಯ ಸಾಂಪ್ರದಾಯಿಕ ಆಹಾರ ಪದ್ದತಿ, ಕರಾವಳಿಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಇಂತಹ ಹೊತ್ತಲ್ಲೇ ಕೋಟದಲ್ಲೊಂದು ಆಷಾಢ ಸಂಭ್ರಮ ಅನ್ನೋ ವಿಶಿಷ್ಠ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಕೋಟ ಬ್ರಿಗೆಡ್‌ನ ಆನ್ಸ್ ಕ್ಲಬ್ (Anns Club Kota Brigade ) ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮ ವಿಭಿನ್ನವಾಗಿತ್ತು.
ಆಷಾಢ ತಿಂಗಳು ಅಂದ್ರೆ ಸಾಕು ಜಡಿಮಳೆ. ಹಿಂದೆಲ್ಲಾ ಮನೆಯಿಂದ ಹೊರಗೆ ಬರಲಾರದ ಸ್ಥಿತಿಯಿತ್ತು. ಮನೆಯಲ್ಲಿಯೇ ಬೇಸರ ಕಳೆಯೋದಕ್ಕೆ ತರಹೇವಾರಿ ತಿಂಡಿ ತಿನಿಸುಗಳನ್ನು ತಯಾರಿಸಲಾಗ್ತಿತ್ತು. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ವಿಶೇಷ ಖಾದ್ಯಗಳನ್ನು ಸವಿದು ಸಂಭ್ರಮಿಸುತ್ತಿದ್ದರು. ಕಾಲ ಬದಲಾದಂತೆ ನಮ್ಮ ಆಚಾರ, ವಿಚಾರ, ಆಹಾರ ಪದ್ದತಿಯೂ ಬದಲಾಗಿದೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ವಿಶೇಷ ಸಂಪ್ರಾಯವನ್ನು ಉಳಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಕೋಟ ಬ್ರಿಗೆಡ್‌ನ ಆನ್ಸ್ ಕ್ಲಬ್ ಸದಸ್ಯರು ಆಷಾಢ ಸಂಭ್ರಮ ಅನ್ನೋ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಆಷಾಢ ಸಂಭ್ರಮಕ್ಕೆ ಮೆರುಗು ತಂದ ಖಾದ್ಯಗಳು
ಮಲೆನಾಡಿನ ಅಕ್ಕಿ ರೊಟ್ಟಿ ಕಡ್ಲೆಗಸಿ, ಪಲಾವ್, ಅನ್ನದ ಜೊತೆಗೆ ಹುರುಳಿ ಸಾರು, ನೆಂಜಿಕೊಳ್ಳುವುದಕ್ಕೆ ಮೆಣಸಿನ ಬೋಂಡಾ, ನುಗ್ಗೆ ಸೊಪ್ಪಿನ ಚೆಟ್ನಿ, ಕೋಸಂಬರಿ, ಒಂದೆಲಗರ ಚಟ್ನಿ, ಕೆಸ ಸೊಪ್ಪಿನ ಚೆಟ್ನಿ, ಟೊಮ್ಯಾಟೋ ಚೆಟ್ನಿ, ಪೈನಾಪಲ್ ಮುದ್ದುಳಿ ಮಾತ್ರವಲ್ಲ, ಹಲಸಿನ ಹಣ್ಣಿನ ಪಾಯಸ, ಕರ್ಜಿಕಾಯಿ, ಮೈಸೂರು ಪಾಕ್, ಜಾಮೂನ್, ಮಣ್ಣಿ, ಸುಕ್ಕಿನುಂಡೆ, ಮುಳ್ಕ, ಅರಶಿನ ಎಲೆ ಕಡುಬು ಬಾಯಿಗೆ ಇನ್ನಷ್ಟು ರುಚಿ ನೀಡಿತ್ತು.
ಮೊಸರನ್ನ ತಿಂದು ಎಲ್ಲರೂ ಊಟ ಮುಗಿಸಿದ್ರು. ಆನ್ಸ್ ಕ್ಲಬ್ ಸದಸ್ಯರು ಮನೆಯಿಂದಲೇ ಬಗೆಬಗೆ ಖಾದ್ಯಗಳನ್ನು ಸಿದ್ದ ಪಡಿಸಿ ತಂದಿರುವುದು ವಿಶೇಷವಾಗಿತ್ತು. ಕೋಟ ಬ್ರಿಗೇಡ್ ರೋಟರಿ ಕ್ಲಬ್‌ನ ಅಂಗಸಂಸ್ಥೆಯಾಗಿರುವ ಆನ್ಸ್‌ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣದ ಹಿನ್ನೆಲೆಯಲ್ಲಿ ಆಷಾಢ ಸಂಭ್ರಮ ಆಯೋಜಿಸಲಾಗಿತ್ತು. ಆನ್ಸ್ ಕ್ಲಬ್ ಕೋಟ ಬ್ರಿಗೆಡ್‌ನ ಪದಗ್ರಹಣದ ಹೊತ್ತಲ್ಲೇ ನಡೆದ ಆಷಾಢ ಸಂಭ್ರಮ ವಿಶೇಷವಾಗಿತ್ತು. ಬಗೆ ಬಗೆಯ ಖಾದ್ಯಗಳನ್ನು ಸವಿದು ಮಕ್ಕಳು, ರೋಟರಿ ಸದಸ್ಯರು ಸಂಭ್ರಮಿಸಿದ್ರು.
ಪದ್ಮ ರಾಘವೇಂದ್ರ ವಿಶೇಷ ಉಪನ್ಯಾಸ
ಆನ್ಸ್ ಕ್ಲಬ್ ಪದಗ್ರಹಣದ ಜೊತೆಗೆ ನಡೆದ ಆಷಾಢ ಸಂಭ್ರಮ ಕೇವಲ ಊಟ, ಮನರಂಜನೆಗಷ್ಟೇ ಸೀಮಿತ ಆಗಿರಲಿಲ್ಲ. ಆನ್ಸ್ ಕ್ಲಬ್ ಸದಸ್ಯರಿಗಾಗಿಯೇ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಉಡುಪಿಯ ಡಾ.ಎವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಕೌನ್ಸಿಲರ್ ಪದ್ಮ ರಾಘವೇಂದ್ರ ಅವರು, ಮಹಿಳೆಯರು ಮಾನಸಿಕ ಒತ್ತಡವನ್ನು ಎದುರಿಸುವುದು ಹೇಗೆ ? ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ? ಅನ್ನುವ ಕುರಿತು ವಿವರಣೆಯನ್ನು ನೀಡಿದ್ರು.
ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಸಂಧ್ಯಾಪ್ರಕಾಶ್, ಕಾರ್ಯದರ್ಶಿಯಾಗಿ ಪ್ರಮಿಳಾ ಶಿವರಾಜ್ ಅಧಿಕಾರ ಸ್ವೀಕಾರ
ಅನ್ಸ್ ಕ್ಲಬ್ ಕೋಟ ಬ್ರಿಗೆಡ್‌ನ 2026 27 ನೇ ಸಾಲಿನ ಚೇರ್ ಮ್ಯಾನ್ ಆಗಿ ರೊ. ಪ್ರಕಾಶ್ ಹಂದಟ್ಟು, ಅಧ್ಯಕ್ಷರಾಗಿ ಸಂಧ್ಯಾ ಪ್ರಕಾಶ್, ಕಾರ್ಯದರ್ಶಿಯಾಗಿ ಪ್ರಮೀಳಾ ಶಿವರಾಜ್, ಉಪಾಧ್ಯಕ್ಷರಾಗಿ ಜಯಶ್ರೀ ವೆಂಕಟೇಶ, ಸಹ ಕಾರ್ಯದರ್ಶಿಯಾಗಿ ಆಶಾ ಭಾಸ್ಕರ್, ಕೋಶಾಧಿಕಾರಿಯಾಗಿ ಸುನಿತಾ ಚಂದ್ರಶೇಖರ್ ಮೆಂಡನ್, ಸಾಂಸ್ಕೃತಿಕ ಚೇರ್ಮನ್ ಆಗಿ ಶಾರದ ಸತೀಶ್ ಪೂಜಾರಿ, ಸದಸ್ಯರಾಗಿ ನೇತ್ರಾ ರಾಘ ಆಚಾರ್, ಅನಿತಾ ಪ್ರಕಾಶ್ ಹಂದಟ್ಟು, ಲತಾ ಸುರೇಶ್ ಆಚಾರ್ಯ, ಸ್ಪೋರ್ಟ್ಸ್ ಚೇರ್ಮನ್ ಆಗಿ ಜ್ಯೋತಿ ದಯಾನಂದ ಆಚಾರ್, ಸದಸ್ಯರಾಗಿ ಪ್ರತಿಮಾ ನಿತ್ಯ ಆಚಾರ್, ರೇಖಾ ಅನಿಲ್ ಸುವರ್ಣ, ಇಂದಿರಾ ಗೋಪಾಲ್ ಆಯ್ಕೆಯಾಗಿದ್ದಾರೆ.
ಇನ್ನು ಕ್ಲಬ್ ಅಡ್ವೇಸರ್ ಆಗಿ ಶಶಿಕಲಾ ಗಣೇಶ್, ಸದಸ್ಯರಾಗಿ ಜಯ ರಾಜೇಶ್ ಆಚಾರ್ಯ, ರೇವತಿರಾಜ್, ಚೈತ್ರ ಸಂತೋಷ್, ಆಶಾ ರಾಘವೇಂದ್ರ, ಮೂಕಾಂಬಿಕಾ ಕೆಆರ್, ಶಾಲಿನಿ ಅರುಣ್, ರೇಖಾ ರವಿನಾಥ್, ಮೇಘನಾ ಪ್ರಣೂತ್, ಸುಪ್ರಿಯಾ ಶೆಟ್ಟಿ, ದಿವ್ಯ ಶೆಟ್ಟಿ, ಸಂಪ್ರೀತಾ, ಸ್ವಾತಿ ವಿಷ್ಣುಮೂರ್ತಿ ಉರಾಳ, ಸುಮನಾ ಚರಣ್ ಆಚಾರ್ಯ, ಶಶಿಕಲಾ ಉದಯ್ ಹೆಗ್ಡೆ
ರೇವತಿ ಲಂಬೋದರ ಹೆಗಡೆ, ರಾಜೀವ್ ಅಲೋಕ್, ಮೇಘನಾ ಅನಿಲ್ ಪೂಜಾರಿ ಅಧಿಕಾರ ಸ್ವೀಕರಿಸಿದ್ದಾರೆ.
ರೋಟರಿ ಕ್ಲಬ್ ಕೋಟ ಬ್ರಿಗೆಡ್‌ನ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಬನ್ನಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ದಯಾನಂದ ಆಚಾರ್, ರೋಟರಿ ಕ್ಲಬ್ ಸಭಾಪತಿ ಪ್ರಕಾಶ್ ಹಂದಟ್ಟು, ರೋಟರಿ ಕ್ಲಬ್ ಕೋಟ ಬ್ರಿಗೆಡ್ ಕಾರ್ಯದರ್ಶಿ ಪ್ರಮೀಳಾ ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.
ಅನಿತಾ ಪ್ರಕಾಶ್ ಹಂದಟ್ಟು ಸ್ವಾಗತಿಸಿ, ರೇಖಾ ಅನಿಲ್ ಸುವರ್ಣ ಅಧ್ಯಕ್ಷರ ಪರಿಚಯ ಹಾಗೂ ರೇವತಿ ರಾಜ್ ಕಾರ್ಯದರ್ಶಿಗಳ ಪರಿಚಯ ಮಾಡಿದ್ರು. ಲತಾ ಸುರೇಶ್ ಆಚಾರ್ಯ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದ್ರು. ಜಯ ರಾಜೇಶ್ ಆಚಾರ್ಯ ಪ್ರಾರ್ಥಿಸಿದ್ರೆ, ಶಶಿಕಲಾ ಗಣೇಶ್ ಅತಿಥಿಗಳನ್ನು ಗುರುತಿಸಿದ್ರು. ನೇತ್ರಾ ರಾಘವೇಂದ್ರ ಆಚಾರ್ ಅವರು ಕಾರ್ಯಕ್ರಮ ನಿರೂಪಿಸಿದ್ರೆ, ಪ್ರವೀಳಾ ಶಿವರಾಜ್ ಧನ್ಯವಾದ ಸಮರ್ಪಿಸಿದ್ರು.
anns club kota brigade inauguration Ashada Sambrama news
