ಪ್ರಯಾಗ್ರಾಜ್ ಕುಂಭಮೇಳದ ಸಂದರ್ಭದಲ್ಲಿ ವೈರಲ್ ಆಗಿ ‘ಕುಂಭಮೇಳದ ಹುಡುಗಿ’ (Kumbha Mele Viral Girl Monalisa) ಎಂದೇ ಖ್ಯಾತಿ ಪಡೆದಿದ್ದ ಮೋನಾಲಿಸಾ ಭೋಂಸ್ಲೆ, ತಮ್ಮ ಪ್ರಿಯಕರ ಫರ್ಮನ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಇವರ ಅಂತರ್ಧರ್ಮೀಯ ಪ್ರೇಮಕ್ಕೆ ಕುಟುಂಬದಿಂದ ತೀವ್ರ ವಿರೋಧವಿದ್ದ ಕಾರಣ, ಮನೆಯವರ ಇಚ್ಛೆಗೆ ವಿರುದ್ಧವಾಗಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಪೊಲೀಸ್ ರಕ್ಷಣೆ ಮತ್ತು ಕೇರಳದ ಆಯ್ಕೆ
ತಮ್ಮ ಜೀವಕ್ಕೆ ಅಪಾಯವಿರುವ ಸಾಧ್ಯತೆ ಅರಿತ ದಂಪತಿ ಪೊಲೀಸರ ಮೊರೆ ಹೋಗಿದ್ದರು. ಇಬ್ಬರೂ ವಯಸ್ಕರಾಗಿರುವುದರಿಂದ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಹಕ್ಕು ಅವರಿಗೆ ಇದೆ ಎಂದು ಪೊಲೀಸರು ರಕ್ಷಣೆ ನೀಡಿದ್ದಾರೆ. ಕೇರಳ ರಾಜ್ಯದ ಮೇಲಿನ ಇಷ್ಟದಿಂದಾಗಿ ಅವರು ಮದುವೆಗೆ ತಿರುವನಂತಪುರವನ್ನು ವೇದಿಕೆಯನ್ನಾಗಿ ಆರಿಸಿಕೊಂಡರು.
ದೇಶದಲ್ಲೇ ಪ್ರಪ್ರಥಮ ಬಾರಿಗೆ ದಯಾಮರಣಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್ : 13 ವರ್ಷಗಳ ನರಕಯಾತನೆಗೆ ಮುಕ್ತಿ
ದೇವಸ್ಥಾನದಲ್ಲಿ ವಿವಾಹ
ತಿರುವನಂತಪುರದ ನೈನಾರ್ ದೇವಸ್ಥಾನದಲ್ಲಿ ಪೊಲೀಸ್ ಭದ್ರತೆಯ ನಡುವೆ ಈ ವಿವಾಹ ನಡೆದಿದೆ. ಮದುವೆಯ ನಂತರ ಮಾತನಾಡಿದ ಮೋನಾಲಿಸಾ, ತಾವು ಮದುವೆಯಿಂದ ತುಂಬಾ ಸಂತೋಷವಾಗಿರುವುದಾಗಿ ತಿಳಿಸಿದ್ದಾರೆ. ಹಲವು ದಿನಗಳ ಕಾಲ ಇದ್ದ ಆತಂಕ ಮತ್ತು ಒತ್ತಡಕ್ಕೆ ಈ ಮೂಲಕ ತೆರೆ ಬಿದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಮೋನಾಲಿಸಾ ಕುಂಭಮೇಳದ ಸಮಯದಲ್ಲಿ ತನ್ನ ಸೌಂದರ್ಯದಿಂದಾಗಿ ದೇಶಾದ್ಯಂತ ಸುದ್ದಿಯಾಗಿದ್ದರು. ಇದೀಗ ಅವರ ಈ ಅಂತರ್ಧರ್ಮೀಯ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಜನರ ನಡುವೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
[youtube https://www.youtube.com/watch?v=SE5x65gftfE]
