Viral Video: ಬೀಳಲು ಹೋದ ಮರಿಯಾನೆಯ ಬಾಲ ಹಿಡಿದ ತಾಯಾನೆ! ತಾಯಿ-ಮರಿಯ ಅಪರೂಪದ ದೃಶ್ಯ ವೈರಲ್

ತಾಯಾನೆ ಮತ್ತು ಮರಿಯಾನೆಯ ನಡುವಿನ ಸುಂದರ ಬಾಂಧವ್ಯ ಸಾರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವನ್ಯಜೀವಿಗಳ ಮುದ್ದಾದ, ಅಚ್ಚರಿಯ ಹಾಗೂ ಭಾವನಾತ್ಮಕ ಕ್ಷಣಗಳು ನೆಟ್ಟಿಗರ ಗಮನ ಸೆಳೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ತಾಯಾನೆ ಮತ್ತು ಮರಿಯಾನೆಯ ನಡುವಿನ ಸುಂದರ ಬಾಂಧವ್ಯ ಸಾರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಈ ವೀಡಿಯೋದಲ್ಲಿ, ಆನೆ ಮರಿಯೊಂದು ತಂಟೆ ಮಾಡುತ್ತಾ ಓಟಕ್ಕಿಟ್ಟಿದೆ. ಆದರೆ, ಮರಿ ಆನೆ ಓಡುವ ರಭಸಕ್ಕೆ ಎಲ್ಲಾದರೂ ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುತ್ತದೇನೋ ಎಂಬ ಭಯದಲ್ಲಿದ್ದ ತಾಯಾನೆ, ತಕ್ಷಣವೇ ಚುರುಕಾಗಿ ತನ್ನ ಸೊಂಡಿಲಿನಿಂದ ಮರಿಯಾನೆಯ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ. ಆ ಮೂಲಕ ಮರಿಯಾನೆ ಬಿದ್ದು ಹೋಗದಂತೆ ಜಾಗರೂಕತೆಯಿಂದ ತಡೆದು ನಿಲ್ಲಿಸಿದೆ.

ತಾಯಿ ತನ್ನ ಮಗುವನ್ನು ಹೇಗೆ ಪ್ರತಿಯೊಂದು ಹೆಜ್ಜೆಯಲ್ಲೂ ರಕ್ಷಿಸುತ್ತಾಳೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಂತಿದೆ. ಮರಿಯು ಆಟದ ಗುಂಗಿನಲ್ಲಿ ಓಡುತ್ತಿದ್ದರೂ, ತಾಯಿಯ ಕಣ್ಣು ಮಾತ್ರ ಮರಿಯ ಸುರಕ್ಷತೆಯ ಮೇಲೆಯೇ ಇತ್ತು ಎಂಬುದನ್ನು ಈ ವಿಡಿಯೋ ಸ್ಪಷ್ಟವಾಗಿ ತೋರಿಸುತ್ತದೆ.

ಈ ಮುದ್ದಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತಾಯಿಯ ಪ್ರೀತಿಗೆ ಯಾವುದೇ ಗಡಿಗಳಿಲ್ಲ, ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಾಯಿಯ ಮಮತೆ ಒಂದೇ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.ಆನೆಗಳು ಅತ್ಯಂತ ಬುದ್ಧಿವಂತ ಹಾಗೂ ಕುಟುಂಬದ ಬಾಂಧವ್ಯಕ್ಕೆ ಹೆಚ್ಚು ಒತ್ತು ಕೊಡುವ ಪ್ರಾಣಿಗಳು ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.

ಮರಿಯಾನೆಯ ಚೇಷ್ಟೆ ಮತ್ತು ತಾಯಾನೆಯ ಸಮಯಪ್ರಜ್ಞೆಯ ಈ ಅಪರೂಪದ ದೃಶ್ಯವು ಸದ್ಯ ಇಂಟರ್ನೆಟ್‌ನಲ್ಲಿ ಲಕ್ಷಾಂತರ ಜನರ ಮನ ಗೆದ್ದಿದ್ದು, ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ!

Exit mobile version