Kannada News Next

astrology

Horoscope Today in Kannada : ದಿನಭವಿಷ್ಯ ೦5 ಅಕ್ಟೋಬರ್‌ 2026 : ಪುನರ್ವಸು ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಅದೃಷ್ಟ

ದಿನಭವಿಷ್ಯ : ಅಕ್ಟೋಬರ್‌ 5, 2026 ಇಂದು ಸೋಮವಾರ. ವಿಕ್ರಮ ಸಂವತ್ಸರ 2083ರ ಆಶ್ವಿನ್ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ.

By Arun Gundmi | ಅರುಣ್‌ ಗುಂಡ್ಮಿ Editor-in-Chief
horoscope today in kannada 05 october 2026

ದಿನಭವಿಷ್ಯ : ಅಕ್ಟೋಬರ್‌ 5, 2026 ಇಂದು ಸೋಮವಾರ. ವಿಕ್ರಮ ಸಂವತ್ಸರ 2083ರ ಆಶ್ವಿನ್ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ. ದ್ವಾದಶ ರಾಶಿಗಳಿಗೆ ಪರಿಘ ಯೋಗ ಹಾಗೂ ಪುನರ್ವಸು ನಕ್ಷತ್ರದ ಪ್ರಭಾವ ಇರಲಿದೆ. ಗ್ರಹಗಳು ಮತ್ತು ನಕ್ಷತ್ರದ ಚಲನೆಯ ಆಧಾರದ ಮೇಲೆ ಮೇಷರಾಶಿಯಿಂದ ಮೀನರಾಶಿಯವರೆಗೆ ಒಟ್ಟು 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ. ಯಾವ ರಾಶಿಗೆ ಶುಭ, ಯಾವ ರಾಶಿಗೆ ಧನಲಾಭ.. ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ ರಾಶಿ (Aries)

ಉದ್ಯೋಗ, ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ವಿದೇಶಿ ಪ್ರಯಾಣದಲ್ಲಿ ಗೆಲುವು ಸಿಗಲಿದೆ. ಬಹುಕಾಲ ಆಸೆಗಳು ಇಂದು ಈಡೇರಲಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರಲಿದೆ. ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದೆ.

ವೃಷಭ ರಾಶಿ (Taurus)

ಆರ್ಥಿಕವಾಗಿ ಅನಿರೀಕ್ಷಿತವಾಗಿ ಲಾಭವಾಗುವ ಯೋಗವಿದೆ. ವಿದೇಶಿ ಪ್ರಯಾಣಕ್ಕಾಗಿ ಕಾಯುತ್ತಿರುವವರಿಗೆ ನಿಮ್ಮ ನಿರೀಕ್ಷೆಗಳು ಫಲಿಸಲಿದೆ. ನಿಮ್ಮ ಮನೆಗೆ ದೂರದ ಸಂಬಂಧಿಗಳ ಆಗಮನ ಮನಸಿಗೆ ಖುಷಿ ಕೊಡಲಿದೆ. ಮನೆಯಲ್ಲಿ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ.

ಮಿಥುನ ರಾಶಿ (Gemini)

ಹೊಸ ಕೆಲಸಗಳಿಗೆ ಆರಂಭಿಕ ಹಂತದಲ್ಲಿ ಅಡೆತಡೆಗಳು ಎದುರಾಗಲಿದೆ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕಠಿಣ ಪರಿಶ್ರಮದಿಂದ ಮುನ್ನುಗ್ಗಿದ್ರೆ ಯಶಸ್ವಿಯಾಗಿ ಮುಗಿಸುತ್ತೀರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ.

ಕರ್ಕಾಟಕ ರಾಶಿ (Cancer)

ಸಣ್ಣ ಪುಟ್ಟ ಕಾರಣಗಳಿಂದಾಗಿ ಕುಟುಂಬದ ವಾತಾವರಣ ಹದಗೆಡಲಿದೆ. ಇದರಿಂದಾಗಿ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಶಾಂತಿಯ ವಾತಾವರಣ ಇರಲಿದೆ. ನಿಮ್ಮ ಮಾತಿನ ಮೇಲೆ ಸಂಯಮ ಇರಲಿ. ವಾದ ವಿವಾದಗಳು ಉಂಟಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಸಿಂಹ ರಾಶಿ (Leo)

ದೂರ ಪ್ರಯಾಣ ಮಾಡುವಾಗ ಮತ್ತು ಹಣಕಾಸಿನ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯನ್ನು ವಹಿಸಿ. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿದೆ. ಮಕ್ಕಳ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ಸದಾ ಕಾಳಜಿ ತೋರುವುದು ಉತ್ತಮ.

ಕನ್ಯಾ ರಾಶಿ (Virgo)

ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಅನಿರೀಕ್ಷಿತವಾಗಿ ಹೊಸ ಚಟುವಟಿಕೆ ಅಥವಾ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆತ್ಮೀಯರ ಭೇಟಿಯಿಂದ ಮನಸಿಗೆ ಸಂತೋಷ ಉಂಟಾಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ತುಲಾ ರಾಶಿ (Libra)

ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿದೆ. ಹೊಸ ವಸ್ತು, ಆಭರಣಗಳನ್ನು ಖರೀದಿಸುವ ಯೋಗವಿದೆ. ಕೌಟುಂಬಿಕವಾಗಿ ಎಲ್ಲರಿಂದಲೂ ಸಂಪೂರ್ಣ ಸಹಕಾರ ದೊರೆಯಲಿದೆ.

ವೃಶ್ಚಿಕ ರಾಶಿ (Scorpio)

ನೀವು ನಿರೀಕ್ಷಿಸದ ರೀತಿಯಲ್ಲಿ ಧನಲಾಭ ಸಿಗಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ. ಆಕಸ್ಮಿಕ ಖರ್ಚುಗಳನ್ನು ನೀವು ಸಮರ್ಥವಾಗಿ ನಿಭಾಯಿಸುತ್ತೀರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಧನು ರಾಶಿ (Sagittarius)

ಕೆಲವೊಂದು ವಿಚಾರಗಳು ನೀವು ಎಣಿಸದ ರೀತಿಯಲ್ಲಿ ನಡೆಯಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ವೇಳೆಯಲ್ಲಿ ವಿವೇಕದಿಂದ ವರ್ತಿಸುವುದು ಒಳಿತು. ಅನಿರೀಕ್ಷಿತ ಘಟನೆಗಳು ಮನಸಿಗೆ ನಿರಾಸೆಯನ್ನು ಮೂಡಿಸಲಿದೆ. ಮಾತಿನ ಮೇಲೆ ಹಿಡಿತ ಇರುವುದು ಮುಖ್ಯ.

ಮಕರ ರಾಶಿ (Capricorn)

ಆರೋಗ್ಯ ಸಮಸ್ಯೆಗಳು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುತ್ತದೆ. ಮನಸ್ಸಿನಲ್ಲಿ ಚಂಚಲತೆ ಹೆಚ್ಚುವ ಸಾಧ್ಯತೆಯಿದ್ದು, ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಆತುರದಿಂದ ಯಾವುದೇ ಕೆಲಸವನ್ನು ಮಾಡಬೇಡಿ. ತಾಳ್ಮೆಯಿಂದ ಜಯ ಖಚಿತ.

ಕುಂಭ ರಾಶಿ (Aquarius)

ಆರೋಗ್ಯ ಉತ್ತಮವಾಗಿ ಇರುವುದಿರಂದ ಕೆಲಸ ಕಾರ್ಯಗಳು ಉತ್ಸಾಹದಿಂದ ನಡೆಯಲಿದೆ. ಅನಿರೀಕ್ಷಿತ ಹಣಕಾಸಿನಿಂದ ಅನುಕೂಲಕರ. ಧನಲಾಭದಿಂದ ಮನಸಿಗೆ ನೆಮ್ಮದಿ ಸಿಗಲಿದೆ. ಸಾಲದ ಒತ್ತಡದಿಂದ ನಿಮಗೆ ಮುಕ್ತಿ ಸಿಗಲಿದೆ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.

ಮೀನ ರಾಶಿ (Pisces)

ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸಾಮಾಜಿಕವಾಗಿ ಗೌರವ ಮತ್ತು ಕೀರ್ತಿ ಹೆಚ್ಚಾಗಲಿದೆ. ನೀವು ಕೈಗೊಳ್ಳುವ ಎಲ್ಲಾ ಪ್ರಯತ್ನಗಳಲ್ಲಿಯೂ ಯಶಸ್ಸು ಸಾಧಿಸುತ್ತೀರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.