Horoscope Today in Kannada - ದಿನಭವಿಷ್ಯ ಅಕ್ಟೋಬರ್ 04 2027 : ಪರಿಘ ಯೋಗ ಯಾವ ರಾಶಿಗೆ ಶುಭ
ಮೇಷ ರಾಶಿ (Aries) ಬಹುಕಾಲದ ಆಸೆಗಳು ಇಂದು ಈಡೇರಲಿದೆ. ವಿದೇಶಿ ಪ್ರಯಾಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಫಲಿತಾಂಶ ಸಿಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ದಿನಭವಿಷ್ಯ : ಇಂದು ಅಕ್ಟೋಬರ್ 4, 2026 ಭಾನುವಾರ. ಆಶ್ವಿನ್ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ . ಇಂದಿನ ಪಂಚಾಂಗದ ಪ್ರಕಾರ ಪರಿಘ ಯೋಗ, ಪುನರ್ವಸು ನಕ್ಷತ್ರದ ಮೇಲೆ ಪ್ರಭಾವ ಬೀರಲಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಟ್ಟು ಎಲ್ಲಾ 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ತಿಳಿಯೋಣಾ.
ಮೇಷ ರಾಶಿ (Aries)
ಬಹುಕಾಲದ ಆಸೆಗಳು ಇಂದು ಈಡೇರಲಿದೆ. ವಿದೇಶಿ ಪ್ರಯಾಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಫಲಿತಾಂಶ ಸಿಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ.
ವೃಷಭ ರಾಶಿ (Taurus)
ಆರ್ಥಿಕವಾಗಿ ನಿಮ್ಮ ಪಾಲಿಗೆ ಇಂದು ಲಾಭದಾಯಕವಾಗಿರುವ ದಿನ. ವಿದೇಶ ಪ್ರಯಾಣದ ಪ್ರಯತ್ನಗಳು ಇಂದು ಕೈಗೂಡಲಿದೆ. ನೆಂಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.
ಮಿಥುನ ರಾಶಿ (Gemini)
ಪರಿಶ್ರಮದಿಂದ ನೀವು ಎಲ್ಲವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಕೈಗೊಂಡ ಕೆಲವು ಕಾರ್ಯಗಳಿಗೆ ಆರಂಭಿಕ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮದಿಂದ ಎಲ್ಲವನ್ನೂ ಪೂರ್ಣಗೊಳಿಸುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತೀರಾ ಅಗತ್ಯ.
ಕರ್ಕಾಟಕ ರಾಶಿ (Cancer)
ನಿಮ್ಮ ಮಾತಿನ ಮೇಲೆ ಸಂಯಮ ಇರಲಿ. ಬಂಧು ಮಿತ್ರರೊಂದಿಗೆ ಅನಾವಶ್ಯಕ ವಾದ ವಿವಾದ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಕುಟುಂಬದಲ್ಲಿನ ವಾತಾರಣ ಮನಃಶಾಂತಿಗೆ ಕೊರತೆ ತರಲಿದೆ.
ಸಿಂಹ ರಾಶಿ (Leo)
ಪ್ರಯಾಣ ಮತ್ತು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆವಹಿಸಿ. ಮಕ್ಕಳ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ನಿರ್ಲಕ್ಷ್ಯ ಮಾಡಲೇ ಬೇಡಿ.
ಕನ್ಯಾ ರಾಶಿ (Virgo)
ಅನಿರೀಕ್ಷಿತವಾಗಿ ಹೊಸ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ನಿಮ್ಮದಾಗಲಿದೆ. ಆತ್ಮೀಯರ ಭೇಟಿಯಿಂದ ಮನಸಿಗೆ ನೆಮ್ಮದಿ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯ ಲಕ್ಷಣ ಕಂಡು ಬರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.
ತುಲಾ ರಾಶಿ (Libra)
ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಶುಭ ಕಾರ್ಯಗಳಿಗೆ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಹೊಸ ವಸ್ತು, ಆಭರಣ ಖರೀದಿ ಯೋಗವಿದ್ದು, ಕುಟುಂಬದಿಂದಲೂ ಸಂಪೂರ್ಣ ಸಹಕಾರ ಸಿಗಲಿದೆ.
ವೃಶ್ಚಿಕ ರಾಶಿ (Scorpio)
ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿ. ಆಕಸ್ಮಿಕವಾಗಿ ಎದುರಾಗುವ ಖರ್ಚುಗಳನ್ನು ನಿಭಾಯಿಸುವ ಶಕ್ತಿ ನಿಮ್ಮದಾಗಲಿದೆ. ಕುಟುಂಬದ ಕಡೆಯಿಂದ ಅನಿರೀಕ್ಷಿತ ಧನಲಾಭವಿದೆ.
ಧನಸ್ಸು ರಾಶಿ (Sagittarius)
ಕೆಲವು ಸಂಗತಿಗಳು ನಿರೀಕ್ಷೆಯಂತೆ ನಡೆಯುವುದಿಲ್ಲ. ಇದರಿಂದಾಗಿ ಮನಸ್ಸಿನಲ್ಲಿ ಅಶಾಂತಿ, ನಿರಾಸೆ ಮೂಡಲಿದೆ. ಮಾತಿನ ಮೇಲೆ ನಿಗಾ ಇರಲಿ. ಸ್ತಿರಾಸ್ತಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಮುನ್ನ ವಿವೇಕದಿಂದ ವರ್ತಿಸಿ.
ಮಕರ ರಾಶಿ (Capricorn)
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉತ್ಸಾಹವನ್ನು ಕಡಿಮೆ ಮಾಡಲಿದೆ. ಮನಸ್ಸಿನಲ್ಲಿ ಚಂಚಲತೆ ಹೆಚ್ಚಾಗುವ ಸಾಧ್ಯತೆಯಿದೆ. ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸುವುದು ಒಳಿತು. ಪ್ರಮುಖ ನಿರ್ಧಾರಗಳನ್ನು ಯಾವುದೇ ಕಾರಣಕ್ಕೂ ಆತುರದಿಂದ ತೆಗೆದುಕೊಳ್ಳಲೇ ಬೇಡಿ.
ಕುಂಭ ರಾಶಿ (Aquarius)
ಆರೋಗ್ಯವು ಉತ್ತಮವಾಗಿ ಇರಲಿದೆ. ಹೀಗಾಗಿ ನೀವು ಇಂದು ಉತ್ಸಾಹದಿಂದಲೇ ಕೆಲಸ ಮಾಡುತ್ತೀರಿ. ಅನಿರೀಕ್ಷಿತ ಹಣಕಾಸಿನ ಅನುಕೂಲದಿಂದ ಧನಲಾಭವಾಗಲಿದೆ. ಸಾಲದ ಒತ್ತಡದಿಂದ ಕ್ರಮೇಣ ನಿಮಗೆ ಮುಕ್ತಿ ಸಿಗಲಿದೆ. ಕೌಟುಂಬಿಕವಾಗಿ ನೆಮ್ಮದಿ ನೆಲೆಸಲಿದೆ.
ಮೀನ ರಾಶಿ (Pisces)
ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಇಂದು ಪೂರ್ಣಗೊಂಡು ಮನಸಿಗೆ ನೆಮ್ಮದಿ ತರಲಿದೆ. ಸಾಮಾಜಿಕವಾಗಿ ಕೀರ್ತಿ ಮತ್ತು ಗೌರವ ಹೆಚ್ಚಲಿದೆ. ನೀವು ಕೈಗೊಳ್ಳುವ ಎಲ್ಲಾ ಪ್ರಯತ್ನಗಳು ಇಂದು ಫಲ ಕೊಡಲಿದೆ.
Topics
ಸಂಬಂಧಿತ ಸುದ್ದಿಗಳು
astrology
Horoscope Today: ಇಂದಿನ ದಿನ ಭವಿಷ್ಯ 03 October 2026: ಈ ರಾಶಿಯವರಿಗೆ ಕುಬೇರ ಯೋಗ
astrology
ದಿನಭವಿಷ್ಯ ಅಕ್ಟೋಬರ್ 02, 2026 : ಮಹಾಲಕ್ಷ್ಮೀ ಯೋಗ ಈ ರಾಶಿಗೆ ಧನಲಾಭ
astrology
ಮನೆಯಲ್ಲಿ ಮೆಟ್ಟಿಲುಗಳ ಸಂಖ್ಯೆ ಎಷ್ಟಿರಬೇಕು? ವಾಸ್ತು ಶಾಸ್ತ್ರದಲ್ಲಿದೆ ಇದಕ್ಕೆ ಉತ್ತರ !
astrology

