Horoscope Today: ಇಂದಿನ ದಿನ ಭವಿಷ್ಯ 03 October 2026: ಈ ರಾಶಿಯವರಿಗೆ ಕುಬೇರ ಯೋಗ
ಮೇಷ ರಾಶಿ (Aries) : ಪ್ರಮುಖವಾಗಿರುವ ವ್ಯಕ್ತಿಗಳ ಭೇಟಿ ಮತ್ತು ಪರಿಚಯದಿಂದ ವೃತ್ತಿರಂಗದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
Horoscope Today : ದಿನಭವಿಷ್ಯ - ಇಂದು ಅಕ್ಟೋಬರ್ 03, 2026 ಶನಿವಾರ. ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತದೆ. ಇಂದು ವಿಶೇಷವಾಗಿ ಕುಬೇರ ಯೋಗದ ಪ್ರಭಾವದಿಂದ ಕೆಲವು ರಾಶಿಯವರು ಆರ್ಥಿಕವಾಗಿ ಅಧಿಕ ಲಾಭವನ್ನು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಅಲ್ಲದೇ ಕೆಲವು ರಾಶಿಯವರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ. ಯಾವ ರಾಶಿಯವರಿಗೆ ಇಂದು ಯಾವ ರೀತಿಯ ಶುಭಫಲಗಳಿಗೆ ಎಂದು ತಿಳಿಯೋಣಾ.
ಮೇಷ ರಾಶಿ (Aries)
ಪ್ರಮುಖವಾಗಿರುವ ವ್ಯಕ್ತಿಗಳ ಭೇಟಿ ಮತ್ತು ಪರಿಚಯದಿಂದ ವೃತ್ತಿರಂಗದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ವರಿಯಾನ್ ಯೋಗದ ಪ್ರಭಾವದಿಂದಾಗಿ ನಿಮಗೆ ಆರ್ಥಿಕವಾಗಿ ಲಾಭವನ್ನು ತಂದುಕೊಡಲಿದೆ. ಅನಗತ್ಯ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ವೃಷಭ ರಾಶಿ (Taurus)
ಯಾವುದೇ ಕೆಲಸಗಳನ್ನು ಕೈಗೊಂಡರೂ ಕೂಡ ಅದರಲ್ಲಿ ಯಶಸ್ಸು ಸಿಗಲಿದೆ. ಹಲವು ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಶಕ್ತಿಯು ನಿಮ್ಮದಾಗಲಿದೆ. ವ್ಯಾಪಾರ ವಿಸ್ತರಣೆಗೆ ಉತ್ತಮ ಅವಕಾಶವೂ ಇದ್ದು, ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬಸ್ಥರ ಜೊತೆಗೆ ತೆರಳುವ ಯೋಗವಿದೆ.
ಮಿಥುನ ರಾಶಿ (Gemini)
ಮಾನಸಿಕವಾಗಿ ಇಂದು ಖುಷಿಯಾಗಿ ಇರುತ್ತೀರಿ. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ ಇರಲಿದೆ. ಸಂದರ್ಶನ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವವರಿಗೆ ಇಂದು ಉತ್ತಮ ಫಲಿತಾಂಶ ದೊರೆಯಲಿದೆ. ಆದರೆ ಅನಿರೀಕ್ಷಿತವಾದ ಖರ್ಚುಗಳ ಬಗ್ಗೆ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ.
ಕರ್ಕಾಟಕ ರಾಶಿ (Cancer)
ಹೊಸ ಆದಾಯದ ಮೂಲಗಳು ನಿಮಗೆ ಗೋಚರಕ್ಕೆ ಬರಲಿದೆ. ಕುಬೇರ ಯೋಗದ ಪ್ರಭಾವದಿಂದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು, ವೈಯಕ್ತಿಕ ಜೀವನದಲ್ಲಿ ಸಂತಸ ಹೆಚ್ಚುತ್ತದೆ. ಮೇಲಾಧಿಕಾರಿಗಳಿಂದ ಪ್ರಶಂಸೆಯೂ ಸಿಗಲಿದೆ.
ಸಿಂಹ ರಾಶಿ (Leo)
ಹಿರಿಯ ಅಧಿಕಾರಿಗಳ ಸಹಕಾರದಿಂದ ಉದ್ಯೋಗದಲ್ಲಿ ಮುನ್ನಡೆ ಸಿಗಲಿದೆ. ಸಂಬಂಧಿಕರ ಜೊತೆಗೆ ಅನಗತ್ಯ ವಾದ ವಿವಾದಗಳಲ್ಲಿ ತೊಡಗಬೇಡಿ. ಮನಸ್ಸಿನಲ್ಲಿರುವ ಸಣ್ಣಪುಟ್ಟ ಗೊಂದಲಗಳು, ಚಂಚಲತೆ ನಿಮ್ಮನ್ನು ಕಾಡಬಹುದು.
ಕನ್ಯಾ ರಾಶಿ (Virgo)
ನಿಮ್ಮನ್ನು ಕಾಡುತ್ತಿದ್ದ ಮಾನಸಿಕ ಒತ್ತಡಗಳು ನಿಧಾನವಾಗಿ ಕಡಿಮೆಯಾಗಲಿದೆ. ತಾಯಿಯ ಬೆಂಬಲ ಮತ್ತು ಸಹಕಾರ ಸಿಗಲಿದೆ. ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದ್ದು, ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕಲಿದೆ.
ತುಲಾ ರಾಶಿ (Libra)
ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಉತ್ತಮ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಗೋಚರಕ್ಕೆ ಬರಲಿದೆ. ಆದರೆ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಉತ್ತಮ. ತಾಳ್ಮೆಯಿಂದ ವರ್ತಿಸುವುದರಿಂದ ಹಲವು ಲಾಭವಿದೆ.
ವೃಶ್ಚಿಕ ರಾಶಿ (Scorpio)
ಕುಟುಂಬದ ವಿಚಾರದಲ್ಲಿ ಸಂತೋಷ ಮತ್ತು ಸಮಾಧಾಕರ ವಾತಾವರಣ ಇರಲಿದೆ. ಕ್ರೀಡೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉತ್ಸಾಹದಾಯಕವಾದ ದಿನ. ಸಂಗಾತಿಯು ನಿಮಗೆ ಭಾವನಾತ್ಮಕ ಬೆಂಬಲ ನೀಡಲಿದ್ದಾರೆ. ಇದರಿಂದಾಗಿ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಧನಸ್ಸು ರಾಶಿ (Sagittarius)
ಸಾಮಾಜಿಕವಾಗಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಆದರೆ ಅನಗತ್ಯ ಖರ್ಚುಗಳು, ಅನಗತ್ಯ ಪ್ರಯಾಣಗಳು ಹೆಚ್ಚಳವಾಗಲಿದೆ. ನಿಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸದೇ ಹೆಚ್ಚಿನ ಗಮನ ಕೊಡಿ.
ಮಕರ ರಾಶಿ (Capricorn)
ಸಾಧ್ಯವಾದಷ್ಟು ನೀವು ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ಆಧ್ಯಾತ್ಮಿಕ ಚಿಂತನೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬೆಳಗಿನ ಅವಧಿಯಲ್ಲಿ ಧ್ಯಾನವನ್ನು ಮಾಡಿ. ವ್ಯವಹಾರಗಳಲ್ಲಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬೇಡಿ.
ಕುಂಭ ರಾಶಿ (Aquarius)
ಅನಿರೀಕ್ಷಿತವಾದ ಧನಲಾಭದ ಜೊತೆಗೆ ಹೊಸ ಆಭರಣಗಳನ್ನು ಖರೀದಿಸುವ ಯೋಗವಿದೆ. ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಹೊಸ ದಾರಿಗಳು ತೆರೆದುಕೊಳ್ಳಲಿವೆ. ಸಾಲ ಬಾಧೆಯಿಂದ ನೀವು ಮುಕ್ತರಾಗುವ ಕಾರಣದಿಂದ ಮನಸ್ಸು ಹಗುರವಾಗಲಿದೆ.
ಮೀನ ರಾಶಿ (Pisces)
ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಪ್ರಗತಿ ಸಾಧಿಸಲಿದೆ. ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಅವಕಾಶವನ್ನು ನೀಡದೇ ಸ್ಪಷ್ಟವಾಗಿರುವ ನಿರ್ಧಾರವನ್ನು ಕೈಗೊಳ್ಳಿ. ಪ್ರಯಾಣದ ವೇಳೆಯಲ್ಲಿ ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಬಹಳ ಮುಖ್ಯ.
Topics
ಸಂಬಂಧಿತ ಸುದ್ದಿಗಳು
astrology
ದಿನಭವಿಷ್ಯ ಅಕ್ಟೋಬರ್ 02, 2026 : ಮಹಾಲಕ್ಷ್ಮೀ ಯೋಗ ಈ ರಾಶಿಗೆ ಧನಲಾಭ
astrology
ಮನೆಯಲ್ಲಿ ಮೆಟ್ಟಿಲುಗಳ ಸಂಖ್ಯೆ ಎಷ್ಟಿರಬೇಕು? ವಾಸ್ತು ಶಾಸ್ತ್ರದಲ್ಲಿದೆ ಇದಕ್ಕೆ ಉತ್ತರ !
astrology
ಪಿತೃ ಪಕ್ಷದ ಸಮಯದಲ್ಲಿ ಈ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ ! ಇಲ್ಲವಾದರೆ ದಾರಿದ್ರ್ಯ ಗ್ಯಾರಂಟಿ !
astrology

