Kannada News Next

astrology

ದಿನ ಭವಿಷ್ಯ ಅಕ್ಟೋಬರ್ 09 2026: ಇಂದಿನ ಪಂಚಾಂಗ, ನಕ್ಷತ್ರ ಫಲ ಹಾಗೂ ದ್ವಾದಶ ರಾಶಿಗಳ ಫಲಾಫಲಗಳು

ದಿನ ಭವಿಷ್ಯ ( Horoscope Today in Kannada) ಅಕ್ಟೋಬರ್ 09 2026 ಶುಕ್ರವಾರ. ಸ್ವಸ್ತಿ ಶ್ರೀ ಪರಾಭವ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವಿನ ಮಾಸ, ಕೃಷ್ಣ ಪಕ್ಷದ ಚತುರ್ದಶಿ ತಿಥಿ

By Arun Gundmi | ಅರುಣ್‌ ಗುಂಡ್ಮಿ Editor-in-Chief
horoscope today in kannada 09 october 2026

ದಿನ ಭವಿಷ್ಯ ( Horoscope Today in Kannada) ಅಕ್ಟೋಬರ್ 09 2026 ಶುಕ್ರವಾರ. ಸ್ವಸ್ತಿ ಶ್ರೀ ಪರಾಭವ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವಿನ ಮಾಸ, ಕೃಷ್ಣ ಪಕ್ಷದ ಚತುರ್ದಶಿ ತಿಥಿ ಇಂದು ರಾತ್ರಿ ರಾತ್ರಿ 09:20 ರವರೆಗೆ ಪೂರ್ವಾಫಲ್ಗುಣಿ ನಕ್ಷತ್ರ ಇರಲಿದ್ದು, ನಂತರದಲ್ಲಿ ಉತ್ತರಫಲ್ಗುಣಿ ನಕ್ಷತ್ರ ಪ್ರವೇಶಿಸಲಿದೆ. ಬ್ರಹ್ಮಯೋಗ ಮತ್ತು ಶಕುನಿ ಕರಣದ ಸಂಯೋಗಯುವ ರಾಶಿಹಗಳ ಮೇಳೆ ಪ್ರಭಾವ ಬೀರಲಿದೆ. ಮಹಾಲಕ್ಷ್ಮೀಯ ಕೃಪೆಯ ಜೊತೆಗೆ ವಿಶೇಷ ರಾಜಯೋಗವಿದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ ಎಂದು ತಿಳಿಯೋಣಾ.

ಮೇಷ ರಾಶಿ (Aries)

ಇಂದು ನಿಮಗೆ ವೃತ್ತಿ ಜೀವನದಲ್ಲಿ ಅತ್ಯಂತ ಅನುಕೂಲಕರವಾಗಿರುವ ದಿನ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ನೀವು ಪ್ರಶಂಸೆಗೆ ಒಳಗಾಗುತ್ತೀರಿ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ವ್ಯಾಪಾರದಲ್ಲಿಯೂ ಆರ್ಥಿಕ ಪ್ರಗತಿ ಕಂಡು ಬರಲಿದ್ದು, ಹೂಡಿಕೆಯಿಂದ ಅಧಿಕ ಲಾಭವಿದೆ. ಕುಟುಂಬ ಸದಸ್ಯರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ಆರೋಗ್ಯವೂ ವೃದ್ದಿಸಲಿದೆ.

ವೃಷಭ ರಾಶಿ (Taurus)

ನಿಮ್ಮ ಪಾಲಿಗೆ ಇಂದು ಸವಾಲಿನ ದಿನ. ಸಹೋದ್ಯೋಗಿಗಳ ಜೊತೆಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಕಂಡು ಬರಲಿದೆ. ಹೀಗಾಗಿ ಮಾತಿನ ಮೇಲೆ ಹಿಡಿತ ಇರಲಿ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇರಿಸಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ. ಸಂಗಾತಿಯ ಬೆಂಬಲ ನಿಮ್ಮ ಮನಸ್ಸಿಗೆ ಧೈರ್ಯವನ್ನು ತರಲಿದೆ. ದೇವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಿಥುನ ರಾಶಿ (Gemini)

ಬುದ್ದಿವಂತಿಕೆ ಹಾಗೂ ಸಂವಹನ ಕೌಶಲ್ಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಅತೀ ಅಗತ್ಯ. ಸ್ನೇಹಿತರ ನೆರವಿನಿಂದ ದೀರ್ಘ ಕಾಲದಿಂದ ಬಾಕಿ ಉಳಿದ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ. ಸಂಜೆಯ ಹೊತ್ತಿಗೆ ವಿಶೇಷ ಶುಭ ಸುದ್ದಿಯೊಂದನ್ನು ಕೇಳುತ್ತೀರಿ.

ಕರ್ಕಾಟಕ ರಾಶಿ (Cancer)

ಆರ್ಥಿಕವಾಗಿ ನಿಮ್ಮ ಪಾಲಿಗೆ ಇಂದು ಲಾಭದಾಯಕವಾಗಿರುವ ದಿನ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಕೌಟುಂಬಿಕ ವಿಚಾರದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಹೊಸ ವಾಹನ ಖರೀದಿಗೆ ಮನಸ್ಸು ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅತೀ ಮುಖ್ಯ. ಹೊರಗಿನ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು.

ಸಿಂಹ ರಾಶಿ (Leo )

ಸಾಮಾಜಿಕವಾಗಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಉದ್ಯೋಗಸ್ಥರಿಗೆ ಬಡ್ತಿ ಅಥವಾ ಸ್ಥಳ ಬದಲಾವಣೆಯ ಸೂಚನೆಗಳು ಕಂಡು ಬರಲಿದೆ. ವ್ಯಾಪಾರದಲ್ಲಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಸೂಕ್ತವಾಗಿರುವ ಸಮಯ. ಕುಟುಂಬದ ಹಿರಿಯ ಆರೋಗ್ಯದಲ್ಲಿ ವೃದ್ದಿಸಲಿದೆ.

ಕನ್ಯಾ ರಾಶಿ (Virgo)

ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುವ ಸಾಧ್ಯತೆಯಿದೆ. ಪ್ರಯಾಣದ ವೇಳೆಯಲ್ಲಿ ಎಚ್ಚರಿಕೆ ವಹಿಸುವುದು ಅತೀ ಮುಖ್ಯ. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಧ್ಯಾನ ಅಥವಾ ಯೋಗ ಮಾಡುವುದರಿಂದ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಬಹುದು.

ತುಲಾ ರಾಶಿ (Libra)

ನಿಮ್ಮ ಪಾಲಿಗೆ ಅತ್ಯಂತ ಅದೃಷ್ಟದ ದಿನ. ಹಲವು ಕಾಲದಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಯಾವುದೇ ಅಡಚಣೆ ಇಲ್ಲದೇ ಪೂರ್ಣಗೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಪ್ರೇಮಿಗಳಿಗೆ ಹಾಗೂ ದಂಪತಿಗಳಲ್ಲಿ ಅನ್ಯೋನ್ಯತೆ ಹೆಚ್ಚಲಿದ್ದು, ಹೊಸ ಸ್ನೇಹಿತರ ಪರಿಚಯವಾಗಲಿದೆ.

ವೃಶ್ಚಿಕ ರಾಶಿ (Scorpio)

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮೇಲಾಧಿಕಾರಿಗಳಿಂದ ನೀವು ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವ್ಯವಹಾರಿಕ ಕ್ಷೇತ್ರದಲ್ಲಿ ಲಾಭದ ಪ್ರಮಾಣ ಹೆಚ್ಚಲಿದೆ. ಆರೋಗ್ಯದ ದೃಷ್ಟಿಯಿಂದ ಇಡೀ ದಿನ ನೀವು ಚೈತನ್ಯದಿಂದ ಕೂಡಿ ಇರಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ನೀವು ನೆಮ್ಮದಿಯನ್ನು ಕಾಣಲಿದ್ದೀರಿ.

ಧನುಸ್ಸು ರಾಶಿ (Sagittarius)

ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಲವು ಹೆಚ್ಚಲಿದೆ. ದೂರದ ಪ್ರಯಾಣವು ನಿಮಗೆ ಲಾಭವನ್ನು ತಂದುಕೊಡಲಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರ್ಥಿಕ ಸ್ಥಿತಿ ಸ್ಥಿರವಾಗಿ ಇರಲಿದ್ದು, ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಮಕರ ರಾಶಿ (Capricorn)

ನಿಮ್ಮ ಪಾಲಿಗೆ ಇಂದು ತಾಳ್ಮೆ ಹಾಗೂ ಸಂಯಮ ಅತೀ ಅಗತ್ಯ. ಆರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಕಂಡು ಬರಲಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಆತುರದ ನಿರ್ಧಾರಗಳು ನಷ್ಟವನ್ನು ತರಬಹುದು. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ಅತೀ ಅಗತ್ಯ. ಕುಟುಂಬ ಸದಸ್ಯರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.

ಕುಂಭ ರಾಶಿ (Aquarius)

ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯ ಪ್ರಯತ್ನದಲ್ಲಿ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಸ್ನೇಹಿತರೊಂದಿಗೆ ಹರ್ಷ ಚಿತ್ತದಿಂದ ಕಳೆಯುತ್ತೀರಿ. ಆರ್ಥಿಕವಾಗಿ ಪ್ರಗತಿದಾಯಕವಾಗಿರುವ ದಿನ.

ಮೀನ ರಾಶಿ ( Pisces)

ಸಾಲಬಾಧೆ, ಕಾನೂನು ವ್ಯಾಜ್ಯಗಳಿಂದ ಮುಕ್ತಿ ಸಿಗುವ ಸೂಚನೆಗಳು ದೊರೆಯಲಿದೆ. ನಿಮ್ಮ ಮುಂದೆ ಶತ್ರುಗಳು ಹಾಗೂ ವಿರೋಧಿಗಳು ಸೋಲನ್ನು ಕಾಣುತ್ತಾರೆ. ಕಚೇರಿಯಲ್ಲಿ ಕೆಲಸಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ಮನೆಯ ಅಂಗಳದಲ್ಲಿ ಮಂಗಳ ಕಾರ್ಯಗಳು ನಡೆಯಲಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಸಲಿದೆ.