Horoscope Today in Kannada : ದಿನಭವಿಷ್ಯ ಅಕ್ಟೋಬರ್ 06 2026 : 12 ರಾಶಿಗಳ ಸಂಪೂರ್ಣ ರಾಶಿ ಭವಿಷ್ಯ
ದಿನಭವಿಷ್ಯ : ಇಂದು ಅಕ್ಟೋಬರ್ 06 2026 ಮಂಗಳವಾರ. ದ್ವಾದಶರಾಶಿಗಳ ಮೇಲೆ ಆಶ್ಲೇಷಾ ನಕ್ಷತ್ರದ ಪ್ರಭಾವ ಇರಲಿದ್ದು, ಕರ್ಕಾಟಕರಾಶಿಯಲ್ಲಿ ಚಂದ್ರನು ಸಂಚಾರ ಮಾಡುತ್ತಾನೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
3 min read
ದಿನಭವಿಷ್ಯ : ಇಂದು ಅಕ್ಟೋಬರ್ 06 2026 ಮಂಗಳವಾರ. ದ್ವಾದಶರಾಶಿಗಳ ಮೇಲೆ ಆಶ್ಲೇಷಾ ನಕ್ಷತ್ರದ ಪ್ರಭಾವ ಇರಲಿದ್ದು, ಕರ್ಕಾಟಕರಾಶಿಯಲ್ಲಿ ಚಂದ್ರನು ಸಂಚಾರ ಮಾಡುತ್ತಾನೆ. ಇಂದು ಕೆಲವು ರಾಶಿಗಳಿಗೆ ಆಂಜನೇಯ ದೇವರ ಅನುಗ್ರಹ ಇರಲಿದೆ. ಕೆಲಸದ ಸ್ಥಳದಲ್ಲಿ ಹೊಸ ಅವಕಾಶದ ಬಾಗಿಲು ತೆರೆಯಲಿದ್ದು, ಆಸ್ತಿ ಖರೀದಿ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚು ಶುಭಫಲಗಳು ಸಿಗಲಿದೆ. ಹಾಗಾದ್ರೆ ಇಂದು 12 ರಾಶಿಗಳ ಸಂಪೂರ್ಣ ರಾಶಿಫಲ ಹೇಗಿದೆ ತಿಳಿಯೋಣಾ.
12 ರಾಶಿಗಳ ಇಂದಿನ ದಿನಭವಿಷ್ಯ
ಮೇಷ ರಾಶಿ (Aries)
ಇಂದು ಮಂಗಳವಾರ. ನಿಮ್ಮ ಪಾಲಿಗೆ ಇಂದು ಅತ್ಯಂತ ಅನುಕೂಲಕರ, ಶುಭದಾಯಕವಾದ ದಿನ. ಚಂದ್ರನು ಶುಭ ಸ್ಥಿತಿಯಲ್ಲಿ ಇರಲಿದ್ದು, ಆತ್ಮವಿಶ್ವಾಸ ಮತ್ತು ಕೆಲಸದಲ್ಲಿ ಏಕಾಗ್ರತೆ ಇನ್ನಷ್ಟು ಹೆಚ್ಚಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ ಸಿಗಲಿದೆ. ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಹೂಡಿಕೆಗಳಿಂದ ಅಧಿಕ ಲಾಭ ಹರಿಯಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿದೆ. ಕೌಟುಂಬಿಕ ಜೀವನದ ಗೊಂದಲಗಳು ಪರಿಹಾರ ಕಾಣಲಿವೆ.
ವೃಷಭ ರಾಶಿ (Taurus)
ಆಂಜನೇಯ ಸ್ವಾಮಿಯ ವಿಶೇಷ ಅನುಗ್ರಹ ಸಿಗಲಿದೆ. ಮಧ್ಯಾಹ್ನದ ನಂತರದಲ್ಲಿ ನೀವು ಸಾಲು ಸಾಲು ಶುಭ ಸುದ್ದಿಗಳನ್ನು ಕೇಳುತ್ತೀರಿ. ಉದ್ಯೋಗಳ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಗೆ ಇದ್ದ ವೈಮನಸ್ಸು ಕರಗಲಿದೆ. ಉದ್ಯೋಗ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮುನ್ನ ಅನುಭವಸ್ಥರ ಸಲಹೆ ಪಡೆಯುವುದು ಒಳಿತು. ಆಕಸ್ಮಿಕ ಧನಲಾಭ ಇದ್ದರೂ ಕೂಡ ಖರ್ಚುಗಳ ಮೇಲೆ ನಿಯಂತ್ರಣ ಇಡುವುದು ಮುಖ್ಯ. ಕುಟುಂಬದ ಹಿರಿಯರ ಆರೋಗ್ಯ ಬಗ್ಗೆ ಕಾಳಜಿವಹಿಸುವುದು ಅಗತ್ಯ. ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಕೆಂಪು ಹೂವುಗಳನ್ನು ಆರ್ಪಿಸಿ.
ಮಿಥುನ ರಾಶಿ (Gemini)
ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನ. ಉದ್ಯೋಗದಲ್ಲಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬೇಡಿ. ಶಾಂತ ಚಿತ್ತದಿಂದ ಕೆಲಸ, ಕಾರ್ಯಗಳನ್ನು ಮಾಡುವುದರಿಂದ ಯಶಸ್ಸಿಗೆ ದಾರಿಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕತೆಯನ್ನು ವಹಿಸಿ. ಯಾರಿಗೂ ಸಾಲ ನೀಡಬೇಡಿ ಮತ್ತು ಯಾರಿಂದಲೂ ಸಾಲವನ್ನು ಪಡೆಯಬೇಡಿ. ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕೆಲಸದ ಒತ್ತಡ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಧನಾತ್ಮಕ ಶಕ್ತಿಗಾಗಿ ವಿಷ್ಣು ಸಹಸ್ರನಾಮವನ್ನು ಪಠಿಸಿ.
ಕರ್ಕಾಟಕ ರಾಶಿ (Cancer)
ಅಪಾರವಾದ ವಿಶ್ವಾಸ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲಿದೆ. ಅತಿಯಾದ ಬುದ್ದಿವಂತಿಗೆ ಕಠಿಣ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಹಕಾರಿಯಾಗಲಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಸರಿಯಾದ ಸಮಯ. ಈ ಹಿಂದೆ ಮಾಡಿರುವ ಹೂಡಿಕೆಗಳು ಇಂದು ಲಾಭವನ್ನು ತಂದುಕೊಡಲಿದೆ. ಆರೋಗ್ಯದ ಬಗ್ಗೆ ಇಂದು ಕಾಳಜಿ ವಹಿಸಿ, ಶುಭಫಲಗಳನ್ನು ಪಡೆಯಲು ಶಿವನಿಗೆ ಕ್ಷೀರಾಭಿಷೇಕ ಮಾಡಿಸುವುದು ಶ್ರೇಯಸ್ಕರ.
ಸಿಂಹ ರಾಶಿ (Leo)
ವ್ಯವಹಾರ ಮತ್ತು ಆಡಳಿತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮಗೆ ಇಂದು ಸಂಪೂರ್ಣ ಫಲಗಳು ಸಿಗಲಿವೆ. ಇಂದು ಎಲ್ಲಾ ಕೆಲಸ ಕಾರ್ಯಗಳು ನಿಮ್ಮ ಪರವಾಗಿಯೇ ಆಗಲಿದೆ. ಶತ್ರುಗಳು ಮತ್ತು ವಿರೋಧಿಗಳು ನಿಮ್ಮ ಕೌಶಲ್ಯವನ್ನು ನೋಡಿ ಸುಮ್ಮನಾಗುತ್ತಾರೆ. ಉದ್ಯೋಗಸ್ಥರಿಗೆ ವೇತನ ಏರಿಕೆ, ಗೌರವ ಸಮ್ಮಾನಗಳು ದೊರೆಯುವ ಸಾಧ್ಯತೆಯಿದೆ. ಆದಾಯದ ವಿಚಾರದಲ್ಲಿ ಖರ್ಚು ಅಧಿಕವಾಗದಂತೆ ಎಚ್ಚರಿಕೆ ವಹಿಸಿ. ಯಾವುದೇ ಕಾರಣಕ್ಕೂ ಒಪ್ಪಂದಗಳಿಗೆ ಆತುರದಲ್ಲಿ ಸಹಿ ಹಾಕಬೇಡಿ. ಕೌಟುಂಬಿಕವಾಗಿ ಸಂತೋಷದ ದಿನ. ಸಕಲ ಕಾರ್ಯಗಳು ಯಶಸ್ವಿ ಆಗಬೇಕಾದ್ರೆ, ಸೂರ್ಯದೇವನನ್ನು ಪೂಜಿಸಿ.
ಕನ್ಯಾ ರಾಶಿ (Virgo)
ರಿಯಲ್ ಎಸ್ಟೇಟ್, ಆಸ್ತಿ ವ್ಯವಹಾರ ನಡೆಸುವವರಿಗೆ ಉತ್ತಮ ಅವಕಾಶಗಳು ಎದುರಾಗಲಿದೆ. ಹಳೆಯ ಸಾಲ, ನಿಂತು ಹೋಗಿದ್ದ ಎಲ್ಲಾ ಹಣ ನಿಮ್ಮ ಕೈ ಸೇರಲಿದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಕೆ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ನೂತನ ಪಾಲುದಾರಿಕೆ ವ್ಯವಹಾರಕ್ಕೆ ಕೈ ಜೋಡಿಸಲು ಇದು ಸೂಕ್ತವಾದ ಸಮಯ. ಕುಟುಂಬಸ್ಥರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ವೃತ್ತಿಯಲ್ಲಿನ ಅಭಿವೃದ್ದಿಗಾಗಿ ವಿಘ್ನ ವಿನಾಶಕನಿಗೆ ಗರಿಕೆಯನ್ನು ಅರ್ಪಿಸಿ.
ತುಲಾ ರಾಶಿ (Libra)
ನಿರಂತರವಾದ ಪರಿಶ್ರಮಕ್ಕೆ ತಕ್ಕಂತೆ ಅತ್ಯುತ್ತಮ ಪ್ರತಿಫಲ ನಿಮ್ಮದಾಗಲಿದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದ್ದು, ಉಳಿತಾಯದ ಬಗ್ಗೆ ಯೋಚಿಸುವುದು ಒಳಿತು. ವಾಹನ ಖರೀದಿ, ಆಸ್ತಿ ಖರೀದಿಯ ಯೋಗವಿದೆ. ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಮೇಲೆ ಇರುವ ಜವಾಬ್ದಾರಿಗಳನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಸಂಗಾತಿಯ ಬೆಂಬಲ ಸಿಗಲಿದ್ದು, ದಾಂಪತ್ಯ ಜೀವನವು ಮಧುರತೆಯಿಂದ ಕೂಡಿ ಇರಲಿದೆ. ಇನ್ನಷ್ಟು ಶುಭಫಲ ಪಡೆಯಲು ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ.
ವೃಶ್ಚಿಕ ರಾಶಿ (Scorpio)
ಮಂಗಳ ಗ್ರಹದ ಪ್ರಭಾವದಿಂದ ನಿಮ್ಮಲ್ಲಿ ಉತ್ತಮ ಉತ್ಸಾಹ ಇದೆ ಆದರೂ ಕೂಡ ಸಣ್ಣ ಪುಟ್ಟ ಗೊಂದಲಕ್ಕೆ ಅವಕಾಶ ನೀಡಿದ್ರೆ ಗೆಲುವು ಕಾಣೋದಕ್ಕೆ ಸಾಧ್ಯವಿಲ್ಲ. ಹೊಸ ಉದ್ಯಮ ಆರಂಭಕ್ಕೆ, ಉದ್ಯೋಗ ಬದಲಾಯಿಸು ಯೋಚಿಸುತ್ತಿರುವ ಉದ್ಯೋಗಿಗಳಿಗೆ ಸೂಕ್ತ ಮಾರ್ಗಗಳು ಗೋಚರಕ್ಕೆ ಬರಲಿದೆ. ಕೆಲಸದ ಸ್ಥಳದಲ್ಲಿ ಅನಗತ್ಯ ಮಾತುಕತೆ, ಘರ್ಷಣೆಗೆ ಅವಕಾಶ ನೀಡಬೇಡಿ. ತಂದೆಯ ಆರೋಗ್ಯದ ಕಡೆಗೆ ಗಮನ ಹರಿಸಿ, ಪ್ರಯಾಣದ ವೇಳೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿ. ಇಂದಿನ ಸಕಲ ವಿಘ್ನಗಳು ನಿವಾರಣೆ ಆಗಲು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ ಪೂಜೆ ಸಲ್ಲಿಸಿ.
ಧನಸ್ಸು ರಾಶಿ (Sagittarius)
ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಸ್ನೇಹಿತರ ಸಹಾಯದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ವ್ಯಾಪಾರಿಗಳಿಗೆ ಪ್ರಯಾಣದಿಂದ ಬಳಕೆ ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲಿ ಏಕಾಗ್ರತೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಸಂಪೂರ್ಣವಾಗಿ ನಿವಾರಣೆ ಆಗಲಿದ್ದು, ನಿರೀಕ್ಷಿತ ಧನಾಗಮನ ಆರ್ಥಿಕ ಚಿಂತೆಯಿಂದ ನಿಮ್ಮನ್ನು ದೂರ ಇಡಲಿದೆ. ನೀವು ಇಂದು ಇನ್ನಷ್ಟು ಲಾಭವನ್ನು ಪಡೆಯಲು ಜ್ಞಾನಕಾರಕ ದಕ್ಷಿಣಾಯ ಮೂರ್ತಿಯ ಸ್ತೋತ್ರಗಳನ್ನು ಭಕ್ತಿಯಿಂದ ಪಠಿಸಿ
ಮಕರ ರಾಶಿ (Capricorn)
ವ್ಯಾಪರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ.ಕಚೇರಿಯ ಕೆಲಸ ಕಾರ್ಯಗಳಿಂದಾಗಿ ನಿಮ್ಮ ಮೇಲಿನ ಜವಾಬ್ದಾರಿ ಹಾಗೂ ಒತ್ತಡ ಹೆಚ್ಚಲಿದೆ. ಆರ್ಥಿಕ ವಿಷಯಗಳಲ್ಲಿ ಖರ್ಚು ಹೆಚ್ಚುವ ಸಂಭವ ಇರಲಿದೆ. ಅನಗತ್ಯ ವಸ್ತುಗಳ ಖರೀದಿಯನ್ನು ಮುಂದೂಡುವುದು ಒಳಿತು. ಆರೋಗದ್ಯದಲ್ಲಿ ಅನಗತ್ಯ ಬದಲಾವಣೆ ಉಂಟಾಗಲಿದೆ. ಬಂಧು ಮಿತ್ರರ ಜೊತೆಯಲ್ಲಿ ಅನಗತ್ಯ ವಾದ, ಮನಸ್ತಾಪಕ್ಕೆ ಕಾರಣವಾಗಲಿದೆ. ಧನಾತ್ಮಕ ಫಲಗಳನ್ನು ಪಡೆಯಲು ಶನಿ ದೇವರಿಗೆ ಎಳ್ಳೆಣ್ಣೆ ದೀಪವನ್ನು ಹಚ್ಚಿ.
ಕುಂಭ ರಾಶಿ (Aquarius)
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಕಾಲದಿಂದಲೂ ನೆನಗುದಿಗೆ ಬಿದ್ದಿದ್ದ ವಿವಾದಗಳು ಇತ್ಯರ್ಥವನ್ನು ಕಾಣಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ಸಾಮಾಜಿಕವಾಗಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಕುಟುಂಬಸ್ಥರ ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳಿಗೆ ಇಷ್ಟು ದಿನ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯನ್ನು ಕಾಣಲಿದೆ. ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯುವ ಮೂಲಕ ಶುಭ ಫಲಗಳನ್ನು ಪಡೆಯುತ್ತೀರಿ.
ಮೀನ ರಾಶಿ (Pisces)
ಆರ್ಥಿಕ ವಿಚಾರದಲ್ಲಿ ಎದುರಾಗಿರುವ ಸಣ್ಣಪುಟ್ಟ ಅಡೆತಡೆಗಳು ನಿವಾರಣೆ ಆಗಲಿದೆ. ದೊಡ್ಡ ಪ್ರಯಾಣದ ಹಣದ ಹೂಡಿಕೆ, ಹೊಸ ಯೋಜನೆಗಳಲ್ಲಿ ಹಣ ಹೂಡುವ ನಿಮ್ಮ ಯೋಜನೆಯನ್ನು ಸ್ವಲ್ಪ ಕಾಲ ಮುಂದೂಡಿ. ಯಾವುದೇ ಕೆಲಸವನ್ನು ಕೈಗೊಳ್ಳುವ ಮೊದಲು ಮೇಲಾಧಿಕಾರಿಗಳ ಮಾರ್ಗದರ್ಶನವನ್ನು ಪಡೆಯುವುದು ಒಳಿತು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸು ಸಿಗುವ ಸಾಧ್ಯತೆಯಿದೆ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಇಂದು ಗುರು ರಾಘವೇಂದ್ರ ದೇವರನ್ನು ಮನಸ್ಸಿನಲ್ಲಿಯೇ ಸ್ಮರಣೆ ಮಾಡಿ.
Topics
ಸಂಬಂಧಿತ ಸುದ್ದಿಗಳು
astrology
Horoscope Today in Kannada : ದಿನಭವಿಷ್ಯ ೦5 ಅಕ್ಟೋಬರ್ 2026 : ಪುನರ್ವಸು ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಅದೃಷ್ಟ
astrology
Horoscope Today in Kannada - ದಿನಭವಿಷ್ಯ ಅಕ್ಟೋಬರ್ 04 2027 : ಪರಿಘ ಯೋಗ ಯಾವ ರಾಶಿಗೆ ಶುಭ
astrology
Horoscope Today: ಇಂದಿನ ದಿನ ಭವಿಷ್ಯ 03 October 2026: ಈ ರಾಶಿಯವರಿಗೆ ಕುಬೇರ ಯೋಗ
astrology

