ನಾವು ಧರಿಸುವ ಬಟ್ಟೆಗೂ, ನಕಾರಾತ್ಮಕ ಶಕ್ತಿಗೂ ಇದೆಯಾ ನಂಟು.. ವಾಸ್ತು ಶಾಸ್ತ್ರ ಹೇಳುವುದೇನು
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಧರಿಸುವ ಬಟ್ಟೆಯ ಶುಚಿತ್ವ ಹಾಗೂ ಬಣ್ಣಕ್ಕೂ ನಮ್ಮ ದೈನಂದಿನ ಜೀವನಕ್ಕೂ ನೇರ ನಂಟಿದೆ.
By Meghana Pranuth | ಮೇಘನಾ ಪ್ರಣೂತ್
1 min read
ನಾವು ಧರಿಸುವ ಉಡುಪುಗಳು ಕೇವಲ ನಮ್ಮ ವ್ಯಕ್ತಿತ್ವ ಮತ್ತು ಸೌಂದರ್ಯವನ್ನು ಬಿಂಬಿಸುವುದು ಮಾತ್ರವಲ್ಲ, ನಮ್ಮ ಸುತ್ತಲಿನ ಆಕರ್ಷಣೆ ಹಾಗೂ ಗ್ರಹಗಳ ಬಲದ ಮೇಲೆಯೂ ತೀವ್ರ ಪ್ರಭಾವ ಬೀರುತ್ತವೆ. ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಧರಿಸುವ ಬಟ್ಟೆಯ ಶುಚಿತ್ವ ಹಾಗೂ ಬಣ್ಣಕ್ಕೂ ನಮ್ಮ ದೈನಂದಿನ ಜೀವನಕ್ಕೂ ನೇರ ನಂಟಿದೆ.
ಜ್ಯೋತಿಷ್ಯದ ಪ್ರಕಾರ, ಕೊಳಕು ಮತ್ತು ವಾಸನೆ ಬರುವ ಬಟ್ಟೆಗಳನ್ನು ಧರಿಸುವುದರಿಂದ ಜಾತಕದಲ್ಲಿ ರಾಹು ಮತ್ತು ಶನಿ ಗ್ರಹಗಳ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ. ಮನೆಯಲ್ಲಿ ಧನ-ಧಾನ್ಯ ಮತ್ತು ಸಮೃದ್ಧಿ ನೆಲೆಸಬೇಕೆಂದರೆ ಸ್ವಚ್ಛತೆ ಅತಿ ಮುಖ್ಯ. ಒಗೆಯದ ಅಥವಾ ಹರಿದ ಬಟ್ಟೆಗಳನ್ನು ಧರಿಸುವವರ ಮನೆಗೆ ಲಕ್ಷ್ಮಿ ದೇವಿ ಒಲಿಯುವುದಿಲ್ಲ, ಇದರಿಂದ ದಾರಿದ್ರ್ಯ ಮತ್ತು ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಕೊಳಕು ಬಟ್ಟೆಗಳು ವ್ಯಕ್ತಿಯಲ್ಲಿ ಉತ್ಸಾಹವನ್ನು ಕುಗ್ಗಿಸಿ ಆಲಸ್ಯ, ಚಿಂತೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ತರುತ್ತವೆ.
ಸ್ವಚ್ಛ ಹಾಗೂ ಒಗೆದ ಬಟ್ಟೆಗಳ ಮಹತ್ವ:
ಪ್ರತಿದಿನ ಒಗೆದು, ಸ್ವಚ್ಛಗೊಳಿಸಿದ ಬಟ್ಟೆಗಳನ್ನು ಧರಿಸುವುದರಿಂದ ಸುಖ, ಸೌಂದರ್ಯ ಮತ್ತು ಸಂಪತ್ತಿನ ಕಾರಕನಾದ 'ಶುಕ್ರ ಗ್ರಹ' ಬಲಗೊಳ್ಳುತ್ತದೆ. ಸ್ವಚ್ಛ ಬಟ್ಟೆಯು ದೇಹದ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು (Positive Aura) ಸೃಷ್ಟಿಸುತ್ತದೆ. ಇದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ. ಮನೆಯ ಸದಸ್ಯರು ಸ್ವಚ್ಛತೆಗೆ ಆದ್ಯತೆ ನೀಡಿದಾಗ ಕುಟುಂಬದಲ್ಲಿ ಅನಗತ್ಯ ಜಗಳಗಳು ನಿಂತು ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ.
ಬಟ್ಟೆಗೆ ಸಂಬಂಧಿಸಿದ ಪ್ರಮುಖ ವಾಸ್ತು ನಿಯಮಗಳು:
ರಾತ್ರಿ ವೇಳೆ ಒಗೆದ ಬಟ್ಟೆಗಳನ್ನು ಹೊರಗಡೆ (ಬಿಸಿಲಿಲ್ಲದಾಗ) ಒಣಗಾಕಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಹರಿದ ಅಥವಾ ತೂತು ಬಿದ್ದ ಬಟ್ಟೆಗಳನ್ನು ಎಷ್ಟೇ ಪ್ರೀತಿಯದ್ದಾಗಿದ್ದರೂ ಧರಿಸಬಾರದು. ಬೇರೆಯವರ ಬಟ್ಟೆಗಳನ್ನು (ವಿಶೇಷವಾಗಿ ಒಗೆಯದೆ) ಧರಿಸುವುದು ವಾಸ್ತು ಪ್ರಕಾರ ಸೂಕ್ತವಲ್ಲ, ಇದರಿಂದ ಅವರ ನೆಗೆಟಿವ್ ಎನರ್ಜಿ ನಿಮಗೂ ತಾಗಬಹುದು.
ದಿನನಿತ್ಯ ಸ್ವಚ್ಛ ಮತ್ತು ಸುವಾಸನೆಯುಕ್ತ ಬಟ್ಟೆಗಳನ್ನು ಧರಿಸುವ ಅಭ್ಯಾಸ ಮಾಡಿಕೊಳ್ಳುವುದು ವಾಸ್ತು, ಜ್ಯೋತಿಷ್ಯ ಹಾಗೂ ವೈಯಕ್ತಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಶ್ರೇಷ್ಠ.
Topics
ಸಂಬಂಧಿತ ಸುದ್ದಿಗಳು
astrology
ಚಂದ್ರಗ್ರಹಣಕ್ಕೂ ಮುನ್ನ ಶನಿಯ ನಕ್ಷತ್ರ ಪರಿವರ್ತನೆ : ಆಗಸ್ಟ್ 20 ರಿಂದ ಈ 5 ರಾಶಿಯವರ ಬಾಳಲ್ಲಿ ಬೆಳಕು..!
astrology
ಆಗಸ್ಟ್ 18, 2026: ಶ್ರಾವಣ ಮಂಗಳವಾರದಂದು ಯಾವ ರಾಶಿಗೆ ಅದೃಷ್ಟ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಫಲ!
astrology
ಸೂರ್ಯ–ಕೇತು ಸಂಯೋಗ: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಪ್ರಾರಂಭ..!
astrology

