ಚಂದ್ರಗ್ರಹಣಕ್ಕೂ ಮುನ್ನ ಶನಿಯ ನಕ್ಷತ್ರ ಪರಿವರ್ತನೆ : ಆಗಸ್ಟ್ 20 ರಿಂದ ಈ 5 ರಾಶಿಯವರ ಬಾಳಲ್ಲಿ ಬೆಳಕು..!
ಶನಿಯು ಇದೇ ಆಗಸ್ಟ್ 20 ರಂದು ರೇವತಿ ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. ಶನಿಯ ಈ ನಕ್ಷತ್ರ ಪರಿವರ್ತನೆಯು ರಾಶಿ ಚಕ್ರದ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಮನುಷ್ಯನ ಕರ್ಮಗಳಿಗೆ ಅನುಸಾರವಾಗಿ ಶನಿಯು ಫಲಗಳನ್ನು ನೀಡುತ್ತಾನೆ. ಶನಿಯು ಇದೇ ಆಗಸ್ಟ್ 20 ರಂದು ರೇವತಿ ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. ಶನಿಯ ಈ ನಕ್ಷತ್ರ ಪರಿವರ್ತನೆಯು ರಾಶಿ ಚಕ್ರದ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಏಕೆಂದರೆ ರೇವತಿ ನಕ್ಷತ್ರದ ಅಧಿಪತಿ ಬುಧ. ಹಾಗಾಗಿ ಬುಧ ಮತ್ತು ಶನಿ ಸೇರಿ ಕೆಲವು ರಾಶಿಯವರಿಗೆ ಸಕಾರಾತ್ಮಕ ಫಲ ನೀಡಿದರೆ ಉಳಿದ ರಾಶಿಯವರು ಬಹಳ ಎಚ್ಚರದಿಂದಿರಬೇಕಾಗಿದೆ. ಶನಿಯ ನಕ್ಷತ್ರ ಪರಿವರ್ತನೆಯಿಂದ ಲಾಭ ಗಳಿಸುವ ರಾಶಿಗಳು ಯಾವುವು ಎಂದು ನೋಡೋಣ.
ವೃಷಭ ರಾಶಿ
ಶನಿಯ ನಕ್ಷತ್ರ ಪರಿವರ್ತನೆಯು ವೃಷಭ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶ ನೀಡಲಿದೆ. ಕೆಲಸದ ಜಾಗದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಅಪೂರ್ಣವಾಗಿ ಉಳಿದಿರುವ ಕೆಲಸಗಳು ಪೂರ್ಣವಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಸಂತೋಷ, ಒಳ್ಳೆಯ ಸುದ್ದಿ ಬರುತ್ತದೆ. ಅನಿರೀಕ್ಷಿತ ಲಾಭವಾಗುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶನಿಯ ಈ ಸಂಚಾರದ ಅವಧಿಯು ಶುಭ ಸಮಯವಾಗಿದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಸಿಗುತ್ತವೆ. ವೃತ್ತಿಯಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ. ವ್ಯಾಪಾರ–ವ್ಯವಹಾರ ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತದೆ. ಹೊಸ ಒಪ್ಪಂದಗಳು ಸಿಗುತ್ತವೆ. ನಿಮ್ಮ ಕನಸು ನನಸಾಗಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ.
ತುಲಾ ರಾಶಿ
ನಿಮಗೆ ಈ ಸಮಯವು ಸಂತೋಷದ ಸಮಯವಾಗಲಿದೆ. ತುಲಾ ರಾಶಿಯವರ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿದೆ. ಉಳಿತಾಯದ ಕಡೆಗೆ ಹೆಚ್ಚು ಗಮನಕೊಡುತ್ತೀರಿ. ಹೊಸ ಉದ್ಯಮ ಪ್ರಾರಂಭಿಸಲು ಇದು ಸಕಾಲ. ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಕುಟುಂಬದಲ್ಲಿ ಶುಭ ಘಟನೆಗಳು ಸಂಭವಿಸಬಹುದು.
ಧನು ರಾಶಿ
ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದಲ್ಲಿ ನಿಮ್ಮ ನಾಯಕತ್ವಗುಣ ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಆರ್ಥಿಕ ಸ್ಥತಿ ಸುಧಾರಿಸಲಿದೆ. ಕುಟುಂಬದ ಸುಲುವಾಗಿ ವಸ್ತುಗಳನ್ನು ಖರೀದಿಸಿಲಿದ್ದೀರಿ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲ ಸಿಗಲಿದೆ. ಭೂಮಿ, ಕಟ್ಟಡ, ವಾಹನ ಖರೀದಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಎಲ್ಲ ಕ್ಷೇತ್ರದಲ್ಲೂ ಅದೃಷ್ಟ ನಿಮ್ಮ ಜೊತೆಗೆ ಇರಲಿದೆ.
ಮಕರ ರಾಶಿ
ಶನಿಯ ಕ್ಷತ್ರ ಪರಿವರ್ತನೆಯ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ವೃತ್ತಿಜೀವನದಲ್ಲಿ ಉನ್ನತಿ ಮತ್ತು ಯಶಸ್ಸು ಸಾಧಿಸುತ್ತೀರಿ. ಸಂಗಾತಿಯ ಬೆಂಬಲದಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಹಳೆಯ ಹೂಡಿಕೆಯ ಮೇಲೆ ಉತ್ತಮ ಲಾಭ ಗಳಿಸುತ್ತೀರಿ. ನಿಮ್ಮ ಸಂಪತ್ತು ವೃದ್ಧಿಯಾಗಲಿದೆ.
Topics
ಸಂಬಂಧಿತ ಸುದ್ದಿಗಳು
astrology
ನಾವು ಧರಿಸುವ ಬಟ್ಟೆಗೂ, ನಕಾರಾತ್ಮಕ ಶಕ್ತಿಗೂ ಇದೆಯಾ ನಂಟು.. ವಾಸ್ತು ಶಾಸ್ತ್ರ ಹೇಳುವುದೇನು
astrology
ಆಗಸ್ಟ್ 18, 2026: ಶ್ರಾವಣ ಮಂಗಳವಾರದಂದು ಯಾವ ರಾಶಿಗೆ ಅದೃಷ್ಟ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಫಲ!
astrology
ಸೂರ್ಯ–ಕೇತು ಸಂಯೋಗ: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಪ್ರಾರಂಭ..!
astrology

