Kannada News Next

business

Gold Price 2027 : ಚಿನ್ನಪ್ರಿಯರಿಗೆ ಶಾಕಿಂಗ್ ನ್ಯೂಸ್: 2027ರಲ್ಲಿ 2 ಲಕ್ಷದ ಗಡಿದಾಟುತ್ತೆ ಚಿನ್ನದ ದರ, ಬಾಬಾ ವಂಗಾ ಭವಿಷ್ಯವಾಣಿ

ಮುಂದಿನ ದಿನಗಳಲ್ಲಿ ಎದುರಾಗುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಶೇಕಡಾ 25 ರಿಂದ 40ರಷ್ಟು ಬೆಲೆ ಏರಿಕೆ ಆಗಲಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
baba vanga prediction gold price 2027 forecast

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಆಯ್ತು ಅಂತ ನಿಟ್ಟುಸಿರು ಬಿಡುವ ಹೊತ್ತಲ್ಲೇ ಚಿನ್ನಪ್ರಿಯರಿಗೆ ಭರ್ಜರಿ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. 2027ಕ್ಕೆ ಪ್ರತೀ 10 ಗ್ರಾಂ ಚಿನ್ನದ ದರ ಬರೋಬ್ಬರಿ 2 ಲಕ್ಷದ ಗಡಿದಾಟುತ್ತೆ ಅಂತಾ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಸದ್ಯ ವಂಗಾ ಬಾಬಾ ಅವರ ಭವಿಷ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆಗಳು ನಡೆಯುತ್ತಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು, ಸಾಂಪ್ರದಾಯಿಕ ಬ್ಯಾಂಕಿಂಗ್‌ ಹೂಡಿಕೆಗಳ ಮೇಲಿನ ಜನರ ನಂಬಿಕೆ ಕಡಿಮೆ ಆಗಿದೆ. ಹೀಗಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತಿದೆ. ವಿಶ್ವದ ಮಾರುಕಟ್ಟೆಯಲ್ಲಿ ದಿನೇ ದಿನೇ ಚಿನ್ನದ ದರ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಈ ನಡುವಲ್ಲೇ ಬಲ್ಗೇರಿಯಾದ ಪ್ರಸಿದ್ಧ ಅತೀಂದ್ರಿಯ ತಜ್ಞೆ ಬಾಬಾ ವಂಗಾ 2027ರಲ್ಲಿ ಚಿನ್ನದ ಬೆಲೆ ಏರಿಕೆಯ ಕುರಿತು ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಚಿನ್ನದ ಬೆಲೆ ಎಲ್ಲಿಗೆ ತಲುಪುತ್ತೆ ಅನ್ನೋ ಮಾಹಿತಿ ಇಲ್ಲಿದೆ.

2027ಕ್ಕೆ ಬಾಬಾ ವಂಗಾ ಭವಿಷ್ಯವಾಣಿ ಏನು ?

ಮುಂದಿನ ದಿನಗಳಲ್ಲಿ ಎದುರಾಗುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಶೇಕಡಾ 25 ರಿಂದ 40ರಷ್ಟು ಬೆಲೆ ಏರಿಕೆ ಆಗಲಿದೆ. ಬಾಬಾ ವಂಗಾ ಅವರು ನಿರ್ದಿಷ್ಟ ಭವಿಷ್ಯವಾಣಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಅನ್ನೋದಕ್ಕೆ ಯಾವುದೇ ಲಿಖಿತ ದಾಖಲೆಗಳಿಲ್ಲ. ಆದರೂ ಇಂಟರ್‌ನೆಟ್‌ನಲ್ಲಿ ಬಾಬಾ ವಂಗಾ ಬಗ್ಗೆ ಚರ್ಚೆ ನಡೆಯುತ್ತಿದೆ.

2 ಲಕ್ಷದ ಗಡಿದಾಟುತ್ತೆ ಚಿನ್ನದ ದರ...!

ಹೌದು, ಆನ್‌ಲೈನ್‌ನಲ್ಲಿ ಬಿತ್ತರವಾಗುತ್ತಿರುವ ಕೆಲವೊಂದು ಅಂದಾಜು ವರದಿಗಳ ಪ್ರಕಾರ, 2027ರಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಬರೋಬ್ಬರಿ 2.62 ಲಕ್ಷ ರೂಪಾಯಿ ಯಿಂದ 2.82 ಲಕ್ಷ ರೂಪಾಯಿ ವರೆಗೆ (ಸುಮಾರು $2,733 ರಿಂದ $2,942) ತಲುಪುವ ನಿರೀಕ್ಷೆಯಿದೆ. ಇನ್ನೂ ಕೆಲವೊಂದು ಅಂದಾಜಿನ ಪ್ರಕಾರ 2.1 ಲಕ್ಷ ರೂಪಾಯಿ ಎಂದಿದೆ. ಆದರೆ ಚಿನ್ನದ ಬೆಲೆ ಬಹುತೇಕ ತಜ್ಞರ ಪ್ರಕಾರ 2 ಲಕ್ಷ ರೂಪಾಯಿ ಗಡಿದಾಟುವುದು ಪಕ್ಕಾ ಎನ್ನಲಾಗುತ್ತಿದೆ.

ಚಿನ್ನದ ದರ : ಹಣಕಾಸು ಸಂಸ್ಥೆಗಳ ಅಂದಾಜುಗಳೇನು ?

ಬಾಬಾ ವಂಗಾ ಮಾತ್ರವಲ್ಲದೇ ಹಲವು ಹಣಕಾಸು ಸಂಸ್ಥೆಗಳು ಕೂಡ ಚಿನ್ನದ ಬೆಲೆಯ ಕುರಿತು ಅಂದಾಜು ಮೌಲ್ಯವನ್ನು ತೆರೆದಿಟ್ಟಿವೆ. ಪ್ರಮುಖವಾಗಿ ವಿಶ್ವದ ಅತೀ ದೊಡ್ಡ ಬ್ಯಾಂಕ್‌ಗಳು ಎನಿಸಿರುವ ಜೆಪಿ ಮಾರ್ಗನ್‌ ((JPMorgan) ಯುಬಿಎಸ್ (UBS) ಮತ್ತು ಡಾಯ್ಚ ಬ್ಯಾಂಕ್ Deutsche Bank) ತಮ್ಮದೇ ಆಗಿರುವ ರೀತಿಯಲ್ಲಿ ವಿಶ್ಲೇಷಣೆಗಳನ್ನು ಮಾಡಿವೆ.

ಜೆ.ಪಿ. ಮಾರ್ಗನ್ (J.P. Morgan)

ಜೆಪಿ ಮಾರ್ಗನ್‌ ನೀಡಿರುವ ಮಾಹಿತಿಯಲ್ಲಿಯೂ ಚಿನ್ನದ ದರ 2027ಕ್ಕೆ 2 ಲಕ್ಷ ರೂಪಾಯಿಯ ಗಡಿ ದಾಟಲಿದೆ. 2026ರ ಕೊನೆಯ ತ್ರೈಮಾಸಿಕದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು $2,116.44 (₹1,84,883)ಕ್ಕೆ ಏರಿಕೆ ಆಗಲಿದೆ ಅಮತೆ. ಅಷ್ಟೇ ಅಲ್ಲದೇ 2027ರ ಅಂತ್ಯದ ವೇಳೆಗೆ ಪ್ರತೀ 10 ಗ್ರಾಂಗೆ $2,222 (₹2,13,125) ರಷ್ಟು ಏರಿಕೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಯುಬಿಎಸ್ (UBS):

ಯುಬಿಎಸ್‌ ಕೂಡ ಚಿನ್ನದ ಬೆಲೆಯನ್ನು ಅಂದಾಜಿಸಿದೆ. 2027ರ ವರ್ಷದ ಮೊದಲ ಅರ್ಧ ವರ್ಷಗಳ ಕಾಲ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ $1,763.70 (₹1,69,049) ಮಟ್ಟಕ್ಕೆ ತಲುಪುವ ನಿರೀಕ್ಷೆ ಹೊಂದಲಾಗಿದೆ.

ಡಾಯ್ಚ ಬ್ಯಾಂಕ್ (Deutsche Bank):

2026ರ ಅಂತಿಮ ಅವಧಿಯಲ್ಲಿ ಪ್ರತಿ 10 ಗ್ರಾಂಗೆ $1,622.60 (₹1,55,525) ಇರಲಿದ್ದು, 2027ರಲ್ಲಿಯೂ ಕೂಡ ಇದೇ ದರ ಮುಂದುವರಿಯುವ ಸಾಧ್ಯತೆಯಿದೆ ಎಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ದಿನೇ ದಿನೇ ಏರಿಳಿತವನ್ನು ಕಾಣುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಚಿನ್ನದ ದರ 24-ಕ್ಯಾರೆಟ್ ಪ್ರತಿ 10 ಗ್ರಾಂಗೆ ಸರಿಸುಮಾರು 1.46 ಲಕ್ಷದಿಂದ 1.50 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ.

ಯಾರು ಈ ಭವಿಷ್ಯಕಾರ ಬಾಬಾ ವಂಗಾ ?

ವಿಶ್ವದ ಭವಿಷ್ಯವಾಣಿಯ ವಿಚಾರದಲ್ಲಿ ಸದ್ಯ ಮುಂಚೂಣಿಯಲ್ಲಿ ಕೇಳಿಬರ್ತಾ ಇರೋ ಹೆಸರು ಬಾಬಾ ವಂಗಾ. 1911ರಲ್ಲಿ 'ವಾಂಗೆಲಿಯಾ ಪಾಂಡೇವ ಡಿಮಿಟ್ರೋವಾ' ಹೆಸರಿನಲ್ಲಿ ಜನಿಸಿದ ಬಾಬಾ ಬಂಗಾ, ಬಲ್ಗೇರಿಯಾದ ದೃಷ್ಟಿಹೀನ ಅತೀಂದ್ರಿಯ ಶಕ್ತಿಯುಳ್ಳ ಮಹಿಳೆ ಎನಿಸಿದ್ದರು. ತಾವು 12ನೇ ವಯಸ್ಸಿನಲ್ಲಿ ಸುಂಟರಗಾಳಿಯ ಹೊಡೆತಕ್ಕೆ ಸಿಲುಕಿ ತಮ್ಮ ದೃಷ್ಟಿಯನ್ನು ಕಳೆದುಕೊಂಡರು.

ಈ ಹಿಂದೆ ನಡೆದಿರುವ ಸೆಪ್ಟೆಂಬರ್‌ 11ರ ದಾಳಿ, ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು ಮತ್ತು 2004ರ ಸುನಾಮಿಗಳ ಬಗ್ಗೆ ಮೊದಲೇ ನಿಖರವಾಗಿ ಊಹಿಸಿದ್ದರು ಎನ್ನಲಾಗುತ್ತಿದೆ. ಆದರೆ ಬಾಬಾ ವಂಗಾ ಅವರ ಭವಿಷ್ಯವಾಣಿಯ ಬಗ್ಗೆ ಯಾವುದೇ ನಿಖರವಾಗಿರುವ ದಾಖಲೆಗಳಿಲ್ಲ, ಲಿಖಿತ ಪುರಾವೆಗಳು ಇಲ್ಲ.