MSMEಗಳಿಗೆ ಭರ್ಜರಿ ಗುಡ್‌ನ್ಯೂಸ್ : ಪಾವತಿ ವಿಳಂಬಕ್ಕೆ ಬ್ರೇಕ್, ವಿವಾದ ಪರಿಹಾರಕ್ಕೆ ಸಂಸತ್‌ ಅಸ್ತು

By Arun Gundmi | ಅರುಣ್‌ ಗುಂಡ್ಮಿ · Editor-in-Chief

3 min read

WhatsAppPost
msme payment delay dispute resolution bill 2026
msme payment delay dispute resolution bill 2026

ನವದೆಹಲಿ : ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ. ಎಂಎಸ್‌ಎಂಇಗಳಿಗೆ ಬಾಕಿ ಹಣ ತಡವಾಗುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯಮಿಗಳು ಮತ್ತು ಖರೀದಿದಾರರ ನಡುವಿನ ವಾಣಿಜ್ಯ ವಿವಾದಗಳನ್ನು ವೇಗವಾಗಿ ಬಗೆ ಹರಿಸುವ ಉದೇಶದಿಂದ ಸಂಸತ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಮೈಕ್ರೋ, ಸ್ಮಾಲ್‌ ಮತ್ತು ಮೀಡಿಯಂ ಎಂಟರ್‌ ಪ್ರೈಸಸ್‌ ಡೆವಲಪ್‌ ಮೆಂಟ್‌ ಬಿಲ್‌( Micro, Small and Medium Enterprises Development (Amendment) Bill) 2026ಗೆ ಸಂಸತ್ ಅನುಮೋದನೆ ದೊರೆತಿದೆ. ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ಇದಕ್ಕೂ ಮೊದಲು ರಾಜ್ಯಸಭೆಯಲ್ಲಿಯೂ ಬಿಲ್‌ ಪಾಸ್‌ ಆಗಿತ್ತು.

ಕೇಂದ್ರ ಸರಕಾರ ಈ ತಿದ್ದುಪಡಿಯ ಮೂಲಕ ಎಂಎಸ್‌ಎಂಇ ಉದ್ಯಮಿಗಳಿಗೆ ಪಾವತಿ ವ್ಯವಸ್ಥೆ, ವಿವಾದದ ಪರಿಹಾರ ಮತ್ತು ಬಾಕಿ ಮೊತ್ತ ವಸೂಲಾತಿ ಪ್ರಕ್ರಿಯೆಯ ಕುರಿತು ಕೆಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಖ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ.

MSMEಗಳಿಗೆ ಈ ಮಸೂದೆ ಯಾಕೆ ಮುಖ್ಯ ?

ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರಮುಖವಾಗಿ ಬಾಕಿ ಹಣ ವಾಪತಿ ವಿಳಂಭವಾಗುವುದೇ ದೊಡ್ಡ ಸಮಸ್ಯೆ ಆಗಿತ್ತು. ದೊಡ್ಡ ಸಂಸ್ಥೆಗಳು ಅಥವಾ ಸರ್ಕಾರಿ ಸಂಸ್ಥೆಗಳಿಗೆ ಸರಕು ಹಾಗೂ ಸೇವೆಗಳನ್ನು ಒದಗಿಸಿದ ನಂತರ ಹಣ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಸಣ್ಣ ಉದ್ಯಮಗಳ ನಗದು ಹರಿವಿನ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ಎಂಎಸ್ಎಂಇಗಳಿಗೆ ವ್ಯವಹಾರ ನಡೆಸುವ ಸಂದರ್ಭದಲ್ಲಿ ದೈನಂದಿನ ಖರ್ಚು, ಸಿಬ್ಬಂಧಿಯ ವೇತನ, ಕಚ್ಚಾ ವಸ್ತುಗಳ ಖರೀದಿ, ಸಾಲ ಮರುಪಾವತಿಗೆ ಹಣದ ಹರಿವು ಅಗತ್ಯವಾಗಿ ಇರುವುದರಿಂದ ವಾಪತಿ ವಿಳಂಭ ಎಂಎಸ್ಎಂಇಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದೇ ಕಾರಣದಿಂದಲೇ ಹೊಸ ತಿದ್ದುಪಡಿ ಮಸೂದೆಯ ಪ್ರಮುಖ ಗಮನ ಪಾವತಿ ಪ್ರತಿಕ್ರಿಯೆಗೆ ಹೆಚ್ಚು ವ್ಯವಸ್ಥಿತಗೊಳಿಸುವುದು ಮತ್ತು ವಿವಾದಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಸರ್ಕಾರಿ ಸಂಸ್ಥೆಗಳ ಪಾವತಿಗೆ TReDS ಬಳಕೆ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಮಸೂದೆಯ ಪ್ರಕಾರ, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳು MSMEಗಳಿಂದ ಸರಕು ಅಥವಾ ಸೇವೆಗಳನ್ನು ಖರೀದಿಸಿದಾಗ ಉಂಟಾಗುವ ಇನ್‌ವಾಯ್ಸ್‌ಗಳ ಪಾವತಿಯನ್ನು Trade Receivables Discounting System (TReDS) ಮೂಲಕ ಇತ್ಯರ್ಥಪಡಿಸುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ.

ಟಿಆರ್‌ಇಡಿಎಸ್‌ (TReDS) ಅನ್ನೋದು MSMEಗಳ ಬಾಕಿ ಇನ್‌ವಾಯ್ಸ್‌ಗಳನ್ನು ಹಣಕಾಸು ಸಂಸ್ಥೆಗಳ ನೆರವಿನಿಂದ ಶೀಘ್ರವಾಗಿ ಹಣವಾಗಿ ಪರಿವರ್ತಿಸಿಕೊಳ್ಳಲು ಸಹಾಯ ಮಾಡುವ ವ್ಯವಸ್ಥೆಯಾಗಿದೆ. ಇನ್ನೂ ಸರಳವಾಗಿ ಹೇಳಬೇಕಾದ್ರೆ, MSME ಸಂಸ್ಥೆಯೊಂದು ಸರ್ಕಾರಿ ಅಥವಾ ದೊಡ್ಡ ಸಂಸ್ಥೆಗೆ ಸರಕು ಅಥವಾ ಸೇವೆ ನೀಡಿದ್ದು, ಅದರ ಹಣ ಪಾವತಿ ತಡವಾಗುತ್ತಿದ್ದರೆ, ಆ ಬಾಕಿ ಮೊತ್ತವನ್ನು ಆಧರಿಸಿ ಹಣಕಾಸು ವ್ಯವಸ್ಥೆಯ ಮೂಲಕ ಮುಂಚಿತವಾಗಿ ಹಣ ಪಡೆಯಲು TReDS ನೆರವಾಗುತ್ತದೆ. ಇದರಿಂದಾಗಿ ಸಣ್ಣ ಉದ್ಯಮಿಗಳಿಗೆ ಕ್ಯಾಶ್‌ಪ್ಲೋ ನಿರ್ವಹಣೆ ಇನ್ನಷ್ಟು ಸುಲಭವಾಗಲಿದೆ.

MSME ವಿವಾದ ಇತ್ಯರ್ಥಕ್ಕೆ ವೇಗದ ಪರಿಹಾರ ?

ಎಂಎಸ್‌ಎಂಇ (MSME) ಕ್ಷೇತ್ರದಲ್ಲಿ ಹಣ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೊಮ್ಮೆ ವಿವಾದಗಳು ಉಂಟಾದರೆ ಅವುಗಳನ್ನು ಪರಿಹರಿಸುವ ಪ್ರಕ್ರಿಯೆಯನ್ನು ತಿದ್ದುಪಡಿ ಮೂಸದೆಯ ಮೂಲಕ ಸಮಯಬದ್ದಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಯಾವುದೇ ವಿವಾದಗಳು ಉಂಟಾದ ಸಂದರ್ಭದಲ್ಲಿ ಆರಂಭಿಕ ಹಂತಲ್ಲಿ ಮಧ್ಯಸ್ಥಿಕೆ (Mediation) ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ.

ಒಂದೊಮ್ಮೆ ಮಧ್ಯಸ್ಥಿಕೆಯ ಮೂಲಕ ಪರಿಹಾರ ಪಡೆಯವುದಕ್ಕೆ ಸಾಧ್ಯವಾಗದೇ ಇದಲ್ಲಿ, ಮುಂದಿನ ಹಂತದ ಕಾನೂನು ಪ್ರಕ್ರಿಯೆಗೆ ಪ್ರಕರಣವನ್ನು ಕಳುಹಿಸುವುದಕ್ಕೂ ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ. ಇನ್ನು ಮಧ್ಯಸ್ಥಿಕೆ ಪ್ರಕ್ರಿಯೆ ಮುಕ್ತಾಯಗೊಂಡ ದಿನದಿಂದ 30 ದಿನಗಳ ಒಳಗಾಗಿ ಆರ್ಬಿಟ್ರೇಷನ್‌ಗೆ (Arbitration)ಪ್ರಕರಣವನ್ನು ಕಳುಹಿಸಿ ಪರಿಹಾರವನ್ನು ದೊರಕಿಸಲಾಗುತ್ತದೆ.

ಇಷ್ಟು ಸಮಯದವರೆಗೆ ಉಂಟಾಗುತ್ತಿದ್ದ ಸಮಸ್ಯೆಗಳ ಪರಿಹಾರಕ್ಕೆ ಇದು ಹೆಚ್ಚು ಸಹಕಾರಿಯಾಗಲಿದೆ. ಯಾವುದೇ ವಿವಾದವು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುವಲ್ಲಿ ಅನಗತ್ಯ ವಿಳಂಭವನ್ನು ಕಡಿಮೆ ಮಾಡುವ ಉದ್ದೇಶದಿಂದ ಮಸೂದೆಯಲ್ಲಿ ಬದಲಾವಣೆಯನ್ನು ತರಲಾಗಿದೆ.

ಆರ್ಬಿಟ್ರೇಷನ್ ತೀರ್ಪಿಗೂ 90 ದಿನಗಳ ಗಡುವು

ಮಸೂದೆಯಲ್ಲಿ ಆರ್ಬಟ್ರೇಷನ್‌ ಅವಕಾಶ ನೀಡಿರುವುದು ಮಾತ್ರವಲ್ಲ, ಇದರಲ್ಲಿನ ಪ್ರಮುಖ ಅಂಶವೆಂದರೆ, ಆರ್ಬಿಟ್ರೆಷನ್‌ ಪ್ರಕ್ರಿಯೆಯ ತೀರ್ಪನ್ನು ನೀಡುವ ಸಮಯಕ್ಕೆ ದಿನವನ್ನು ನಿಗದಿ ಪಡಿಸಲಾಗಿದೆ. ಎರಡೂ ಕಡೆಯವರೆ ವಾದ ವಿವಾದಗಳನ್ನು ಆಲಿಸಿ ಅಥವಾ pleadings ಪೂರ್ಣಗೊಂಡ ನಂತರ 90 ದಿನಗಳ ಒಳಗಾಗಿ ಆರ್ಬಿಟ್ರೇಷನ್ ತೀರ್ಪು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಸಣ್ಣ ಉದ್ಯಮಗಳಿಗೆ ದೀರ್ಘಕಾಲದ ಕಾನೂನು ವಿವಾದಗಳು ಆರ್ಥಿಕವಾಗಿ ದೊಡ್ಡ ಹೊರೆ ಆಗಬಹುದು. ಇದೇ ಕಾರಣದಿಂದಲೇ ವಿವಾದಗಳ ಪರಿಹಾರಕ್ಕೆ ಸಮಯದ ಮಿತಿಯನ್ನು ನಿಗದಿ ಪಡಿಸಲಾಗಿದ್ದು, ಪ್ರಕರಣವನ್ನು ಹೆಚ್ಚು ವೇಗವಾಗಿ ಮುಗಿಸಲು ಸಾಧ್ಯವಾಗಲಿದೆ ಅನ್ನೋ ನಿರೀಕ್ಷೆಯನ್ನು ಹೊಂದಲಾಗಿದೆ.

6 ತಿಂಗಳಿಗಿಂತ ಹೆಚ್ಚು ಪ್ರಕರಣ ಬಾಕಿ ಇದ್ದರೆ 50% ಹಣ?

ಎಂಎಸ್ಎಂಇಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಸೂದೆಯಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗಿದೆ. ಆರ್ಬಿಟ್ರೆಷನ್‌ ಜೊತೆಗೆ ಯಾವುದೇ ಪ್ರಕರಣ 6 ತಿಂಗಳಿಗಿಂತಲೂ ಹೆಚ್ಚು ಕಾಲ ಬಾಕಿ ಉಳಿದಿದ್ದರೆ, ಅಂತ ಪ್ರಕರಣದಲ್ಲಿ, ತೀರ್ಪಿನಲ್ಲಿ ನಿಗದಿ ಪಡಿಸಲಾಗಿರುವ ಶೇಕಡಾ 50 ರಷ್ಟು ಮೊತ್ತವನ್ನು ಪೂರೈಕೆದಾರರಿಗೆ ಪಾವತಿಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಎಂಎಸ್ಎಂಇ ಪೂರೈಕೆದಾರರು ಸಂಪೂರ್ಣ ಹಣವನ್ನು ನಿಗದಿತ ಅವಧಿಯಲ್ಲಿ ಪಡೆಯಲು ಸಹಕಾರಿಯಾಗಲಿದೆ.

ಸಣ್ಣ ಉದ್ಯಮಿಗಳಿಗೆ ಇದರ ಪರಿಣಾಮ ಏನು?

ಮುಖ್ಯವಾಗಿ ಎಂಎಸ್‌ಎಂಇ (MSME) ವಲಯದಲ್ಲಿ ವ್ಯವಹಾರ ನಡೆಸುವ ಸಂಸ್ಥೆಗಳಿಗೆ ಹಣದ ಹರಿವು ಬಹಳ ಮುಖ್ಯ. ದೊಡ್ಡ ಕಂಪೆನಿಗಳಿ ಅಥವಾ ಸರಕಾರಿ ಸಂಸ್ಥೆಗಳಿಂದ ಬರಬೇಕಾಗಿರುವ ಹಣ ವಿಳಂಭವಾದ್ರೆ, ಅದೇ ಹಣವನ್ನು ಅವಲಂಬಿಸಿರುವ ಸಣ್ಣ ಉದ್ಯಮಗಳ ದಿನನಿತ್ಯದ ಕಾರ್ಯಾಚರಣೆಯ ಮೇಲೆಯೂ ಪರಿಣಾಮ ಬೀರಲಿದೆ.

ಹೊಸ ತಿದ್ದುಪಡಿಯಲ್ಲಿರುವ ಪಾವತಿ, ವಿವಾದ ಪರಿಹಾರಕ್ಕೆ ಸಂಬಂಧಿಸಿದಂತೆ ಸಮಯದ ಮಿತಿ ಜಾರಿ ಆದ್ರೆ ಬಾಕಿ ಹಣ ಪಡೆಯುವ ಪ್ರಕ್ರಿಯೆಗೆ ಇನ್ನಷ್ಟು ವೇಗ ಸಿಗಲಿದೆ. ಪಾವತಿ ವಿಳಂಬದಿಂದ ಎಂಎಸ್‌ಎಂಇಗಳಿಗೆ ಉಂಟಾಗುವ ಒತ್ತಡವೂ ಕಡಿಮೆಯಾಗಲಿದೆ. ವಿವಾದಗಳು ದೀರ್ಘ ಕಾಲದಿಂದ ಬಾಕಿ ಉಳಿದಿರುವುದನ್ನು ತಡೆಯುವುದಕ್ಕೂ ಕೂಡ ಸಹಕಾರಿಯಾಗಲಿದೆ.

ಎಂಎಸ್ಎಂಗೆ ಸಂಬಂಧಿಸಿದ ಮಸೂದೆ ಜಾರಿ ಯಾವಾಗ ?

ಈಗಾಗಲೇ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತಿರುವುದು ಎಂಎಸ್‌ಎಂಇ ವಲಯಕ್ಕೆ ಹೆಚ್ಚು ಅನುಕೂಲವನ್ನು ಕಲ್ಪಿಸಿಕೊಡಲಿದೆ. ಮೂಸೂದೆ ಜಾರಿಯಾಗಿದ್ದು, ಎಂಎಸ್ಎಂಇಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇನ್ನು ವಿಶೇಷವಾಗಿ TReDS ಮೂಲಕ ಪಾವತಿ, ಮಧ್ಯಸ್ಥಿಕೆ ವಿಫಲವಾದ ನಂತರ 30 ದಿನಗಳ ಗಡುವು, ಆರ್ಬಿಟ್ರೇಷನ್ ತೀರ್ಪಿಗೆ 90 ದಿನಗಳ ಗಡುವು ಹಾಗೂ ಆರು ತಿಂಗಳಿಗಿಂತ ಹೆಚ್ಚು ಬಾಕಿ ಇರುವ ಪ್ರಕರಣಗಳಲ್ಲಿ 50 ಪ್ರತಿಶತ ಪಾವತಿ ಕುರಿತ ನಿಯಮಗಳ ಅನುಷ್ಠಾನ MSME ಉದ್ಯಮಿಗಳಿಗೆ ವರದಾನವಾಗುವುದು ಖಚಿತ.

ಒಟ್ಟಿನಲ್ಲಿ ಸಣ್ಣ, ಮಧ್ಯಮ ಕೈಗಾರಿಕಗಳನ್ನು ನಡೆಸುವ ಉದ್ಯಮಿಗಳಿಗೆ ಬಾಕಿ ಹಣ ಪಾವತಿಯೇ ದೊಡ್ಡ ತಲೆನೋವಾಗಿತ್ತು. ಆದರೆ ಇದೀಗ ಸಣ್ಣ ಉದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರಕಾರ ಮಸೂದೆ ಜಾರಿಯ ಮೂಲಕ ಪರಿಹಾರ ಕಲ್ಪಿಸಿದೆ. ಮಸೂದೆ ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಮಸೂದೆಯ ಮುಖ್ಯಾಂಶಗಳು (MSME Development (Amendment) Bill, 2026

  1. ಮುಖ್ಯ ಉದ್ದೇಶ: ಪಾವತಿ ವಿಳಂಬ ಮತ್ತು ವಿವಾದ ಪರಿಹಾರಕ್ಕೆ ವೇಗ

  2. TReDS: MSME ಬಾಕಿ ಇನ್‌ವಾಯ್ಸ್‌ಗಳ ಪಾವತಿಗೆ ವ್ಯವಸ್ಥೆ

  3. ಮಧ್ಯಸ್ಥಿಕೆ ವಿಫಲವಾದರೆ: 30 ದಿನಗಳೊಳಗೆ ಆರ್ಬಿಟ್ರೇಷನ್‌ಗೆ ಉಲ್ಲೇಖ

  4. ಆರ್ಬಿಟ್ರೇಷನ್ ತೀರ್ಪು: pleadings ಪೂರ್ಣಗೊಂಡ ಬಳಿಕ 90 ದಿನಗಳೊಳಗೆ

  5. 6 ತಿಂಗಳಿಗಿಂತ ಹೆಚ್ಚು ಬಾಕಿ ಪ್ರಕರಣ: ತೀರ್ಪಿನ ಮೊತ್ತದ ಕನಿಷ್ಠ 50% ಪಾವತಿ

Topics

ಸಂಬಂಧಿತ ಸುದ್ದಿಗಳು