ಏರ್ ಇಂಡಿಯಾ ಪೈಲಟ್ ಡೋಪ್ ಟೆಸ್ಟ್‌ನಲ್ಲಿ ಫೇಲ್ , ವಿಮಾನದ ಪೈಲಟ್‌ಗೆ ಶಾಕ್
ಕಳೆದ ಆಗಸ್ಟ್ 4ರಂದು ಥಾಯ್ಲೆಂಡ್‌ನ ಫುಕೆಟ್‌ನಿಂದ ದೆಹಲಿಗೆ ಏರ್ ಇಂಡಿಯಾದ AI2379 ವಿಮಾನ ತೆರಳಿತ್ತು. ಈ ವೇಳೆಯಲ್ಲಿ ಬಾರೀ ಟರ್ಬುಲೆನ್ಸ್ ಸಂಭವಿಸಿತ್ತು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ನವದೆಹಲಿ: ಏರ್ ಇಂಡಿಯಾ ಫೈಲೆಟ್ ವಿಚಾರದಲ್ಲಿ ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯ ವಿಮಾನ ಭೀಕರ ಟರ್ಬುಲೆನ್ಸ್‌ಗೆ ಸಿಲುಕಿತ್ತು. ಈ ವೇಳೆಯಲ್ಲಿ ಏರ್ ಇಂಡಿಯಾ ವಿಮಾನದ ಪೈಲಟ್ ಡೋಪ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವ ಕುರಿತು ಎನ್‌ಡಿ ಟಿವಿ ವರದಿ ಮಾಡಿದೆ.
ಕಳೆದ ಆಗಸ್ಟ್ 4ರಂದು ಥಾಯ್ಲೆಂಡ್‌ನ ಫುಕೆಟ್‌ನಿಂದ ದೆಹಲಿಗೆ ಏರ್ ಇಂಡಿಯಾದ AI2379 ವಿಮಾನ ತೆರಳಿತ್ತು. ಈ ವೇಳೆಯಲ್ಲಿ ಬಾರೀ ಟರ್ಬುಲೆನ್ಸ್ ಸಂಭವಿಸಿತ್ತು. ಈ ವೇಳೆಯಲ್ಲಿ ವಿಮಾನದಲ್ಲಿ ಸುಮಾರು 137 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಆದರೆ ಟರ್ಬುಲೆನ್ಸ್‌ನಿಂದ ವಿಮಾನ ಏಕಾಏಕಿ ಎತ್ತರ ಕಳೆದುಕೊಂಡಿತ್ತು. ಈ ವೇಳೆಯಲ್ಲಿ 13 ಅಧಿಕ ಪ್ರಯಾಣಿಕರು ಹಾಗೂ 4 ಮಂದಿ ಸಿಬ್ಬಂಧಿ ಗಾಯಗೊಂಡಿದ್ದರು.
ಘಟನೆಯ ಬೆನ್ನಲ್ಲೇ ವಿಮಾನದ ಫೈಲೆಟ್‌ಗಳಿಗೆ ಪೋಸ್ಟ್ ಪ್ಲೈಟ್ ಡೋಪ್ ಟೆಸ್ಟ್ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ವಿಮಾನದ ಕಮಾಂಡರ್ ಸೈಕೋ ಆಕ್ಟಿವ್ ವಸ್ತುಗಳನ್ನು ಸೇವನೆ ಮಾಡಿದ್ದು, ಈ ಕಾರಣದಿಂದಲೇ ಪಾಸಿಟಿವ್ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅಧಿಕೃತವಾಗಿ ಏರ್‌ಇಂಡಿಯಾ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಅಷ್ಟೇ ಅಲ್ಲಾ, ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಲು ಏರ್ ಇಂಡಿಯಾ ನಿರಾಕರಿಸಿದೆ. ಅಷ್ಟೇ ಅಲ್ಲದೇ ಡೋಪಿಂಗ್ ಪರೀಕ್ಷೆಯ ವರದಿ ಕೂಡ ಇನ್ನೂ ಏರ್ ಇಂಡಿಯಾ ಸಂಸ್ಥೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ಪರೀಕ್ಷೆಯ ವರದಿಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಏರ್‌ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ಫೈಲೆಟ್‌ಗಳ ವಿರುದ್ದ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಇಬ್ಬರು ಫೈಲೆಟ್‌ಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ವಿಮಾನ ಹಾರಾಟದ ಕರ್ತವ್ಯದಿಂದ ದೂರ ಇಡಲಾಗಿದೆ.
ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ, ಸಿಬ್ಬಂದಿ ಸದಸ್ಯರು ಕಾಲ ಕಾಲಕ್ಕೆ ಡ್ರಗ್ ಟೆಸ್ಟಿಂಗ್‌ಗೆ ಕಡ್ಡಾಯವಾಗಿ ಒಳಗಾಗ ಬೇಕು. ಒಂದೊಮ್ಮೆ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಡ್ರಗ್ ಟೆಸ್ಟ್ ಪಾಸಿಟಿವ್ ಬಂದ್ರೆ, ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ, ನೆಗೆಟಿವ್ ಬಂದ ನಂತರವೇ ಮತ್ತೆ ಕತ್ಯವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ.
ಆದರೆ ಎರಡನೇ ಬಾರಿಯೂ ಕೂಡ ನಿಯಮ ಉಲ್ಲಂಘನೆ ಮಾಡಿದ್ರೆ ಅಂತಹ ಫೈಲೆಟ್ ಲೈಸೆನ್ಸ್ ಅನ್ನು ಮೂರು ವರ್ಷಗಳವರೆಗೆ ಅಮಾನತುಗೊಳಿಸಲಾಗುತ್ತದೆ. ಅಷ್ಟೇ ಅಲ್ಲದೇ ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದ್ರೆ, ಕಡ್ಡಾಯವಾಗಿ ಲೈಸೆನ್ಸ್ ಅನ್ನು ಸಂಪೂರ್ಣವಾಗಿ ರದ್ದು ಮಾಡುವ ಸಾಧ್ಯತೆಯಿದೆ ಎಂದು ಎನ್‌ಡಿ ಟಿವಿ ತನ್ನ ವರದಿಯಲ್ಲಿ ತಿಳಿಸಿದೆ.
ಕೆಲವು ವೈದ್ಯಕೀಯ ಔಷಧಿಗಳ ಸೇವೆಯಿಂದಲೂ ಪರೀಕ್ಷೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಫೈಲೆಟ್ ಗಳು ಯಾವುದೇ ಔಷಧಿ ಸೇವನೆ ಮಾಡುತ್ತಿದ್ದರೆ ಪರೀಕ್ಷೆಗೂ ಮೊದಲೇ ಈ ಕುರಿತು ಮಾಹಿತಿಯನ್ನು ನೀಡಬೇಕಾಗುತ್ತದೆ. ಇದೀಗ ಏರ್ ಇಂಡಿಯಾ ವಿಮಾನದಲ್ಲಿ ಸಂಭವಿಸಿದ ಘಟನೆಯ ಕುರಿತು ವಿಮಾನಯಾನ ನಿಯಂತ್ರಕ ಸಂಸ್ಥೆ ತನಿಖೆಯನ್ನು ಆರಂಭಿಸಿದೆ.
Topics
ಸಂಬಂಧಿತ ಸುದ್ದಿಗಳು
india
ಕೇಂದ್ರ ಸರ್ಕಾರ : ರಾಮಮಂದಿರ ನಿರ್ಮಾಣ ದೇಣಿಗೆಯಲ್ಲಿಲ್ಲ ಅವ್ಯವಹಾರ
india
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಗರಿಷ್ಠ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ
india
ಮರೆಯಾಯ್ತಾ ಮಾನವೀಯತೆ..! ತಂದೆ ಅಂತ್ಯಕ್ರಿಯೆಗೆ 5 ಸಾವಿರ ಕೊಟ್ಟು ಕೈತೊಳೆದುಕೊಂಡ ಮಕ್ಕಳು, ವಿಡಿಯೋ ಕಾಲ್ನಲ್ಲಿ ಅಂತ್ಯಕ್ರಿಯೆ ವೀಕ್ಷಣೆ
india

